ಸಿರಿಗೆರೆ: ‘ವಚನ ಸಾಹಿತ್ಯ ಓದಿಕೊಂಡವರೂ ಮೂಲಭೂತವಾದಿ ಆಗುತ್ತಿರುವುದು ವಿಷಾದನೀಯ. ಲಿಂಗಾಯತ ಧರ್ಮದಲ್ಲೂ ಕೆಲವರು ಇಂತಹ ಗೊಂದಲ ಹಬ್ಬಿಸುತ್ತಿದ್ದಾರೆ‘ ಎಂದು ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ತರಳಬಾಳು ಮಠ ಏರ್ಪಡಿಸಿದ್ದ ‘ವಚನ ಸಾಹಿತ್ಯದ ಪ್ರಸ್ತುತತೆ’ ವಿಷಯ ಕುರಿತ ಗೋಷ್ಠಿಯಲ್ಲಿ ಅವರು ಭಾನುವಾರ ಆಶೀರ್ವಚನ ನೀಡಿದರು.

‘ಬಸವಣ್ಣನವರು ವೇದ, ಉಪನಿಷತ್ತುಗಳ ವಿರೋಧಿಯಾಗಿದ್ದರು’ ಎಂಬ ತಪ್ಪು ಪ್ರಜ್ಞೆ ಈಗ ಮೂಡುತ್ತಿದೆ. ಬಸವಣ್ಣನವರು ವೇದಗಳ ವಿರೋಧಿ ಆಗಿರಲಿಲ್ಲ. ವಚನ ಸಾಹಿತ್ಯದಲ್ಲಿ ಮುಕ್ತ ಚಿಂತನೆಗಳಿದ್ದು, ಅವುಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

‘ವೇದಗಳಲ್ಲಿ ಕರ್ಮಕಾಂಡ ಮತ್ತು ಜ್ಞಾನಕಾಂಡ ಎಂಬ ಭಾಗಗಳಿವೆ. ಕರ್ಮಕಾಂಡದಲ್ಲಿ ಜೀವವಿರೋಧಿ ನಿಲುವು ತಾಳುವ ಪ್ರಾಣಿಬಲಿ ಮತ್ತು ಯಜ್ಞದ ವಿಚಾರಗಳಿವೆ. ಇಂತಹ ನಿಲುವುಗಳಿಗೆ ಬಸವಣ್ಣನವರು ಪ್ರತಿರೋಧ ವ್ಯಕ್ತಪಡಿಸಿದ್ದರೇ ವಿನಾ, ವೇದ ಮತ್ತು ಉಪನಿಷತ್ತುಗಳನ್ನು ಸಾರಾಸಗಟಾಗಿ ತಿರಸ್ಕರಿಸಿಲ್ಲ‘ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.