ಚಿತ್ರದುರ್ಗ: ಕಳೆದ ತಿಂಗಳು ಸುರಿದ ನಿರಂತರ ಮಳೆಗೆ ಜಿಲ್ಲೆಯಾದ್ಯಂತ ಸಾವಿರಾರು ಹೆಕ್ಟೇರ್ ಭೂಮಿಯಲ್ಲಿ ಬೆಳೆದು ನಿಂತಿದ್ದ ಬೆಳೆ ಕೊಚ್ಚಿ ಹೋಗಿದೆ. ಕಂದಾಯ ಸಚಿವ, ಮುಖ್ಯಮಂತ್ರಿ ಸೂಚನೆಯಂತೆ ಹಾನಿ ಸಮೀಕ್ಷೆಗೆ ಅಧಿಕಾರಿಗಳ ತಂಡ ಹೊಲಕ್ಕೆ ಬರುತ್ತದೆ ಎಂದು ರೈತರು ಕಾಯುತ್ತಿದ್ದಾರೆ. ಆದರೆ, ಇಲ್ಲಿಯವರೆಗೂ ಯಾವುದೇ ಅಧಿಕಾರಿ ಕೃಷಿ ಭೂಮಿಯತ್ತ ತಲೆ ಹಾಕದಿರುವುದು ರೈತರ ಪರಿಹಾರ ನಿರೀಕ್ಷೆಯನ್ನು ಮಂಕಾಗಿಸಿದೆ.

ಜಿಲ್ಲೆಯಲ್ಲಿ ಶೇಂಗಾ, ಈರುಳ್ಳಿ, ಮೆಕ್ಕೆಜೋಳ ಬೆಳೆ ತೀವ್ರವಾಗಿ ಹಾನಿಯಾಗಿದ್ದು, ರೈತರು ಅಪಾರ ನಷ್ಟ ಅನುಭವಿಸಿದ್ದಾರೆ. ಹಳ್ಳಕೊಳ್ಳಗಳು ಉಕ್ಕಿ, ಕೆರೆಗಳು ಕೋಡಿ ಬಿದ್ದು ರೈತರು ಅಪಾರ ಪ್ರಮಾಣದ ಬೆಳೆ ಕಳೆದುಕೊಂಡಿದ್ದಾರೆ. ಇನ್ನೊಂದೆಡೆ ಕಟಾವು ಮಾಡಿ ಸಂಗ್ರಹಿಸಿದ್ದ ಈರುಳ್ಳಿಯನ್ನು ಮಳೆಯಿಂದ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗದೇ ನಷ್ಟ ಅನುಭವಿಸಿದ್ದಾರೆ.

ಮಳೆಯ ನಂತರ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ತಾಲ್ಲೂಕಿನ 3 ಹಳ್ಳಿಗಳಿಗೆ ಭೇಟಿ ನೀಡಿ ಬೆಳೆ ನಷ್ಟ ಪರಿಶೀಲನೆ ನಡೆಸಿದ್ದರು. ಶೀಘ್ರ ನಷ್ಟ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಸಚಿವರ ಮಾತಿನಿಂದ ಸಂತಸಗೊಂಡಿದ್ದ ರೈತರು ಪರಿಹಾರದ ನಿರೀಕ್ಷೆಯಲ್ಲಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒಗಳ ಸಭೆ ನಡೆಸಿ ವಾರದೊಳಗೆ ಸಮೀಕ್ಷಾ ಕಾರ್ಯ ಮುಗಿಸಬೇಕು ಎಂದು ಸೂಚನೆ ನೀಡಿದ್ದರು. ಹೀಗಾಗಿ ಅಧಿಕಾರಿಗಳ ತಂಡ ಜಮೀನಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದೆ ಎಂದು ರೈತರು ನಂಬಿದ್ದರು.

