ಚಳ್ಳಕೆರೆ: ಮಳೆಗಾಗಿ ಪ್ರಾರ್ಥಿಸಿ ತಾಲ್ಲೂಕಿನ ಗಡಿ ಗ್ರಾಮ ಕಾಲುವೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌಡರಹಟ್ಟಿ ಗ್ರಾಮಸ್ಥರು ಶನಿವಾರ ಕತ್ತೆಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಮುಖ ಬೀದಿಯಲ್ಲಿ ತಮಟೆ ವಾದ್ಯದೊಂದಿಗೆ ಮೆರವಣಿಗೆ ನಡೆಸಿದರು.

ಗ್ರಾಮದ ಮುಖಂಡ ಎಸ್.ರಂಗಪ್ಪ, ‘ಮುಂಗಾರು ಹಂಗಾಮಿನಲ್ಲಿ ಮೊದಲ ಹಂತದಲ್ಲಿ ಬಿತ್ತಿರುವ ಶೇಂಗಾ, ತೊಗರಿ, ಸಜ್ಜೆ, ಔಡಲ, ಸಿರಿಧಾನ್ಯ ಮುಂತಾದ ಬೆಳೆ ಮಳೆ ಇಲ್ಲದ ಕಾರಣ ಬಾಡುತ್ತಿವೆ. ಎರಡನೇ ಹಂತದ ಬಿತ್ತನೆಗೆ ಶೇಂಗಾ ಬೀಜ– ಗೊಬ್ಬರ ಸಿದ್ಧತೆ ಮಾಡಿಕೊಂಡು ಮುಗಿಲ ಕಡೆ ಮಳೆ ಎದುರು ನೋಡುವಂತಾಗಿದೆ. ಇನ್ನು 3–4 ದಿನಗಳಲ್ಲಿ ಮಳೆ ಬರದೆ ಹೋದರೆ ಜೀವನ ನಡೆಸಲು ತುಂಬಾ ಕಷ್ಟವಾಗುತ್ತದೆ. ನಗರಪ್ರದೇಶಕ್ಕೆ ಗುಳೆ ಹೋಗುವ ಪರಿಸ್ಥಿತಿ ಒದಗಿಬರುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ರೈತ ಕೆ.ಪಿ.ಹನುಮಂತರಾಯ, ‘ರಾಜ್ಯದ ವಿವಿಧೆಡೆ ನದಿ, ಕಣಿವೆ, ಕೆರೆ– ಕಟ್ಟೆ ತುಂಬಿ ಜನರು ನೆರೆ ಹಾವಳಿ ಎದುರಿಸುತ್ತಿದ್ದರೂ ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆಯೇ ಇಲ್ಲ. ಬಯಲುಸೀಮೆ ಸಮಗ್ರ ನೀರಾವರಿ ಪ್ರದೇಶವನ್ನಾಗಿಸುವ ಮಹತ್ವಾಕಾಂಕ್ಷಿ ಯೋಜನೆ ಭದ್ರಾ ಮೇಲ್ದಂಡೆ ಯೋಜನೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ನನೆಗುದಿಗೆ ಬಿದ್ದಾಗಿದೆ’ ಎಂದು ಕೇಂದ್ರ ಸರ್ಕಾದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಮುಖಂಡ ಜಯಣ್ಣ, ಮಂಜುನಾಥ, ಮಲಕಿಸಾಬ್, ಕೃಷ್ಣಪ್ಪ, ಗೋಪಾಲಪ್ಪ, ಯರಓಬಳಯ್ಯ, ಎಸ್.ತಿಪ್ಪೇಶ್, ಜಿ.ಗಾದ್ರಿಪಾಲಯ್ಯ, ರಾಮಣ್ಣ, ಕಾಂತರಾಜ, ಗಾದ್ರಿಪಾಲ, ನಾಗರಾಜ, ಮಹಾಂತೇಶ್, ಗಂಗಾಧರ, ರಾಘವೇಂದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.