ಕುಳಾಯಿ ಮೀನುಗಾರಿಕಾ ಬಂದರಿನ ಕಾಮಗಾರಿ ಸದ್ಯಕ್ಕೆ ಸ್ಥಗಿತಗೊಂಡಿದೆ : ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಕುಳಾಯಿ ಮೀನುಗಾರಿಕಾ ಬಂದರಿನ ನೀಲನಕ್ಷೆ
ಮೀನುಗಾರರನ್ನು ವಿಶ್ವಾಸಕ್ಕೆ ಪಡೆದು ಅವರ ಸಲಹೆಯಂತೆ ಕುಳಾಯಿ ಮೀನುಗಾರಿಕಾ ಬಂದರಿನ ಕಾಮಗಾರಿಯನ್ನು ಆದಷ್ಟು ಬೇಗ ಪುನರಾರಂಭ ಮಾಡುತ್ತೇವೆ.
-ಕ್ಯಾ.ಬ್ರಿಜೇಶ್ ಚೌಟ ಸಂಸದ
ನವಮಂಗಳೂರು ಬಂದರಿಗೆ ಜಾಗ ನೀಡಿದ್ದು ಇಲ್ಲಿನ ನಾಡದೋಣಿ ಮೀನುಗಾರರು. ಹಾಗಾಗಿ ನಾಡದೋಣಿ ಮೀನುಗಾರಿಕೆ ನಡೆಸಲು ಯೋಗ್ಯವಾದ ಸರ್ವಋತು ಬಂದರನ್ನು ನಿರ್ಮಿಸಬೇಕು
-ಶರತ್ ಬಂಗೇರ ನಾಡದೋಣಿ ಮೀನುಗಾರ ಕುಳಾಯಿ
ಕುಳಾಯಿ ಮೀನುಗಾರಿಕಾ ಬಂದರಿನ ವಿನ್ಯಾಸದಲ್ಲಿ ಅಗತ್ಯ ಮಾರ್ಪಾಡುವ ಮಾಡಲು ಮೀನುಗಾರಿಕಾ ಸಚಿವರು ಕ್ರಮವಹಿಸಬೇಕು. ಈ ಬಂದರು ಹಣ ಪೋಲು ಮಾಡುವ ಸಾಧನವಾಗದೇ ಮೀನುಗಾರರಿಗೆ ಉಪಯೋಗವಾಗಬೇಕು
- ಅಶ್ವತ್ಥ್ ಕಾಂಚನ್ ದ.ಕ. ಕರಾವಳಿ ಮೂಲ ಮೀನುಗಾರರ ಸಂಘದ ಅಧ್ಯಕ್ಷ
ಕುಳಾಯಿ ಬಂದರು ಕಾಮಗಾರಿ ಆರಂಭಿಸುವ ಮುನ್ನವೇ ಮೀನುಗಾರರ ಬೇಕು– ಬೇಡಗಳನ್ನು ಪರಿಗಣಿಸಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಮೀನುಗಾರರನ್ನು ವಿಶ್ವಾಸಕ್ಕೆ ಪಡೆದರೆ ಇಂತಹ ಗೊಂದಲ ತಪ್ಪಿಸಬಹುದು.
-ಚೇತನ್ ಬೆಂಗ್ರೆ ದ.ಕ. ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