ಚಿಕ್ಕಮಗಳೂರು: ಗಿರಿ ಶ್ರೇಣಿಯ ಮಾರ್ಗದ ಕವಿಕಲ್ಗಂಡಿ ಬಳಿ ಗುಡ್ಡದ ಮಣ್ಣು ಕುಸಿದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ಕೆಲ ವಾಹನಗಳು ಮಾರ್ಗಮಧ್ಯೆ ಸಿಲುಕಿವೆ. ಹಿಂದಕ್ಕೆ– ಮುಂದೆಕ್ಕೆ ಚಲಲಿಸಲಾಗದೆ ನಿಂತಲ್ಲೇ ನಿಂತಿವೆ.

‘ಮಣ್ಣಿನ ರಾಶಿ, ದೊಡ್ಡ ಕಲ್ಲುಗಳು ರಸ್ತೆಗೆ ಬಿದ್ದಿವೆ. ಶ್ರೀಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿದರ್ಗಾ ಕಡೆಗೆ ಸಾಗುವ ರಸ್ತೆಯಲ್ಲಿ ವಾಹನಗಳ ಸಂಚಾರ ಸ್ಥಗಿತವಾಗಿದೆ’ ಎಂದು ಸ್ಥಳೀಯ ಸಂತೋಷ್ ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಮಣ್ಣಿನ ರಾಶಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಗಿರಿಶ್ರೇಣಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳಿಗ್ಗೆಯಿಂದಲೂ ಜಿಟಿಜಿಟಿ ಮಳೆ ಇತ್ತು. ನೀರು ಬಿದ್ದು ಗುಡ್ಡ ಸಡಿಲಗೊಂಡು ಮಣ್ಣು ಕುಸಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.