ಚಿಕ್ಕಮಗಳೂರು: ನಗರ ಸೇರಿ ಹಲವು ಪಟ್ಟಣಗಳಲ್ಲಿ ಬೀದಿ ದೀಪಗಳ ನಿರ್ವಹಣೆ ಕೊರತೆಯಿಂದ ಕತ್ತಲಿನಲ್ಲೇ ಜನ ಸಂಚಾರ ಮಾಡುವಂತಾಗಿದೆ.

ಮೂಡಿಗೆರೆ, ಎನ್.ಆರ್.ಪುರ, ಕಡೂರು, ತರೀಕೆರೆ, ಕೊಪ್ಪ ಪಟ್ಟಣಗಳಲ್ಲಿ ಬೀದಿ ದೀಪ ನಿರ್ವಹಣೆಯಾಗದೆ ಜನ ತೊಂದರೆ ಅನುಭವಿಸುತ್ತಿದ್ದಾರೆ.

ನಗರದಲ್ಲಿ ಕಡೂರು–ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತಿದ್ದು, ದಂಡರಮಕ್ಕಿ ಕೆರೆಯಿಂದ ಕಡೂರು ಕಡೆಗೆ ಹೋಗುವ ರಸ್ತೆಯಲ್ಲಿ ಬೀದಿ ದೀಪವನ್ನೇ ಅಳವಡಿಕೆ ಮಾಡಿಲ್ಲ.

ಕತ್ತಲಿನಲ್ಲಿ ಪ್ರತಿನಿತ್ಯ ಸಣ್ಣಪುಟ್ಟ ಅಪಘಾತಗಳು ಸಂಭವಿಸಿದ್ದು, ಅದರೂ ಬೀದಿ ದೀಪ ಅಳವಡಿಕೆ ಮಾಡಲು ಕ್ರಮ ಕೈಗೊಂಡಿಲ್ಲ. ದಂಟರಮಕ್ಕಿ ಕೆರೆ ಏರಿಯ ಮೇಲೆ ಲಾರಿಗಳನ್ನೂ ನಿಲ್ಲಿಸುತ್ತಿದ್ದು, ದೂರದಿಂದಲೇ ಕಾಣಿಸದೆ ಅದು ಕೂಡ ಅಪಘಾತಕ್ಕೆ ಕಾರಣವಾಗುತ್ತಿದೆ.

ನಗರದ ಮಧ್ಯಭಾಗದಲ್ಲೇ ಇರುವ ಕೆರೆ ಏರಿಯ ಮೇಲೆ ಸಂಜೆಯ ಬಳಿಕ ನಡೆದು ಸಾಗಲು ಜನ ಭಯಪಡುವ ಸ್ಥಿತಿ ಇದೆ. ದಂಟರಮಕ್ಕಿ, ಜ್ಯೋತಿನಗರ, ಕಲ್ಯಾಣನಗರ ಸೇರಿ ಹಲವು ಬಡಾವಣೆಗಳಿಗೆ ಹೋಗುವ ಜನ ಈ ರಸ್ತೆಯಲ್ಲೇ ಸಾಗುತ್ತಾರೆ. ಆದರೆ, ಬೀದಿ ದೀಪ ಇಲ್ಲದಿರುವುದು ತೊಂದರೆಯಾಗಿ ಕಾಡುತ್ತಿದೆ. ಕೂಡಲೇ ಬೀದಿ ದೀಪಗಳನ್ನು ಅಳವಡಿಕೆ ಮಾಡಬೇಕು ಎಂಬುದು ಸ್ಥಳೀಯರ ಒತ್ತಾಯ.

ಉಂಡೇದಾಸರಹಳ್ಳಿ, ಕಲ್ಯಾಣನಗರ, ಫಯಾಸ್ ಕಾಂಪೌಂಡ್ ಅಲ್ಲಲ್ಲಿ ಬೀದಿ ದೀಪಗಳು ಹಾಳಾಗಿದ್ದು, ನಿರ್ವಹಣೆ ಕೊರತೆಯಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ.

