ಕಳಸ: ತಾಲ್ಲೂಕಿನಲ್ಲಿ ಅನೇಕ ಖಾಸಗಿ ವಾಹನಗಳು ಅಕ್ರಮವಾಗಿ ಬಾಡಿಗೆ ಮಾಡುತ್ತಿದ್ದು, ಹಳದಿ ಬೋರ್ಡ್ ವಾಹನಗಳಿಗೆ ತೊಂದರೆ ಆಗುತ್ತಿದೆ. ಇದನ್ನು ನಿಯಂತ್ರಿಸಬೇಕು ಎಂದು ಪಟ್ಟಣದ ಟ್ಯಾಕ್ಸಿ ಹಾಗೂ ಜೀಪ್ ಚಾಲಕರು ಮತ್ತು ಮಾಲೀಕರು ಪೊಲೀಸರಿಗೆ ಮನವಿ ನೀಡಿದ್ದಾರೆ.

ಕಳಸ ಠಾಣಾಧಿಕಾರಿ ನಿತ್ಯಾನಂದ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದ ನಂತರ ಮಾತನಾಡಿದ ಟ್ಯಾಕ್ಸಿ ಮಾಲೀಕ ಈಶ್ವರ್ ಅವರು, ‘ನಾವು ಸರ್ಕಾರಕ್ಕೆ ತೆರಿಗೆ ಪಾವತಿಸಿ ವಾಹನ ಓಡಿಸುತ್ತಿದ್ದೇವೆ. ಆದರೆ ಖಾಸಗಿ ವಾಹನ ಬಳಸಿ ಕೆಲವರು ಅಕ್ರಮವಾಗಿ ಬಾಡಿಗೆ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಕೋರಿದರು.

ಜೀಪ್ ಮಾಲೀಕ ಕೃಷ್ಣಪ್ಪ ಮಾತನಾಡಿ, ‘ಕೆಲವೇ ಕೆಲವು ಜೀಪ್‍ಗಳು ಹಳದಿ ಬೋರ್ಡ್ ಮೂಲಕ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಿವೆ. ಉಳಿದವರು ಖಾಸಗಿ ಜೀಪ್ ಬಳಸಿ ಬಾಡಿಗೆ ಮಾಡುತ್ತಿದ್ದಾರೆ. ಇದನ್ನು ನಿಯಂತ್ರಿಸಬೇಕು’ ಎಂದು ಕೋರಿದರು. ವಾಹನ ಮಾಲೀಕರಾದ ಸುನಿಲ್, ಪ್ರಾಣೇಶ್, ಮೋಹನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.