‘ಮುಖ್ಯಮಂತ್ರಿ ಸೂಚನೆ ನೀಡಿ ವಾರ ಕಳೆದಿದ್ದರೂ, ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿಲ್ಲ. ಕೆಲಸ ಕಾರ್ಯ ಬಿಟ್ಟು ಅಧಿಕಾರಿಗಳಿಗಾಗಿ ಕಾಯುತ್ತಿದ್ದೇವೆ. ಯಾವ ಅಧಿಕಾರಿಯೂ ಹಳ್ಳಿಗಳ ಕಡೆಗೆ ಭೇಟಿ ನೀಡಿಲ್ಲ. ಹೀಗಾದರೆ ನಷ್ಟ ಪರಿಹಾರ ಬರುವುದು ಯಾವಾಗ’ ಎಂದು ರೈತರು ಪ್ರಶ್ನಿಸುತ್ತಾರೆ.

‘4 ಎಕರೆ ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿ ಮಳೆ ನೀರಿಗೆ ಕೊಚ್ಚಿ ಹೋಗಿದೆ. ನಷ್ಟ ಸಮೀಕ್ಷೆಗೆ ಬರುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದೇನೆ. ಆದರೆ, ಅವರು ಇಲ್ಲಿಯವರೆಗೂ ಬಂದಿಲ್ಲ. ಅಧಿಕಾರಿಗಳು ಬೆಳೆ ವಿಮಾ ಕಂಪನಿಗಳ ಕಡೆ ಕೈತೋರಿಸುತ್ತಿದ್ದಾರೆ. ಹೀಗಾಗಿ ವಿಮಾ ಕಂಪನಿಗೂ ಅರ್ಜಿ ಹಾಕಿದ್ದೇನೆ. ಇಷ್ಟಾದರೂ ಅಧಿಕಾರಿಗಳ ತಂಡ ಸಮೀಕ್ಷೆಗೆ ಬಂದಿಲ್ಲ’ ಎಂದು ಹಿರಿಯೂರು ತಾಲ್ಲೂಕು ಐಮಂಗಲದ ರೈತರೊಬ್ಬರು ಬೇಸರ ವ್ಯಕ್ತಪಡಿಸಿದರು.

ವರ್ಷದಲ್ಲಿ 2 ಬಾರಿ ನಷ್ಟ:

ಪ್ರಸಕ್ತ ಸಾಲಿನಲ್ಲೇ 2 ಬಾರಿ ಅತಿವೃಷ್ಟಿ ಉಂಟಾಗಿದ್ದು ಶೇಂಗಾ, ಈರುಳ್ಳಿ ಬಿತ್ತನೆ ಮಾಡಿದ್ದ ರೈತರು ಅಪಾರ ಪ್ರಮಾಣದ ನಷ್ಟ ಅನುಭವಿಸಿದ್ದಾರೆ. ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಮೊಳಕಾಲ್ಮುರು, ಹಿರಿಯೂರು, ಚಿತ್ರದುರ್ಗ ತಾಲ್ಲೂಕಿನಲ್ಲಿ ಅಪಾರ ಪ್ರಮಾಣದ ಬೆಳೆ ಕೊಚ್ಚಿ ಹೋಗಿತ್ತು.

ಬೆಳೆ ನಷ್ಟ ಅನುಭವಿಸಿದ ರೈತರು ಪರಿಹಾರಕ್ಕೆ ಅರ್ಜಿ ಸಲ್ಲಿಸುವಂತೆ ಜಿಲ್ಲಾಡಳಿತ ಸೂಚಿಸಿತ್ತು. ಅದರಂತೆ, ಜಿಲ್ಲೆಯಾದ್ಯಂತ ಸಾವಿರಾರು ರೈತರು ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ಈಗ ಆ ಅರ್ಜಿಗಳು ಯಾವ ಹಂತದಲ್ಲಿದೆ ಎಂಬ ಬಗ್ಗೆ ರೈತರಿಗೆ ಮಾಹಿತಿ ಇಲ್ಲ. ನಂತರ ಮತ್ತೊಮ್ಮೆ ಅಕ್ಟೋಬರ್ನಲ್ಲೂ ವಾಯುಭಾರ ಕುಸಿತದಿಂದಾಗಿ ನಿರಂತರ ಮಳೆ ಸುರಿದು 2ನೇ ಬಾರಿಗೆ ನಷ್ಟ ಅನುಭವಿಸಿದ್ದಾರೆ. ಈಗಲೂ ನಷ್ಟ ಪರಿಹಾರದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.

