ಚಿಕ್ಕಮಗಳೂರು: ‘ದತ್ತ ಪೀಠ ವಿಚಾರದಲ್ಲಿ ಹೈಕೋರ್ಟ್ ನೀಡಿರುವ ನಿರ್ದೇಶನದಂತೆ ಸರ್ಕಾರವು ಸಮಿತಿ ರಚಿಸಿ ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳಲಿದೆ’ ಎಂದು ಇಂಧನ ಸಚಿವ ವಿ.ಸುನೀಲ್ಕುಮಾರ್ ತಿಳಿಸಿದರು.

ಬಾಬಾಬುಡನ್ ಗಿರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮುಜಾವರ್ ನೇಮಕ ಮಾಡಿದ್ದ ಆದೇಶವನ್ನು ಹೈಕೋರ್ಟ್ ವಜಾಗೊಳಿಸಿದೆ. ಇದು ಹೋರಾಟಗಾರರಿಗೆ ಸಂತಸ ಮೂಡಿಸಿದೆ. ಈಗಿನ ಸರ್ಕಾರವು ಹಿಂದುಗಳ ಭಾವನೆಗಳ ಪರವಾಗಿದೆ’ ಎಂದು ಪ್ರತಿಕ್ರಿಯಿಸಿದರು.
‘ದತ್ತ ಪೀಠ ಹೋರಾಟವು ನನ್ನ ಬೆಳವಣಿಗೆಯಲ್ಲಿ ಪ್ರಮುಖ ಸಂಗತಿ. ದತ್ತಾತ್ರೇಯ ಪೀಠ ಮತ್ತು ಬಾಬಾಬುಡನ್ ದರ್ಗಾ ಬೇರೆಬೇರೆ ಎಂಬುದು ದಾಖಲೆಗಳಲ್ಲಿ ಇದೆ. ಮುಸ್ಲಿಮರು ನಾಗೇನಹಳ್ಳಿಯ ದರ್ಗಾ ಅಭಿವೃದ್ಧಿ ಮಾಡಬೇಕು. ಇಲ್ಲಿ ಅನಗತ್ಯವಾಗಿ ನಿರ್ಮಿಸಿರುವ ಗೋರಿಗಳನ್ನು ನಾಗೇನಹಳ್ಳಿಗೆ ಸ್ಥಳಾಂತರಿಸಬೇಕು. ಈ ಸ್ಥಳದಲ್ಲಿ ಹಿಂದುಗಳಿಗೆ ಪೂಜೆ ಅವಕಾಶ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.