ಚಿತ್ರದುರ್ಗ: ಬಾಹ್ಯಾಕಾಶ ರಂಗದಲ್ಲಿ ತನ್ನದೇ ಆದ ಮಹತ್ವದ ಮೈಲಿಗಲ್ಲು ಸ್ಥಾಪಿಸುತ್ತಿರುವ ಇಸ್ರೊ(ಭಾರತೀಯ ಬಾಹ್ಯಾಕಾಶ ಸಂಶೋದನಾ ಸಂಸ್ಥೆ) ಭಾನುವಾರ ಮತ್ತೊಂದು ಸಾಧನೆಗೆ ಸಾಕ್ಷಿಯಾಯಿತು. ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ಕುದಾಪುರ ಬಳಿ ಇರುವ ಡಿಆರ್‌ಡಿಒ ಟೆಸ್ಟ್ವರೇಂಜ್-2 ಆವರಣದಲ್ಲಿ ಮಹತ್ವದ ಪ್ರಯೋಗ ನಡೆಸಿತು.

'ಮರು ಬಳಕೆ ಬಾಹ್ಯಾಕಾಶ ವಾಹನ’( ಆರ್ ಎಲ್ ವಿ)ದ ಲ್ಯಾಂಡಿಂಗ್ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿತು. ಬೆಳಿಗ್ಗೆ 7 ಗಂಟೆಗೆ ‘ಪುಷ್ಪಕ್ ಗಗನ ನೌಕೆ’ ಆಗಸಕ್ಕೆ ಚಿಮ್ಮಿತು. ಎಸ್‌ಯುವಿ ಕಾರ್‌ನಷ್ಟು ದೊಡ್ಡ ಗಾತ್ರದ ರೆಕ್ಕೆ ಇರುವ ರಾಕೆಟ್ ಇದಾಗಿದ್ದು ಯಶಸ್ವಿಯಾಗಿ ಉಡಾವಣೆಗೊಂಡಿತು. ಲ್ಯಾಂಡ್ ಆಗಬೇಕಿದ್ದ ಪ್ರಯೋಗದಲ್ಲಿ ಮೂರನೇ ಮತ್ತು ಅಂತಿಮ ಬಾರಿಗೆ ಯಶಸ್ವಿಯಾಯಿತು.

ಇಸ್ರೊದ ಈ ಪ್ರಯೋಗವನ್ನು ಭಾರತದ ಆತ್ಮ ನಿರ್ಭರತೆ ಕಡೆಗಿನ ದಿಟ್ಟತನದ ಹೆಜ್ಜೆ ಎಂದೇ ಬಣ್ಣಿಸಲಾಗಿದೆ. ಪುಷ್ಪಕ್ ಗಗನ ನೌಕೆಯು ಮರು ಬಳಕೆ ಮಾಡಬಹುದಾದ ಬಾಹ್ಯಾಕಾಶ ವಾಹನವಾಗಿದೆ. ರಾಕೆಟ್ ರೀತಿ ಬಾಹ್ಯಾಕಾಶಕ್ಕೆ ಉಡಾವಣೆಗೊಳ್ಳುವ ಈ ವಾಹನ, ಮರಳಿ ಭೂಮಿಗೆ ಬಂದು ಲ್ಯಾಂಡ್ ಆಗುತ್ತದೆ. ಹಾಗಾಗಿ, ಈ ವಾಹನವನ್ನು ಸ್ವದೇಶಿ ಗಗನ ನೌಕೆ ಎಂದೇ ಬಣ್ಣಿಸಲಾಗಿದೆ.

ಮರು ಬಳಕೆ ರಾಕೆಟ್ ವಿಭಾಗದಲ್ಲಿ ಈ ವಾಹನ ಮಹತ್ವದ ಸ್ಥಾನ ಪಡೆದಿದೆ ಎಂದು ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.