ಮೊಳಕಾಲ್ಮುರು: ತಾಲ್ಲೂಕಿನ ರಾಂಪುರದಲ್ಲಿ ಶನಿವಾರ ಸಂಜೆ ಪುರಿ ಜಗನ್ನಾಥ ರಥೋತ್ಸವ ವೈಭವದಿಂದ ನಡೆಯಿತು.

ಇಸ್ಕಾನ್ ಸಂಸ್ಥೆಯಿಂದ ಒರಿಸ್ಸಾದ ಪುರಿ ಜಗನ್ನಾಥ ರಥೋತ್ಸವ ಮಾದರಿಯಲ್ಲಿ ರಥೋತ್ಸವ ಹಮ್ಮಿಕೊಳ್ಳಲಾಗಿತ್ತು.

ರಥದಲ್ಲಿ ಜಗನ್ನಾಥ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಗ್ರಾಮದ ಮುಖ್ಯಬೀದಿಗಳಲ್ಲಿ ರಥವನ್ನು ಎಳೆಯಲಾಯಿತು.

ದಾರಿಯುದ್ದಕ್ಕೂ ಭಕ್ತರು ಕೀರ್ತನೆ, ಭಜನೆ ನಡೆಸಿಕೊಟ್ಟರು. ಡೊಳ್ಳು ಕುಣಿತ, ಗೊಂಬೆಗಳ ಕುಣಿತ ಗಮನ ಸೆಳೆದವು.

ಬಹಿರಂಗ ಸಭೆ ಮತ್ತು ಅನ್ನಸಂತರ್ಪಣೆ ನಡೆಯಿತು. ಇಸ್ಕಾನ್ ಸಂಸ್ಥೆಯ ಸುಧೀರ್ ಚೈತನ್ಯ ಪ್ರಭುಜೀ, ಉಡುಪಿ ಅಧ್ಯಕ್ಷ ರಕ್ತಕ್ ಗೋವಿಂದ್ ಪ್ರಭುಜೀ, ಮೈಸೂರು ಅಧ್ಯಕ್ಷ ವೇಣುಕೃಷ್ಣ, ರುದ್ರಾಕ್ಷಿ ಮಠದ ಡಾ. ವೀರಭದ್ರಯ್ಯ ಸ್ವಾಮೀಜಿ, ಮುಖಂಡ ಆರ್.ಜಿ. ಗಂಗಾಧರಪ್ಪ, ಇಸ್ಕಾನ್ ಸ್ಥಳೀಯ ಸಂಸ್ಥೆಯ ಗಿರಿಧರ್ ಶ್ಯಾಮ್ ಪ್ರಭುಜೀ, ಚಂದ್ರಮುಖ ನಾರಾಯಣದಾಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.