ಹಿರಿಯೂರು: ತಿರುಪತಿ ದೇವಸ್ಥಾನಕ್ಕೆ ನಂದಿನಿ ಬ್ರ್ಯಾಂಡ್ನ ತುಪ್ಪ ಖರೀದಿಸುವ ಮೂಲಕ ನಂದಿನಿ ಉತ್ಪನ್ನಗಳು ಅತ್ಯಂತ ವಿಶ್ವಾಸಾರ್ಹ ಎಂಬುದು ಸಾಬೀತಾಗಿದೆ ಎಂದು ಶಿವಮೊಗ್ಗ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಬಿ.ಸಿ. ಸಂಜೀವಮೂರ್ತಿ ಸಂತಸ ವ್ಯಕ್ತಪಡಿಸಿದರು.

ತಾಲ್ಲೂಕಿನ ಕಳವಿಬಾಗಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಘಟಕದ ಪ್ರಾರಂಭೋತ್ಸವ ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಾಲು ಉತ್ಪಾದಕರು ಗುಣಮಟ್ಟದ ಹಾಲು ಸರಬರಾಜು ಮಾಡಿದಲ್ಲಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ಹಾಗೂ ಉಪ ಉತ್ಪನ್ನಗಳನ್ನು ತಯಾರಿಸಿ ಪೂರೈಸಬಹುದು. ಹಾಲು ಒಕ್ಕೂಟ ಸದಾ ಉತ್ಪಾದಕರು ಹಾಗೂ ಗ್ರಾಹಕ ಸ್ನೇಹಿಯಾಗಿ ಕೆಲಸ ಮಾಡುತ್ತದೆ. ಒಕ್ಕೂಟದಿಂದ ದೊರೆಯುವ ನೆರವಿನ ಸದ್ಬಳಕೆ ಮಾಡಿಕೊಂಡು ರೈತರು ಹೆಚ್ಚು ಹಾಲು ಉತ್ಪಾದಿಸಬೇಕು ಎಂದು ಹೇಳಿದರು.

ಗ್ರಾಮದಲ್ಲೇ ದಿನವೊಂದಕ್ಕೆ ಸುಮಾರು 400 ಲೀ. ಹಾಲು ಶೇಖರಣೆಯಾಗುತ್ತಿದ್ದು, ಬೇರೆ ಗ್ರಾಮಕ್ಕೆ ಸರಬರಾಜು ಮಾಡುವ ಕಾರಣ ಹಾಲು ಉತ್ಪಾದಕರಿಗೆ ಬಾಡಿಗೆ ಇತ್ಯಾದಿ ಖರ್ಚು ಬರುತ್ತಿತ್ತು. ಉತ್ಪಾದಕರ ಬೇಡಿಕೆಯಂತೆ ಗ್ರಾಮಕ್ಕೆ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಮಂಜೂರು ಮಾಡಿಸಿರುವುದು ಸಂತಸದ ಸಂಗತಿ ಎಂದು ಸಂಘದ ಅಧ್ಯಕ್ಷ ಜೆ. ರಂಗನಾಥ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾರ್ಗ ವಿಸ್ತರಣಾಧಿಕಾರಿ ನಯಾಜ್ ಬೇಗ್ ಹಾಲಿನ ಗುಣಮಟ್ಟ ಕಾಪಾಡುವ ಕುರಿತು ಮಾಹಿತಿ ನೀಡಿದರು.

ಸಹಾಯಕ ವಿಸ್ತರಣಾಧಿಕಾರಿ ಪೃಥ್ವಿ, ಸಂಘದ ಕಾರ್ಯದರ್ಶಿ ಪಾಂಡುರಂಗ, ಉಪಾಧ್ಯಕ್ಷ ಜಿ. ದೇವರಾಜ್, ಸದಸ್ಯರಾದ ತಿಪ್ಪೇಸ್ವಾಮಿ ಪಿ.ಟಿ. ಆನಂದ್, ಲೋಕಮ್ಮ, ಶಶಿಕಲಾ, ಎಸ್. ರಂಗಸ್ವಾಮಿ, ಲಕ್ಷ್ಮೀದೇವಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.