ಹಿರಿಯೂರು: ‘ನಮಗೆ ಜನ್ಮ ಕೊಡುವುದು ತಾಯಿಯಾದರೆ, ಬದುಕು ನೀಡುವುದು ಕನ್ನಡ ಭಾಷೆ. ನಮ್ಮ ಭಾಷೆಯನ್ನು ತಾಯಿಯಂತೆಯೇ ಪ್ರೀತಿಸಿ, ಪೋಷಿಸಬೇಕು’ ಎಂದು ಅಂಬೇಡ್ಕರ್ ಪಿಯು ಕಾಲೇಜಿನ ಉಪನ್ಯಾಸಕ ಬಬ್ಬೂರು ಪ್ರಕಾಶ್ ಅಭಿಪ್ರಾಯಪಟ್ಟರು.

ನಗರದ ಹುಳಿಯಾರು ರಸ್ತೆಯಲ್ಲಿರುವ ಬಿಇಟಿ ಯೂರೋ ಕಿಡ್ಸ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಕನ್ನಡ ಹಬ್ಬ ಮತ್ತು ಅಜ್ಜ-ಅಜ್ಜಿಯಂದಿರ ದಿನದ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಜಗತ್ತಿನಲ್ಲಿಯೇ ಅತ್ಯಂತ ಶ್ರೀಮಂತ ಭಾಷೆಯಾಗಿದೆ. ಹರಿದು ಹಂಚಿ ಹೋಗಿದ್ದ ಕರ್ನಾಟಕವನ್ನು ಒಂದುಗೂಡಿಸುವ ನಿಟ್ಟಿನಲ್ಲಿ ನಡೆದ ಏಕೀಕರಣ ಚಳವಳಿ ಅವಿಸ್ಮರಣೀಯ. ಸಾವಿರಾರು ಜನರ ಹೋರಾಟ, ತ್ಯಾಗ, ಬಲಿದಾನದಿಂದ 1956ರ ನ. 1ರಂದು ಏಕೀಕೃತ ಮೈಸೂರು ರಾಜ್ಯ ಅಸ್ಥಿತ್ವಕ್ಕೆ ಬಂದಿತು. 1973ರ ನ.1 ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರು ನಾಮಕರಣ ಮಾಡಲಾಯಿತು. ಯುವಕರು ಕನ್ನಡ ನಾಡು, ನುಡಿಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತರಾಗಬೇಕು ಎಂದು ಮನವಿ ಮಾಡಿದರು.

ವಿದ್ಯಾಸಂಸ್ಥೆ ಅಧ್ಯಕ್ಷ ಎಚ್.ಯು.ಘನಶಂಕರ್, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಆದಿವಾಲ ಚಮನ್ ಷರೀಫ್, ಸಮಾಜ ಸೇವಕಿ ಶಶಿಕಲಾ ರವಿಶಂಕರ್ ಮಾತನಾಡಿದರು.

ಶಿಕ್ಷಕಿಯರಾದ ಕೀರ್ತನ ಘನಶಂಕರ್, ರೇಷ್ಮಾ, ವಿಜಯ್, ಹ್ಯಾಣಿ ಜಾಕೋಬ್, ಜ್ಯೋತಿಲಕ್ಷ್ಮಿ, ಅರ್ಚನಾ, ಯಶಸ್ವಿನಿ, ಸಫೀನಾ, ನೇತ್ರಾವತಿ, ನೌಶ, ಜಾಕಿರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.