ನಾಯಕನಹಟ್ಟಿ: ಸೂರ್ಯಗ್ರಹಣದ ನಿಮಿತ್ತ ಗುರುತಿಪ್ಪೇರುದ್ರಸ್ವಾಮಿ ಒಳಮಠ, ಹೊರಮಠ ಸೇರಿದಂತೆ ಪಟ್ಟಣದ ಎಲ್ಲ ದೇವಾಲಯಗಳು ಮದ್ಯಾಹ್ನದಿಂದ ಸಂಜೆಯವರೆಗೂ ಮುಚ್ಚಿದ್ದವು.

ಗುರುತಿಪ್ಪೇರುದ್ರಸ್ವಾಮಿ ದೇವಾಲಯವು ಜಿಲ್ಲೆಯ ಪ್ರಮುಖ ಆರಾಧನಾ ಕೇಂದ್ರ. ನಿತ್ಯ ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ದೀಪಾವಳಿ ಪ್ರಯುಕ್ತ ಸೋಮವಾರ ಪಟ್ಟಣದ ಹೊರಮಠ ಮತ್ತು ಒಳಮಠಗಳೆರಡಲ್ಲೂ ಭಕ್ತರ ದಂಡೇ ಸೇರಿತ್ತು. ಆದರೆ ಮಂಗಳವಾರ ಕೇತುಗ್ರಸ್ಥ ಸೂರ್ಯಗ್ರಹಣದ ನಿಮಿತ್ತ ಗುರುತಿಪ್ಪೇರುದ್ರಸ್ವಾಮಿ ದೇವಾಲಯಗಳ ಹೊರಮಠ ಮತ್ತು ಒಳಮಠಗಳನ್ನು ಮುಚ್ಚಬೇಕು ಎಂದು ಸರ್ಕಾರವೇ ಆದೇಶ ಹೊರಡಿಸಿದೆ. ಗುರುತಿಪ್ಪೇರುದ್ರಸ್ವಾಮಿ ದೇವಸ್ಥಾನ ಸೇರಿದಂತೆ ಪಟ್ಟಣದಲ್ಲಿರುವ
ವಿಜಯ ವೀರಭದ್ರಸ್ವಾಮಿ, ಆಂಜನೇಯಸ್ವಾಮಿ, ಈಶ್ವರ ದೇವಾಲಯ, ಶಾಂತಲಿಂಗೇಶ್ವರ ದೇವಾಳಯ, ಗಣೇಶ ದೇವಾಲಯಗಳು ಬಾಗಿಲು ಮುಚ್ಚಿದ್ದವು.

ಸಂಜೆ 7ಗಂಟೆಯ ನಂತರ ದೇವಾಲಯಗಳಲ್ಲಿ ಸ್ವಚ್ಚತೆಯ ಕಾರ್ಯಗಳು ಭರದಿಂದ ಸಾಗಿದವು. ನಂತರ ರಾತ್ರಿ 8ಕ್ಕೆ ದೇವಾಲಯಗಳಲ್ಲಿ ಗೋಪೂಜೆ ಸೇರಿದಂತೆ ವಿಶೇಷ ಹಲವು ಪೂಜೆ ಕೈಂಕರ್ಯಗಳು ಜರುಗಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.