ಪೂರಕ ಮಾಹಿತಿ: ಬಾಲು ಮಚ್ಚೇರಿ, ಕೆ.ನಾಗರಾಜ್, ಕೆ.ವಿ.ನಾಗರಾಜ್, ರವಿಕುಮಾರ್ ಶೆಟ್ಟಿಹಡ್ಲು

ಬೆಳಕು ನೀಡದ ಬೀದಿ ದೀಪಗಳು

ನರಸಿಂಹರಾಜಪುರ: ಪಟ್ಟಣದ ವ್ಯಾಪ್ತಿಯಲ್ಲಿ ಅಳವಡಿಸಿರುವ ಬೀದಿ ದೀಪಗಳಲ್ಲಿ ಹಲವು ಕಡೆ ಬೀದಿ ದೀಪಗಳು ಹಾಳಾಗಿದ್ದು ಅದು ಬೆಳಕು ನೀಡಲು ವಿಫಲವಾಗಿದೆ. ಪ್ರಮುಖವಾಗಿ ಪಟ್ಟಣದ ವ್ಯಾಪ್ತಿಯಲ್ಲಿ ಕಳೆದ ಕೆಲವು ತಿಂಗಳ ಹಿಂದೆ ಮಹಾರಾಷ್ಟ್ರದ ಕಂಪನಿಯೊಂದು ಪಟ್ಟಣದ ಪ್ರಮುಖ ರಸ್ತೆಯು ಸೇರಿದಂತೆ ಹಲವು ಬಡಾವಣೆಗಳಲ್ಲಿ ಎಲ್ಇಡಿ ಬಲ್ಬ್ಗಳನ್ನು ಅಳವಡಿಸಿತ್ತು. ಅದರಲ್ಲಿ ಬಹುತೇಕ ಬಡಾವಣೆಯಲ್ಲಿ ದೀಪಗಳು ಹಾಳಾಗಿದ್ದು ಕಂಪನಿ ಇವುಗಳನ್ನು ದುರಸ್ತಿಪಡಿಸುವ ಕೆಲಸ ಮಾಡಿಲ್ಲ. ಹಾಗಾಗಿ ರಾತ್ರಿ ವೇಳೆ ಹಲವು ಕಡೆ ಕತ್ತಲಲ್ಲೇ ಜನ ಸಂಚರಿಸಬೇಕಾಗಿದೆ. ಕೆಲವು ಗ್ರಾಮಗಳ ವ್ಯಾಪ್ತಿಯಲ್ಲೂ ಬೀದಿ ದೀಪದ ವ್ಯವಸ್ಥೆ ಸಮರ್ಪಕವಾಗಿಲ್ಲ. ಹಾಳಾದರೂ ದುರಸ್ತಿ ಕಾರ್ಯ ನಡೆದಿಲ್ಲ.

ಸಮರ್ಪಕ ನಿರ್ವಹಣೆ ಇಲ್ಲ

ಕೊಪ್ಪ: ತಾಲ್ಲೂಕಿನಲ್ಲಿ 22 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಹಲವು ಗ್ರಾಮಗಳಲ್ಲಿ ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಬಹುತೇಕ ಕಡೆಗಳಲ್ಲಿ ಕೆಟ್ಟು ಹೋದ ಬಲ್ಬ್ಗಳನ್ನು ಬದಲಾವಣೆ ಮಾಡುತ್ತಿಲ್ಲ. ಸ್ಥಳೀಯ ಪಂಚಾಯಿತಿಗೆ ತಿಳಿಸಿದರೂ ಸಂಬಂಧಿಸಿದವರು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬ ದೂರುಗಳಿವೆ. ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೊಸದಾಗಿ ಬೀದಿ ದೀಪಗಳ ಅಳವಡಿಕೆಗೆ ಪಟ್ಟಿ ಮಾಡಿಕೊಂಡಿದ್ದಾರೆ. ನರಸೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿ ಬ್ರಹ್ಮನಕೋಡು ಕೆಸುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಸುವೆ ಮತ್ತಿತರೆ ಕಡೆಗಳಲ್ಲಿ ಬೀದಿ ದೀಪಗಳ ನಿರ್ವಹಣೆಯಾಗುತ್ತಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ‘ಅತ್ತಿಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 5 ವಿದ್ಯುತ್ ಕಂಬ ಅಳವಡಿಸಲಾಗಿದೆ ಎಂದು ಬಿಲ್ ಪಡೆಯಲಾಗಿದೆ. ಸ್ಥಳೀಯರೊಬ್ಬರು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದಾಗ 3 ಕಂಬ ಅಳವಡಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ವಾಸ್ತವವಾಗಿ ಒಂದೇ ಕಂಬ ಅಳವಡಿಸಲಾಗಿದೆ’ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸೋಲಾರ್ ದೀಪ ಅಳವಡಿಸಿ ಒಂದು ವರ್ಷದೊಳಗೆ ಕೆಟ್ಟು ಹೋಗಿದ್ದು ನಿರ್ವಹಣೆ ಸಮರ್ಪಕವಾಗಿಲ್ಲ ಎಂದು ದೂರಿದರು.

