ಕಡೂರು: ಈ ವಾರ ಹಣ್ಣುಗಳ ಬೆಲೆ ತುಸು ಕಡಿಮೆ ಆಗಿದ್ದರೂ ಗ್ರಾಹಕರ ಪಾಲಿಗೆ ದುಬಾರಿಯಾಗಿಯೇ ಉಳಿದಿವೆ. ಈ ವಾರ ಹಲಸಿನ ಹಣ್ಣಿನ ಧಾರಣೆ ತುಸು ಇಳಿಕೆ ಕಂಡಿದೆ.

ಸೇಬು ಕಳೆದ ವಾರ ಒಂದು ಕೆ.ಜಿ.ಗೆ ₹200 ರಿಂದ ₹240 ಇತ್ತು. ಈ ವಾರ ₹180ರಿಂದ ₹200 ಮಾರಾಟವಾಗುತ್ತಿದೆ. ₹240 ಇದ್ದ ನೇರಳೆ ಹಣ್ಣು ಕೆ.ಜಿ.ಗೆ ₹100ರಂತೆ ಸಿಗುತ್ತಿದೆ.

ಪೇರಳೆ (ಸೀಬೆ) ಹಣ್ಣು ಮಾರುಕಟ್ಟೆಗೆ ಹೆಚ್ಚು ಆವಕವಾಗಿದ್ದು, ಒಂದು ಕೆ.ಜಿ.ಗೆ ₹ 50 ಇದ್ದು, ಒಂದು ಹಣ್ಣನ್ನು ₹ 5ರಂತೆ ಗ್ರಾಹಕರು ಖರೀದಿಸಿದರು. ಮೂಸಂಬಿ ₹60, ಕಿತ್ತಳೆ ₹80, ದ್ರಾಕ್ಷಿ ₹ 100, ದಾಳಿಂಬೆಗೆ ₹200 ಬೆಲೆ ಇದೆ.

ಈ ಬಾರಿ ಪಟ್ಟಣದಲ್ಲಿ ಹಳಸಿನ ಹಣ್ಣು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ವಿಶಿಷ್ಟ ಸ್ವಾದ ಹೊಂದಿರುವ ಕಡೂರು ತಾಲ್ಲೂಕಿನ ಸಖರಾಯಪಟ್ಟಣದ ಹಲಸಿನ ಹಣ್ಣನ್ನು ಇಡಿಯಾಗಿಯೇ ಮಾರಾಟ ಮಾಡಲಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ತೂಕದ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತಿದೆ. ಒಂದು ಕೆ.ಜಿ.ಗೆ ₹ 30 ನಿಗದಿಪಡಿಸಲಾಗಿದೆ.

ಹಳದಿ ಬಣ್ಣದ ಹಳಸಿನ ಸೊಳೆ ಇರುವ ಹಣ್ಣಿಗಿಂತ ಕೇಸರಿ ಬಣ್ಣದ ಸೊಳೆಗಳಿರುವ ಚಂದ್ರಹಲಸಿಗೆ ಬೇಡಿಕೆ ಹೆಚ್ಚು. ಕಡೂರಿನ ರಸ್ತೆ ಬದಿ ಒಂದು ಹಣ್ಣು ₹ 100ರಿಂದ ₹ 120ರ ವರೆಗೆ ವ್ಯಾಪಾರವಾಗುತ್ತಿದೆ. ಏಕಾದಶಿ ಸಮೀಪ ಇರುವುದರಿಂದ ಹಲಸಿನ ಹಣ್ಣಿಗೆ ಹೆಚ್ಚು ಬೇಡಿಕೆಯಿದ್ದು, ವ್ಯಾಪಾರಿಗಳು ಹೊರಗಿನಿಂದಲೂ ಹಣ್ಣು ತರಿಸಿ ಮಾರಾಟ ಮಾಡುತ್ತಿದ್ದಾರೆ.

ಒಂದು ಹಳಸಿನ ಹಣ್ಣನ್ನು ₹ 80ರಿಂದ ₹ 100ರಂತೆ ಮಾರಾಟ ಮಾಡುತ್ತಿದ್ದೇವೆ. ಕುಪ್ಪಾಳು ಕಡೆಯಿಂದ ಹಣ್ಣು ಖರೀದಿಸಿ ತಂದಿದ್ದೇನೆ ಎಂದು ಚಿಕ್ಕಬಾಸೂರಿನ ಗೋವಿಂದಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.