ಚಿಕ್ಕಮಗಳೂರು: ಶ್ರೀರಾಮಸೇನೆ ದತ್ತಮಾಲಾ ಅಭಿಯಾನದ ನಿಮಿತ್ತ ನಗರದ ಬಸವನಹಳ್ಳಿಯ ಶಂಕರಮಠದಲ್ಲಿ ಭಾನುವಾರ ದತ್ತಮಾಲಾ ಧಾರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮಠದ ಆವರಣದಲ್ಲಿ ಬೆಳಿಗ್ಗೆ 10.30ಕ್ಕೆ ಮಾಲೆಕೈಂಕರ್ಯ ಆರಂಭವಾಯಿತು. ಕೇಸರಿ ಪಂಚೆ, ಶಲ್ಯ ಧರಿಸಿದ್ದ 50ಕ್ಕೂ ಹೆಚ್ಚು ಭಕ್ತರು ದತ್ತಾತ್ರೇಯ ಭಾವಚಿತ್ರದ ಮುಂದೆ ಮಾಲೆ ಧರಿಸಿದರು. ದತ್ತಾತ್ರೇಯ ಸ್ವಾಮಿ ನಾಮಸ್ಮರಣೆ, ಭಜನೆ ನಡೆಯಿತು.
ಶ್ರೀರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀರಾಮ ಸೇನೆ ಕಾರ್ಯಕರ್ತರು ರಾಜ್ಯದಾದ್ಯಂತ ದತ್ತಮಾಲೆ ಧಾರಣೆ ಮಾಡುವರು. ಎಂಟು ದಿನಗಳು ವೃತಾಚರಣೆ ಮಾಡುವರು. ಮಾಲಾಧಾರಿಗಳು ಪಾದರಕ್ಷೆ ಧರಿಸುವುದಿಲ್ಲ. ಬೆಳಿಗ್ಗೆ, ಸಂಜೆ ಸ್ನಾನ ಮಾಡಿ, ದತ್ತಾತ್ರೇಯ ಪೂಜೆ, ಸ್ಮರಣೆ ಮಾಡುವರು ಎಂದರು.

‘ಇದೇ 11ರಂದು ನಗರದಲ್ಲಿ ದತ್ತಮಾಲಾಧಾರಿಗಳು ಮನೆ ಮನೆಗೆ ತೆರಳಿ ಪಡಿ ಸಂಗ್ರಹಿಸುವರು.13ರಂದು ಶೋಭಾಯಾತ್ರೆ ನಡೆಯಲಿದೆ. ಭಕ್ತರು ದತ್ತ ವಿಗ್ರಹವನ್ನು ಸಂಘಟನೆಗೆ ದಾನ ನೀಡಿದ್ದಾರೆ. ಅದನ್ನು ಶೋಭಾಯಾತ್ರೆಯಲ್ಲಿ ಮೆರವಣಿಗೆ ಮಾಡಲಾಗುವುದು. ನಂತರ ದತ್ತಪಿಠಕ್ಕೆ ತೆರಳಿ ದತ್ತ ಪಾದುಕೆ ದರ್ಶನ ಪಡೆಯಲಾಗುವುದು’ಎಂದರು.ಶ್ರೀರಾಮ ಸೇನೆ ರಾಜ್ಯ ಸಂಚಾಲಕ ಮಹೇಶ್ ಕಟ್ಟಿನಮನೆ, ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ, ದುರ್ಗಾಸೇನೆ ಜಿಲ್ಲಾಧ್ಯಕ್ಷೆ ಶಾರದಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.