ರೈಲು ಪ್ರಯಾಣಿಕರಿಗೆ ತೊಂದರೆ

ಕಡೂರು: ಪಟ್ಟಣದಲ್ಲಿ ಬೀದಿದೀಪದ ಸಮಸ್ಯೆ ಇದ್ದರೆ ಗ್ರಾಮಿಣ ಭಾಗದಲ್ಲಿ ದಿನದ 24 ಗಂಟೆಯೂ ಉರಿಯುವುದು ಇಲ್ಲಿನ ವಿಶೇಷ. ರೈಲು ನಿಲ್ದಾಣಕ್ಕೆ ಸರ್ಕಾರಿ ಬಸ್ ನಿಲ್ದಾಣದಿಂದ ತಲುಪುವ ರಸ್ತೆ( ರೈಲ್ವೆ ಕೆಳಸೇತುವೆ ಪಕ್ಕ) ಮತ್ತು ರೈಲ್ವೆ ನಿಲ್ದಾಣದಿಂದ ತಾಲ್ಲೂಕು ಕಚೇರಿಗೆ ತೆರಳುವ ರಸ್ತೆಯಲ್ಲಿ ಬೀದಿ ದೀಪ ಇಲ್ಲ. ಬೇರೆ ಊರುಗಳಿಗೆ ತೆರಳುವ ಮತ್ತು ರೈಲು ಇಳಿದು ಬರುವ ಜನ ಭಯದಲ್ಲಿಯೇ ಈ ರಸ್ತೆಗಳಲ್ಲಿ ಸಾಗಬೇಕಾಗಿದೆ. ಹಲವು ಬಾರಿ ಕಳ್ಳತನ ಪ್ರಕರಣಗಳೂ ನಡೆದಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಸರಸ್ವತೀಪುರದಿಂದ ಕಂಸಾಗರಕ್ಕೆ ತೆರಳುವ ಮೇಲ್ಸೇತುವೆ ಬಳಿಯೂ ಸಮರ್ಪಕ ಬೀದಿ ದೀಪಗಳಿಲ್ಲ. ರಾತ್ರಿ ವೇಳೆ ಸಂಚರಿಸುವವರಿಗೆ ತೊಂದರೆಯಾಗಿದೆ. ಇನ್ನು ಮಲ್ಲೇಶ್ವರ ಗ್ರಾಮದ ಬಳಿಯ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ. ಆದರೆ ಕೆಳಭಾಗದ ರಾಜ್ಯ ಹೆದ್ದಾರಿಯಲ್ಲಿ ಬೀದಿ ದೀಪಗಳಿಲ್ಲ. ಸಂಚರಿಸುವವರಿಗೆ ತೊಂದರೆಯಾಗಿದೆ. ಗ್ರಾಮಾಂತರ ಭಾಗದ ಕುಂತೀಹೊಳೆ ಕರಿಕಲ್ಲುಹೊಳೆ ಯಳಗೊಂಡನಹಳ್ಳಿಯ ಭಧ್ರಾ ಯೋಜನೆಯ ತುಮಕೂರು ಕಾಲುವೆ ಸೇತುವೆಗಳ ಬಳಿ ಕನಿಷ್ಠ ಒಂದಾದರೂ ಬೀದಿ ದೀಪ ಇಲ್ಲದಿರುವುದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಗ್ರಾಮೀಣ ಭಾಗಗಳಲ್ಲಿ ಹಗಲಿನಲ್ಲೂ ಬೀದಿ ದೀಪಗಳು ಬೆಳಗುತ್ತಿದ್ದು ನಂದಿಸಲು ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯ.

