ಮಂಗಳೂರು: ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾಮಠದ ರಜತ ಮಹೋತ್ಸವ ಇದೇ 26ರಂದು ನಡೆಯಲಿದೆ ಎಂದು ಶಾಖಾ ಮಠದ ಸ್ವಾಮೀಜಿ ಧರ್ಮಪಾಲನಾಥ ಶ್ರೀಗಳು ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜನವರಿ 1 ಮತ್ತು 2ರಂದು ಬಾಲಗಂಗಾಧರನಾಥ ಸ್ವಾಮೀಜಿ ಪಟ್ಟಾಭಿಷೇಕದ ಸುವರ್ಣ ಮಹೋತ್ಸವದ ಅಂಗವಾಗಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

1996ರಲ್ಲಿ ಕಾವೂರಿನ ತೋಡ್ಲಗುಡ್ಡದಲ್ಲಿ ಖರೀದಿಸಿದ 5 ಎಕರೆ ಜಾಗದಲ್ಲಿ 1999ರಲ್ಲಿ ಶಾಖಾಮಠ ಆರಂಭವಾಯಿತು. ನಂತರ ವಿದ್ಯಾಸಂಸ್ಥೆಗಳೂ ಆರಂಭಗೊಂಡವು. ಮಠದ ಶಾಲೆ 25ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ. ರಜತ ಮಹೋತ್ಸವ ಸಮಾರಂಭ 26ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದ್ದು ಆದಿಚುಂಚನಗಿರಿ ಶ್ರೀಗಳಾದ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಒಡಿಯೂರು ಶ್ರೀಗಳಾದ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ವಿವಿಧ ಕ್ಷೇತ್ರಗಳ 25 ಮಂದಿಗೆ ಕರಾವಳಿ ರತ್ನ ಪ್ರಶಸ್ತಿ ನೀಡಲಾವುದು ಎಂದು ಅವರು ವಿವರಿಸಿದರು.

ಪಟ್ಟಾಭಿಷೇಕ ಸುವರ್ಣ ಮಹೋತ್ಸವದ ಅಂಗವಾಗಿ ಜ.1ರಂದು ಮೆರವಣಿಗೆ, ₹ 18 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಕಾಲೇಜನ್ನು 2ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಅವರು ತಿಳಿಸಿದರು. ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಶಾಸಕ ಡಾ.ವೈ.ಭರತ್ ಶೆಟ್ಟಿ, ಸ್ವಾಗತ ಸಮಿತಿ ಅಧ್ಯಕ್ಷ ಪಿ.ಎಸ್. ಪ್ರಕಾಶ್ ಇದ್ದರು.

ಕರಾವಳಿ ರತ್ನ ಪ್ರಶಸ್ತಿಗೆ ಆಯ್ಕೆಯಾದವರು

ಕೆ. ಚಿನ್ನಪ್ಪಗೌಡ (ಸಾಹಿತ್ಯ), ಪ್ರೊ.ಕೆ.ವಿ.ರಾವ್ (ವಿಜ್ಞಾನ), ಗುರುವಪ್ಪ ಬಾಳೆಪುಣಿ (ಮಾಧ್ಯಮ), ಡಾ. ರಮೇಶ್ ಡಿ.ಪಿ, ಡಾ.ಸತೀಶ್ ಕಲ್ಲಿಮಾರ್ (ವೈದ್ಯಕೀಯ), ಪ್ರಕಾಶ್ ಅಂಚನ್ ಬಂಟ್ವಾಳ (ಶಿಕ್ಷಣ), ಮಾಧವ ಸುವರ್ಣ (ಧಾರ್ಮಿಕ), ಭಕ್ತಿಭೂಷಣ್ ದಾಸ್ (ಗೋಸೇವೆ), ಪುಷ್ಪಾವತಿ ಬುಡ್ಲೆಗುತ್ತು (ನಾಟಿ ವೈದ್ಯ), ವೀಣಾ ಕುಲಾಲ್ (ಸಮಾಜಸೇವೆ), ನರಸಿಂಹ ರಾವ್ ದೇವಸ್ಯ, ಕೆ.ಎಸ್.ಗೋಪಾಲಕೃಷ್ಣ ಕಾಂಚೋಡು, ಸುರೇಶ್ ಬಲ್ನಾಡು (ಕೃಷಿ), ಗೋಪಾಲಕೃಷ್ಣ ಭಟ್ (ಸಿನಿಮಾ), ಜಗದೀಶ್ ಆಚಾರ್ಯ (ಸಂಗೀತ), ಮಂಜುಳಾ ಸುಬ್ರಹ್ಮಣ್ಯ (ನೃತ್ಯ), ಶಿವರಾಮ ಪಣಂಬೂರು (ಯಕ್ಷಗಾನ), ಸುಜಾತಾ ಮಾರ್ಲ (ಯೋಗ), ಸಚಿನ್ ಸುಂದರಗೌಡ, ರಾಧಾಕೃಷ್ಣ, ಕೇಶವ ಅಮೈ, ಕುಸುಮಾಧರ (ಉದ್ಯಮ), ಅಭಿಷೇಕ್ ಶೆಟ್ಟಿ (ಕ್ರೀಡೆ), ಮಾಧವ ಉಳ್ಳಾಲ್ (ಪರಿಸರ), ವಿಕ್ರಂ ಬಿ.ಶೆಟ್ಟಿ (ಚಿತ್ರಕಲೆ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.