ಹಿರಿಯೂರು: ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ–48ರಲ್ಲಿ ಕಸ್ತೂರಿ ರಂಗಪ್ಪನಹಳ್ಳಿ ಸಮೀಪ ಇರುವ ನಿತ್ಯಾನಂದ ಆಶ್ರಮದಲ್ಲಿ ಜುಲೈ 21ರಂದು ನಿತ್ಯಾನಂದ ಸೇವಾ ಸಮಿತಿ ನೇತೃತ್ವದಲ್ಲಿ 84ನೇ ಸತ್ಸಂಗ ಹಾಗೂ 8ನೇ ವರ್ಷದ ಗುರುಪೂರ್ಣಿಮೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಜುಲೈ 20ರಂದು ಸಂಜೆ 6ಕ್ಕೆ ನಿತ್ಯಾನಂದ ಸೇವಾ ಸಮಿತಿಯಿಂದ ಭಜನೆ, 7ಕ್ಕೆ ಮಲ್ಲೇಶ್ವರ ಶರಣರಿಂದ ಪ್ರವಚನ ಹಾಗೂ ಜ್ಞಾನಗುರುರಾಜ್ ಅವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಜುಲೈ 21ರಂದು ಬೆಳಿಗ್ಗೆ 4ಕ್ಕೆ ಅಭಿಷೇಕ, ಬೆಳಿಗ್ಗೆ 6ಕ್ಕೆ ಮಹಾಮಂಗಳಾರತಿ, 6.30ಕ್ಕೆ ಪೂರ್ಣಾನಂದ ಸ್ವಾಮೀಜಿ ಅವರಿಂದ ಅಖಂಡ ನಾಮಸ್ಮರಣೆಗೆ ಚಾಲನೆ, ಬೆಳಿಗ್ಗೆ 9ಕ್ಕೆ ಮಲ್ಲೇಶ್ವರ ಶರಣರಿಂದ ಸತ್ಸಂಗ ಪ್ರವಚನ ನಡೆಯಲಿದೆ. ಬೆಳಿಗ್ಗೆ 10.30ಕ್ಕೆ ಸದ್ಗುರು ಚಿದಾನಂದ ಸ್ವಾಮೀಜಿ ಅವರಿಂದ ಸತ್ಸಂಗ, ಬೆಳಿಗ್ಗೆ 11ಕ್ಕೆ ಪೂರ್ಣಾನಂದ ಸ್ವಾಮೀಜಿ ಅವರಿಂದ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ, ಮಧ್ಯಾಹ್ನ 12ಕ್ಕೆ ಆಶೀರ್ವಚನ, ಮಧ್ಯಾಹ್ನ 12.30ಕ್ಕೆ ಅವಧೂತ ಗಣೇಶಪುರಿ ನಿತ್ಯಾನಂದರ ಮೆರವಣಿಗೆ, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.

ಮುಖ್ಯಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್, ಸುಜ್ಞಾನ ಕುಟೀರದ ಮಲ್ಲೇಶ್ವರ ಶರಣರು, ಸದ್ಗುರು ಚಿದಾನಂದ ಸ್ವಾಮೀಜಿ, ಗಾಯಕ ಜ್ಞಾನಗುರುರಾಜ್ ಪಾಲ್ಗೊಳ್ಳಲಿದ್ದಾರೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.