300 ಬೀದಿ ದೀಪ ಕೊರತೆ

ತರೀಕೆರೆ: ಪುರಸಭೆ ವ್ಯಾಪ್ತಿಗೆ ಒಳಪಡುವ ಬೀದಿ ದೀಪಗಳನ್ನು ಮುಂಬೈನ ಕಂಪನಿಯೊಂದು ನಿರ್ವಹಣೆ ಮಾಡುತ್ತಿದೆ. ಈ ಕಂಪನಿಯು 2019ರಲ್ಲಿ ನಿಗದಿಗೊಳಿಸಲಾಗಿದ್ದ ದೀಪಗಳನ್ನು ಮಾತ್ರ ನಿರ್ವಹಣೆ ಮಾಡುತ್ತಿದೆ. ಪ್ರಸ್ತುತ ಈವರೆಗೆ 300ಕ್ಕೂ ಹೆಚ್ಚು ಬೀದಿ ದೀಪಗಳ ಅವಶ್ಯಕತೆ ಇದೆ. ಈ ದೀಪಗಳ ಕೊರತೆಯಿಂದ ಕೆಲವು ಬಡಾವಣೆಗಳಲ್ಲಿ ಬೀದಿ ದೀಪ ಇಲ್ಲವಾಗಿದ್ದು ಜನ ತೊಂದರೆ ಅನುಭವಿಸುತ್ತಿದ್ದಾರೆ. ಸಮಸ್ಯೆ ಪರಿಹರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಮನವಿ.

ಬೀದಿ ದೀಪ ನಿರ್ವಹಣೆ

ಮರೀಚಿಕೆ ಮೂಡಿಗೆರೆ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ದೀಪ ನಿರ್ವಹಣೆ ಮರೀಚಿಕೆಯಾಗಿದ್ದು ಪಟ್ಟಣದ ಹಲವು ಬಡಾವಣೆಗಳು ಕತ್ತಲೆಯಲ್ಲಿ ಮುಳುಗಿವೆ. ಪಟ್ಟಣದಲ್ಲಿ ಎಲ್ಲಾ ಬೀದಿ ದೀಪಗಳಿಗೂ ಎಲ್ಇಡಿ ಬಲ್ಬ್ ಅಳವಡಿಕೆ ಮಾಡಲಾಗಿದೆ. ಆದರೆ ಮೂರು ತಿಂಗಳಾದರೂ ಹಾಳಾಗಿರುವ ಬಲ್ಬ್ಗಳನ್ನು ದುರಸ್ತಿ ಪಡಿಸದ ಕಾರಣ ಕತ್ತಲೆಯಲ್ಲಿಯೇ ಜನ ಓಡಾಡುವಂತಾಗಿದೆ. ಪಟ್ಟಣದ ಹೃದಯ ಭಾಗವಾದ ಕೆ.ಎಂ. ರಸ್ತೆಯ ಬಸ್ ನಿಲ್ದಾಣದಿಂದ ಮೇಗಲಪೇಟೆ ತನಕ ಹಲವು ವಿದ್ಯುತ್ ಕಂಬಗಳಲ್ಲಿರುವ ಬಲ್ಬ್ಗಳು ಬೆಳಗುತ್ತಿಲ್ಲ. ವಿದ್ಯಾನಗರ ಜೆ.ಎಂ. ರಸ್ತೆ ಬೇಲೂರು ರಸ್ತೆ ಎಂ.ಜಿ. ರಸ್ತೆ ದೊಡ್ಡಿ ಬೀದಿಗಳಲ್ಲೂ ಬೀದಿ ದೀಪಗಳು ದುರಸ್ತಿಗೆ ಬಂದಿವೆ. ಬೀದಿ ದೀಪ ನಿರ್ವಹಣೆಯ ಗುತ್ತಿಗೆಯನ್ನು ಇ– ಟೆಂಡರ್ ಮೂಲಕ ಹೊರಭಾಗದವರು ಗುತ್ತಿಗೆ ಹಿಡಿದಿದ್ದು ದೂರು ನೀಡಿದರೂ ನಿರ್ವಹಣೆ ಮಾಡುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ. ಬೀದಿ ದೀಪಗಳ ದೂರಿಗೆ ಸಂಬಂಧಿಸಿದಂತೆ ಸಕಾಲ ಯೋಜನೆ ಮರೀಚಿಕೆಯಾಗಿದ್ದು ಸ್ಥಳೀಯ ನಿವಾಸಿಗಳ ಅಳಲು ಆಳುವ ವರ್ಗಕ್ಕೆ ಕೇಳದಂತಾಗಿದೆ. ಕೂಡಲೇ ಹಾಳಾಗಿರುವ ಬೀದಿ ದೀಪಗಳನ್ನು ಬದಲಾಯಿಸಿ ಸಮರ್ಪಕವಾಗಿ ನಿರ್ವಹಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.