ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಳಲ್ಕೆರೆ: ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಯೇ ಸವಾಲು

ಬೇಸಿಗೆಯಲ್ಲಿ ಎದುರಾಗಿದೆ ಸಾಂಕ್ರಾಮಿಕ ರೋಗದ ಭೀತಿ; ಸೊಳ್ಳೆ ಕಾಟಕ್ಕೆ ಜನ ಹೈರಾಣು
ಸಾಂತೇನಹಳ್ಳಿ ಸಂದೇಶ್‌ ಗೌಡ
Published : 25 ಮಾರ್ಚ್ 2024, 7:06 IST
Last Updated : 25 ಮಾರ್ಚ್ 2024, 7:06 IST
ಫಾಲೋ ಮಾಡಿ
Comments
ಹೊಳಲ್ಕೆರೆಯ ಗ್ರಾಮೀಣ ಭಾಗದಲ್ಲಿ ರಸ್ತೆ ಬದಿ ಹಾಕಿರುವ ತಿಪ್ಪೆ
ಹೊಳಲ್ಕೆರೆಯ ಗ್ರಾಮೀಣ ಭಾಗದಲ್ಲಿ ರಸ್ತೆ ಬದಿ ಹಾಕಿರುವ ತಿಪ್ಪೆ
ಖಂಡೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿಂಭಾಗದಲ್ಲಿ ರಸ್ತೆ ಮೇಲೆ ಹರಿಯುವ ಚರಂಡಿ ನೀರು
ಖಂಡೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿಂಭಾಗದಲ್ಲಿ ರಸ್ತೆ ಮೇಲೆ ಹರಿಯುವ ಚರಂಡಿ ನೀರು
ಪರಶುರಾಂಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ನಿಂತಿರುವ ಸ್ವಚ್ಛವಾಹಿನಿ ವಾಹನ
ಪರಶುರಾಂಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ನಿಂತಿರುವ ಸ್ವಚ್ಛವಾಹಿನಿ ವಾಹನ
ಚರಂಡಿಗಳಲ್ಲಿ ಕೊಳಚೆ ತುಂಬುವುದರಿಂದ ಸೊಳ್ಳೆಗಳು ಉತ್ಪತ್ತಿ ಜಾಸ್ತಿ ಆಗುತ್ತದೆ. ಈಗಾಗಲೇ ಆರೋಗ್ಯ ಇಲಾಖೆಯಿಂದ ಸಮೀಕ್ಷೆ ನಡೆಸಲಾಗಿದ್ದು ಲಾರ್ವಾ ನಿರೋಧಕ ರಾಸಾಯನಿಕ ಸಿಂಪಡಣೆ ಕಾರ್ಯ ಮಾಡಲಾಗಿದೆ. ಜನರು ಶುದ್ಧ ಕುಡಿಯುವ ನೀರು ಸೇವಿಸಬೇಕು
ಡಾ.ಟಿ.ಡಿ.ರೇಖಾ ತಾಲ್ಲೂಕು ಆರೋಗ್ಯಾಧಿಕಾರಿ
ಚೀರನಹಳ್ಳಿ ಕಂಬದ ದೇವರಹಟ್ಟಿಯ ಮಾರ್ಗದಲ್ಲಿ ಜನರು ನಿತ್ಯ ಹೆಚ್ಚಾಗಿ ಸಂಚರಿಸುತ್ತಾರೆ. ಆದರೆ ಚರಂಡಿಯ ತುಂಬ ಕಸ ತುಂಬಿಕೊಂಡಿರುವ ಕಾರಣ ದುರ್ವಾಸನೆಯಿಂದ ಓಡಾಡುವುದೇ ಕಷ್ಟವಾಗಿದೆ.