‘ಜಿಲ್ಲೆಯ ಯಾವ ಭಾಗದಲ್ಲಿ ನಷ್ಟ ಉಂಟಾಗಿದೆ ಎಂಬ ಬಗ್ಗೆ ಅಧಿಕಾರಿಗಳಲ್ಲಿ ಮಾಹಿತಿ ಇದೆ. ಜಿಪಿಎಸ್ ತಂತ್ರಜ್ಞಾನದ ಮೂಲಕ ಅವರಿಗೆ ಎಲ್ಲವೂ ತಿಳಿಯುತ್ತದೆ. ನಷ್ಟದ ಅರಿವು ಇದ್ದರೂ, ಏನೂ ಗೊತ್ತಿಲ್ಲದಂತೆ ನಾಟಕವಾಡುತ್ತಿದ್ದಾರೆ. ಬೆಳೆ ನಷ್ಟ ಸಮೀಕ್ಷೆಯನ್ನು ಮಾಡದೇ ಕಾಲಹರಣ ಮಾಡುತ್ತಿದ್ದಾರೆ. ಇನ್ನೊಂದು ವಾರದೊಳಗೆ ನಷ್ಟ ಪರಿಹಾರ ನೀಡದಿದ್ದರೆ ಜಿಲ್ಲೆಯಾದ್ಯಂತ ತಾಲ್ಲೂಕು ಕಚೇರಿಗಳಿಗೆ ಮುತ್ತಿಗೆ ಹಾಕಲಾಗುವುದು’ ಎಂದು ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಧನಂಜಯ ಎಚ್ಚರಿಕೆ ನೀಡಿದರು.

ಬೆಳೆ ಹಾನಿ ಸಮೀಕ್ಷೆ ಅಂತಿಮ ಹಂತಕ್ಕೆ ಬಂದಿದೆ. ಆದರೆ ಜಮೀನುಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡುತ್ತಿಲ್ಲ ಎಂಬ ದೂರುಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದುಧಿಕಾರಿ
ಟಿ.ವೆಂಕಟೇಶ್ ಜಿಲ್ಲಾ

35456 ಅರ್ಜಿ ಸಲ್ಲಿಕೆ

‘ಜಿಲ್ಲೆಯಲ್ಲಿ ಮಳೆಯಿಂದಾಗಿ 998 ಹೆಕ್ಟೇರ್ ಪ್ರದೇಶದಲ್ಲಿ ಹಾನಿ ಉಂಟಾಗಿದೆ. ಅದರ ಸಮೀಕ್ಷೆ ಅಂತಿಮ ಹಂತಕ್ಕೆ ಬಂದಿದೆ. ವಿಮಾ ಕಂಪನಿಗಳಿಗೆ ರೈತರಿಂದ 35456 ಅರ್ಜಿಗಳು ಸಲ್ಲಿಕೆಯಾಗಿದ್ದು ಕಂಪನಿ ಅಧಿಕಾರಿಗಳು ಕೂಡ ಸಮೀಕ್ಷೆ ನಡೆಸುತ್ತಿದ್ದಾರೆ. 15– 20 ದಿನಗಳಲ್ಲಿ ರೈತರಿಗೆ ನಷ್ಟ ಪರಿಹಾರ ನೀಡಲಾಗುವುದು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಮಂಜುನಾಥ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.