ಹಿರಿಯೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಖಂಡಿಸಿ ತಾಲ್ಲೂಕಿನ ಮಸ್ಕಲ್ ಮಟ್ಟಿ ಗ್ರಾಮದಿಂದ ಭೀಮನಬಂಡೆವರೆಗೆ ಕಾಂಗ್ರೆಸ್ ಮುಖಂಡರು ಪಾದಯಾತ್ರೆ ನಡೆಸಿದರು.

ಮಸ್ಕಲ್ ಮಟ್ಟಿ ಗ್ರಾಮದಿಂದ ಪಾದಯಾತ್ರೆ ಆರಂಭಿಸುವುದಕ್ಕೆ ಮುಂಚೆ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು.

ಸಿದ್ದರಾಮಯ್ಯ ಅವರು ನಿಷ್ಕಳಂಕ ರಾಜಕಾರಣಿಯಾಗಿದ್ದು, ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಬಿಜೆಪಿ–ಜೆಡಿಎಸ್ ಮಾಡುತ್ತಿವೆ. ಸತ್ಯ ಎಂದಿದ್ದರೂ ಹೊರಕ್ಕೆ ಬಂದೇ ಬರುತ್ತದೆ. ಜನತಾ ನ್ಯಾಯಾಲಯದಲ್ಲಿ ಗೆಲುವು ಪಡೆದಿರುವ ಮುಖ್ಯಮಂತ್ರಿ ಅವರು ಕಾನೂನು ಹೋರಾಟದ ಮೂಲಕ ನ್ಯಾಯಾಲಯದಲ್ಲೂ ಗೆಲುವು ಪಡೆಯಲಿದ್ದಾರೆ. ನಾಡಿನ ಬಹುಸಂಖ್ಯಾತ ವರ್ಗ ಸಿಎಂ ಅವರ ಜೊತೆಗಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಕುಮಾರನಾಯ್ಕ ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಮಸ್ಕಲ್ ಅಧ್ಯಕ್ಷ ಎಂ.ಎ.ಶ್ರೀನಿವಾಸ್, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ವೈ.ನಾಗರಾಜ್, ಮುಖ೦ಡರಾದ ಖಾದಿ ರಮೇಶ್, ಅಮೃತೇಶ್ವರಸ್ವಾಮಿ, ಕ೦ದಿಕೆರೆ ಸುರೇಶ್ ಬಾಬು, ಶಶಿಕಲಾ ಸುರೇಶ್ ಬಾಬು, ಸುಬ್ರಮಣಿಯಪ್ಪ, ಗೋವಿ೦ದರಾಜ್, ಹೇಮ೦ತಗೌಡ, ಎಂ.ಪಿ.ತಿಪ್ಪೇಸ್ವಾಮಿ, ರಾಜಪ್ಪಸ್ವಾಮಿ, ಪರಮೇಶ್, ಸೆ೦ದಿಲ್ ಕುಮಾರ್, ಸರವಣಕುಮಾರ್, ಮನೋಹರ್, ಕುಪ್ಪಣ್ಣನವರ ಮ೦ಜುನಾಥ್, ಕುಪ್ಪಣ್ಣನವರ ಮಣಿಕ೦ಠ, ಕಾ೦ಗ್ರೆಸ್ ಈರಣ್ಣ, ಕೆ.ನಾಗರಾಜ್, ಬ್ಯಾಡರಹಳ್ಳಿಬಾಬು, ಆನ೦ದ್ ಕುಮಾರ್, ಮೂರ್ತಣ್ಣ, ರವಿ, ಅವಿನಾಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.