ಬೆಳ್ತಂಗಡಿ (ದಕ್ಷಿಣ ಕನ್ನಡ): ಚಾರ್ಮಾಡಿ ಘಾಟಿ ರಸ್ತೆಯ ಚಾರ್ಮಾಡಿ ಹಳ್ಳದಿಂದ ಘಾಟಿಯ 11ನೇ ತಿರುವು ವರೆಗಿನ 11.2 ಕಿ.ಮೀ ಅಭಿವೃದ್ಧಿಯ ₹490 ಕೋಟಿ ವೆಚ್ಚದ ಕಾಮಗಾರಿಗೆ ಸಂಬಂಧಿಸಿದ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅನುಮೋದನೆ ನೀಡಿದೆ.

ಈ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿಯ ಮೊದಲ ಹಂತ ಬಂಟ್ವಾಳದ ಬಿ.ಸಿ ರೋಡ್‌ನಿಂದ ಪುಂಜಾಲಕಟ್ಟೆವರೆಗೆ ಪೂರ್ಣಗೊಂಡಿದ್ದು ಪುಂಜಾಲಕಟ್ಟೆಯಿಂದ ಚಾರ್ಮಾಡಿ ವರೆಗಿನ ಕಾಮಗಾರಿ ಪ್ರಗತಿಯಲ್ಲಿದೆ. ಚಾರ್ಮಾಡಿ ಘಾಟಿಯಲ್ಲಿ ಮೂರನೇ ಹಂತದ ಈ ಕಾಮಗಾರಿಯ ಡಿಪಿಆರ್ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಚಾರ್ಮಾಡಿ ಘಾಟಿ ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ 25 ಕಿ.ಮೀ ವ್ಯಾಪ್ತಿ ಹೊಂದಿದೆ. ಈ ಪೈಕಿ ದಕ್ಷಿಣ ಕನ್ನಡ ಭಾಗದ 11.20 ಕಿ.ಮೀ. ರಸ್ತೆ ಅಭಿವೃದ್ಧಿ ಹೊಂದಲಿದೆ. ರಸ್ತೆ 10 ಮೀಟರ್ ಅಗಲದ್ದಾಗಲಿದೆ.

₹7,745 ಕೋಟಿ ವೆಚ್ಚದಲ್ಲಿ ದೇಶದ ಒಟ್ಟು 588 ಕಿ.ಮೀ ರಸ್ತೆಯ 21 ಯೋಜನೆಗಳ ಪ್ರಸ್ತಾವಕ್ಕೆ ಅನುಮೋದನೆ ಲಭಿಸಿದೆ. ಈ ಯೋಜನೆಗಳಲ್ಲಿ ಚಾರ್ಮಾಡಿ ಘಾಟಿಯ ಅಭಿವೃದ್ಧಿಯೂ ಸೇರಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಮೌಲಿಕ್ ಎ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.