ಮೂಡುಬಿದಿರೆ: ಪರವಾನಗಿ ನವೀಕರಿಸದ ಕಾರಣಕ್ಕೆ ಇಲ್ಲಿನ ‘ಅಮರಶ್ರೀ’ ಚಿತ್ರಮಂದಿರಕ್ಕೆ ಕಂದಾಯ ಅಧಿಕಾರಿಗಳು ಗುರುವಾರ ಬೀಗ ಹಾಕಿದ್ದಾರೆ.

ನಾಲ್ಕು ದಶಕಗಳ ಹಿಂದೆ ಆರಂಭಗೊಂಡಿದ್ದ ಈ ಚಿತ್ರಮಂದಿರವನ್ನು ಸುಮಾರು ಹದಿಮೂರು ವರ್ಷಗಳಿಂದ ಕಾರ್ಕಳದ ಜೆರಾಲ್ಡ್ ಡಿಕೋಸ್ತಾ ಅವರು ಕರಾರು ಪ್ರಕಾರ ನಡೆಸಿಕೊಂಡು ಬರುತ್ತಿದ್ದರು ಎನ್ನಲಾಗಿದೆ.

ಇತ್ತೀಚೆಗೆ ಈ ಚಿತ್ರಮಂದಿರವನ್ನು ಬಿಟ್ಟುಕೊಡುವಂತೆ ಮಾಲೀಕರು ಕೇಳಿದ್ದಾರೆ ಎನ್ನಲಾಗಿದ್ದು, ಈ ವಿಚಾರದಲ್ಲಿ ಎರಡೂ ಕಡೆಯವರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿತ್ತು ಎನ್ನಲಾಗಿದೆ. ಈ ಬಗ್ಗೆ ಮಾಲೀಕರದಾದ ಡಾ.ಅಮರಶ್ರೀ ಅವರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು.
2022ರಿಂದ ಪರವಾನಗಿ ನವೀಕರಿಸದೆ ಇರುವುದು ಮತ್ತು ಚಿತ್ರಮಂದಿರವನ್ನು ಸರಿಯಾಗಿ ನಿರ್ವಹಣೆ ಮಾಡದೆ ಇರುವ ಕಾರಣ ನೀಡಿ ಚಿತ್ರಮಂದಿರಕ್ಕೆ ಬೀಗ ಹಾಕುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದರು.

ಗುರುವಾರ ಸಂಜೆ ಕಂದಾಯ ಅಧಿಕಾರಿಗಳು ಪೊಲೀಸ್ ಭದ್ರತೆಯೊಂದಿಗೆ ಚಿತ್ರಮಂದಿರಕ್ಕೆ ಬೀಗ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.