ಡಿ.ಇ.ರವಿಕುಮಾರ್‌ ಸ್ಥಳೀಯ ನಿವಾಸಿ
ಖಂಡೇನಹಳ್ಳಿ ಗ್ರಾಮದಲ್ಲಿ ಕೆಲವು ಕಡೆ ಚರಂಡಿ ಇಲ್ಲ. ಇರುವ ಕಡೆ ಸರಿಯಾದ ನಿರ್ವಹಣೆ ಇಲ್ಲ. ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿದೆ. ತಕ್ಷಣವೇ ಗ್ರಾಮ ಪಂಚಾಯಿತಿಯವರು ಸ್ವಚ್ಛತೆ ಕಾರ್ಯಕ್ಕೆ ಮುಂದಾಗಬೇಕು
ನರಸಿಂಹಮೂರ್ತಿ ಖಂಡೇನಹಳ್ಳಿ ನಿವಾಸಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿ ಸಿಸಿ ರಸ್ತೆ ಮಾಡಿರುವ ಕಾರಣ ಜಾಗ ಕಿರಿದಾಗಿದೆ. ಬಾಕ್ಸ್‌ ಚರಂಡಿ ನಿರ್ಮಿಸಲು ಜಾಗದ ಕೊರತೆ ಎದುರಾಗಿದೆ. ಶೀಘ್ರ ಕ್ರಮಕೈಗೊಂಡು ಸಮಸ್ಯೆ ಬಗೆಹರಿಸಲಾಗುತ್ತದೆ
ಬಾಲ ಸುಬ್ರಮಣಿ ಪಿಡಿಒ ಖಂಡೇನಹಳ್ಳಿ
ನಿಂತಲ್ಲೇ ನಿಂತ ಸ್ವಚ್ಛವಾಹಿನಿ ತಿಮ್ಮಯ್ಯ.ಜೆ
ಪರಶುರಾಂಪುರ: ಪಟ್ಟಣವಾಗಿ ಬೆಳೆಯುತ್ತಿರುವ ಪರಶುರಾಂಪುರದಲ್ಲಿ ದಿನದಿಂದ ದಿನಕ್ಕೆ ಕಸದ ಪ್ರಮಾಣ ಏರಿಕೆಯಾಗುತ್ತಿದೆ. ಆದರೆ ವಿಲೇವಾರಿ ಮಾತ್ರ ಸಮರ್ಪಕವಾಗಿ ನಡೆಯುತ್ತಿಲ್ಲ. ಗ್ರಾಮದಲ್ಲಿ ಕಸ ಸಂಗ್ರಹ ತೊಟ್ಟಿಗಳು ಹುಡುಕಿದರೂ ಸಿಗುವುದಿಲ್ಲ. ಇದರಿಂದಾಗಿ ಖಾಲಿ ನಿವೇಶನಗಗಳು ಕಸದ ತೊಟ್ಟಿಗಳಾಗಿವೆ. ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಮಾಡಲು ಕಳೆದ 5 ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದಾರೆ ಅದರೆ ಘಟಕ ಮಾತ್ರ ಮರೀಚಿಕೆಯಾಗಿದೆ. ಇದುವರೆಗೂ ಜಾಗ ಗುರುತಿಸಲು ಸಾಧ್ಯವಾಗಿಲ್ಲ. ಪ್ರತಿ ದಿನ ಗ್ರಾಮದಲ್ಲಿ ಸಂಗ್ರಹವಾಗುವ ಕಸವನ್ನು ಗ್ರಾಮದ ಹೊರವಲಯದ ಖಾನಿಹಳ್ಳಕ್ಕೆ ಸುರಿಯುತ್ತಿದ್ದು ಮಳೆ ಬಂದಾಗ ಖಾನಿಹಳ್ಳದಲ್ಲಿ ಹರಿಯುವ ನೀರಿನ ಜೊತೆಗೆ ತ್ಯಾಜ್ಯವು ವೇದಾವತಿ ನದಿಯನ್ನು ಸೇರುತ್ತಿದೆ. ಆದರೂ ಈವರೆಗೂ ಪಂಚಾಯಿತಿಯಿಂದ ಯಾವುದೇ ರೀತಿ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ. ಗ್ರಾಮದ ಕಸ ವಿಲೇವಾರಿಯ ಸ್ವಚ್ಛವಾಹಿನಿ ವಾಹನ ಎರಡು ವರ್ಷದಿಂದ ನಿಂತ ಜಾಗದಲ್ಲೇ ನಿಂತಿದೆ. ಗ್ರಾಮ ಸ್ವಚ್ಛತೆಯನ್ನು ಗ್ರಾಮ ಪಂಚಾಯಿತಿ ಸಂಪೂರ್ಣ ಕಡೆಗಣಿಸಿದೆ ಎಂದು ದೂರುತ್ತಾರೆ ಗ್ರಾಮಸ್ಥರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT