ಉಜಿರೆ(ದಕ್ಷಿಣ ಕನ್ನಡ): ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ (ಎಸ್ಕೆಡಿಆರ್ಡಿಪಿ) ಸ್ವಸಹಾಯ ಸಂಘಗಳ ಸದಸ್ಯರಿಗೆ ಒಟ್ಟು ₹ 605 ಕೋಟಿ ಲಾಭಾಂಶ ವಿತರಿಸಲಾಯಿತು.

ಧರ್ಮಸ್ಥಳದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಬೆಳ್ತಂಗಡಿಯ ಧನ್ಯಶ್ರೀ ಸಂಘ, ಕುಂದಾಪುರದ ಶ್ರೀನಿಧಿ ಸಂಘ, ಹೊಸಪೇಟೆಯ ಶ್ರೀಶಂಕರ ಸಂಘ, ಆನೇಕಲ್ ನ ಅಪೂರ್ವ ಸಂಘ, ಖಾನಾಪುರದ ಅಹದ್ ಸಂಘ, ಹಾಸನದ ರೋಶನ್ ಸಂಘಗಳ ಸದಸ್ಯರಿಗೆ ಲಾಭಾಂಶದ ಚೆಕ್ ವಿತರಿಸಿದರು.

ಬಳಿಕ ಮಾತನಾಡಿದ ಅವರು, 'ಹಿಂದೆ ಗ್ರಾಮೀಣಾಭಿವೃದ್ಧಿ ಎಂಬುದು ಕಲ್ಯಾಣ ಕಾರ್ಯಕ್ರಮಕ್ಕೆ ಸೀಮಿತ ಆಗಿತ್ತು. ಸರ್ಕಾರ ಸ್ವಸಹಾಯ ಗುಂಪುಗಳಿಗೆ ಹಣಕಾಸಿನ ನೆರವು ನೀಡುತ್ತಿತ್ತು. ಅವರು ಅದನ್ನು ಸಣ್ಣ ಪುಟ್ಟ ಉದ್ದೇಶಗಳಿಗೆ ಬಳಸುತ್ತಿದ್ದರು. ಆದರೆ, ಈಗ ಗ್ರಾಮೀಣಾಭಿವೃದ್ಧಿಯ ಪರಿಕಲ್ಪನೆ ಬದಲಾಗಿದೆ. ಈಗ ಕಲ್ಯಾಣ ಕಾರ್ಯಕ್ರಮದ ಮೂಲಕ ಮಹಿಳೆಯರೂ ಸ್ವಾವಲಂಬಿಗಳಾಗುತ್ತಿದ್ದಾರೆ. ಅಷ್ಟೇ ಅಲ್ಲ, 'ನನ್ನ ಲಾಭಾಂಶವನ್ನು ನಾನೇ ಗಳಿಸುತ್ತಿದ್ದೇನೆ" ಎಂಬ ಅತ್ಮಗೌರವವನ್ನೂ ಅವರು ಪಡೆಯುತ್ತಿದ್ದಾರೆ. ಇದರಲ್ಲಿ ಕೇಂದ್ರ ಸರ್ಕಾರ ಹಾಗೂ ಸ್ವಸಹಾಯ ಸಂಘಗಳೆರಡರ ಪಾತ್ರವೂ ಇದೆ. ಕಲ್ಯಾಣ ಎಂಬುದು ಯಾವುದೇ ಉದಾರ ಕೊಡುಗೆಯ ಕುರುಹಾಗಿ ಉಳಿದಿಲ್ಲ' ಎಂದರು. 'ಮಹಿಳೆಯರಲ್ಲಿಯೂ ಸಾಮರ್ಥ್ಯವಿದೆ. ಅವರೂ ಉತ್ಪನ್ನ ತಯಾರಿಸಬಲ್ಲರು. ಮೌಲ್ಯವರ್ಧನೆ ಮಾಡಿ ಲಾಭ ಗಳಿಸಬಲ್ಲರು, ಅವರೂ ಮಾರುಕಟ್ಟೆ ಸೃಷ್ಡಿಸಬಲ್ಲರು. ಅವರು ತಯಾರಿಸುವ ಉತ್ಪನ್ನಗಳನ್ನು ಗ್ರಾಹಕರು ಖರೀದಿಸುತ್ತಾರೆ. ಅದರಿಂದ ಬರುವ ಲಾಭಾಂಶವನ್ನು ಅವರು ಘನತೆಯಿಂದ ಪಡೆದುಕೊಳ್ಳುತ್ತಿದ್ದಾರೆ' ಎಂದರು.

'ದೇಶದ ಜನರ ಸಬಲೀಕರಣವೇ ಬಡತನ ನಿರ್ಮೂಲನೆಯ ಸಾಧನ. ಈ ಸಬಲೀಕರಣವು ಜನರಿಗೆ ಹಣ ಗಳಿಸುವುದಕ್ಕೆ, ಸ್ವಂತ ನಿರ್ಧಾರ ತಳೆಯುವುದಕ್ಕೆ, ಅವಕಾಶಗಳನ್ನು ಕಲ್ಪಿಸುತ್ತಿದೆ. ಸರ್ಕಾರವು ಜನರ ತೆರಿಗೆ ಹಣದಲ್ಲಿ ಮಾಡಿರುವ ಹೂಡಿಕೆಯು ಸಾರ್ವಜನಿಕರು ಬಳಸುವಂತಹ ಡಿಜಿಟಲ್ ವೇದಿಕೆಗಳಂತಹ ಮೂಲಸೌಕರ್ಯವನ್ನು ಸೃಷ್ಟಿಸುತ್ತಿದೆ. ಸ್ವಸಹಾಯ ಸಂಘಗಳೂ ತಮ್ಮ ಉತ್ಪನ್ನಗಳನ್ನು ಇವುಗಳಲ್ಲಿ ಪ್ರದರ್ಶಿಸಿ ಮಾರಾಟ ಮಾಡಲು ಅನುವು ಮಾಡಿಕೊಡುತ್ತಿದೆ. ಅವರೂ ಡಿಜಿಟಲ್ ಮಾರುಕಟ್ಟೆಯನ್ನು ಬಳಸಿಕೊಳ್ಳಲು ಮತ್ತು ವಹಿವಾಟಿನ ಹಣವನ್ನು ಡಿಜಿಟಲ್ ರೂಪದಲ್ಲೇ ಪಡೆಯಲು ಅವಕಾಶ ಕಲ್ಪಿಸಲಾಗುತ್ತಿದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಗಳಂತಹ ಉತ್ತೇಜನಾ ಸಂಸ್ಥೆಗಳೂ ಇಂತಹ ಡಿಜಿಟಲ್ ರೂಪದಲ್ಲಿ ಸರ್ಕಾರ ಹೂಡಿಕೆಯ ಪ್ರಯೋಜನವನ್ನು ಜನರಿಗೆ ತಲುಪಿಸಲು ನೆರವಾಗುತ್ತಿವೆ' ಎಂದರು.

'ಧರ್ಮಸ್ಥಳದ ಸಮೂಹ ಸಂಸ್ಥೆಗಳು ದಶಕಗಳಿಂದ ಗ್ರಾಮೀಣಾಭಿವೃದ್ಧಿ ಕಾರ್ಯಗಳಲ್ಲಿ ಸರ್ಕಾರದ ಜೊತೆ ಸಹಕರಿಸುತ್ತಿವೆ. ಗ್ರಾಮಿಣಾಭಿವೃದ್ಧಿಗಾಗಿ ಒಂದಲ್ಲ ಒಂದು ಚಟುವಟಿಕೆ ಹಮ್ಮಿಕೊಳ್ಳುತ್ತಿವೆ.

ಸರ್ಕಾರದ ನೀತಿಯೂ ಇದನ್ನು ಗುರುತಿಸಿದೆ. ಎಸ್ ಕೆ ಡಿಆರ್ ಡಿಪಿ ಯು ಸರ್ಕಾರಿ ಯೋಜನೆಗಳ ಪ್ರಯೋಗಶಾಲೆ ಇದ್ದಂತೆ. ಇಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನವಾದ ಕಾರ್ಯಕ್ರಮಗಳ ಯಶಸ್ಸನ್ನು ಆಧರಿಸಿ ಅವುಗಳನ್ನು ರಾಷ್ಡ್ರಮಟ್ಟದಲ್ಲಿ ಸರ್ಕಾರದ ನೀತಿಯಾಗಿ ಜಾರಿಗೊಳಿಸಲಾಗುತ್ತಿದೆ' ಎಂದರು..

'ಗ್ರಾಮೀಣ ಅಭಿವೃದ್ಧಿ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನ ಆಗುತ್ತಿರುವುದರಿಂದಲೇ ಸ್ವಸಹಾಯ ಸಂಘಗಳಿಗೆ ಲಾಭಾಂಶವನ್ನೂ ಹಂಚುವ ಕೆಲಸ ಆಗುತ್ತಿದೆ. 100 ವರ್ಷಗಳಿಗೂ ಹೆಚ್ಚು ಕಾಲ ಬ್ರಿಟಿಷರು, ಪೋರ್ಚುಗೀಸರು, ಫ್ರೆಂಚ್ ಆಡಳಿತದಿಂದ ಕಳೆದುಕೊಂಡ ವೈಭವವನ್ನು ನಾವು ನಮ್ಮದೇ ಆಲ್ವಿಕೆಯಲ್ಲಿ ಸ್ವಸಾಮರ್ಥ್ಯದಿಂದಲೇ ಮರಳಿಪಡೆಯಬೇಕಿದೆ' ಎಂದರು.

ನಬಾರ್ಡ್ ಅಧ್ಯಕ್ಷ ಶಾಜಿ ಕೆ.ವಿ., 'ನಬಾರ್ಡ್ ಹಾಗೂ ಎಸ್ಕೆಡಿಆರ್ಡಿಪಿ ಒಂದೇ ವರ್ಷ ಜನ್ಮತಾಳಿದ ಅವಳಿ ಸಂಸ್ಥೆಗಳು. ಇವು ಗ್ರಾಮೀಣ ಜನರ ಆರ್ಥಿಕ ಸ್ವಾವಲಂಬನೆ, ಸುಸ್ಥಿರ ಕೃಷಿ ಸಾಮಾಜಿಕ ಸ್ವಾಸ್ಥ್ಯ, ಸಮುದಾಯ ನಿರ್ಮಾಣ, ಆರೋಗ್ಯ ಮತ್ತು ಶಿಕ್ಷಣದಲ್ಲಿ ಜೊತೆಯಾಗಿ ಕೆಲಸ ಮಾಡಿವೆ. ಇದರ ಪರಿಣಾಮವಾಗಿ ಕಾರ್ಮಿಕ ಬಲದಲ್ಲಿ ಮಹಿಳೆಯರ ಭಾಗವಹಿಸುವಿಕೆ ಶೇ 53ಕ್ಕೆ ಹೆಚ್ಚಿದೆ. ಜನರ ಜೀವನಮಟ್ಟ ಸುಧಾರಣೆಯಾಗಿ ತಲಾ ಅದಾಯವೂ ಈ ಭಾಗದಲ್ಲಿ ಹೆಚ್ಚಳವಾಗಿದೆ' ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, 'ಪ್ರಧಾನಿ ನರೇಂದ್ರ ಮೋದಿ ಸ್ತ್ರೀ ಶಕ್ತಿಯನ್ನು ಜಾಗೃತಗೊಳಿಸಿದ್ದಾರೆ. ಎಲ್ಲ ಮನೆ ಮನೆಯಲ್ಲಿ ಮಹಿಳೆಯರೇ ನಾಯಕತ್ವ ವಹಿಸಿದ್ದಾರೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲೂ 55 ಲಕ್ಷ ಸದಸ್ಯರಲ್ಲಿ 34 ಲಕ್ಷ ಸದಸ್ಯರು ಮಹಿಳೆಯರು. ಅವರ ಪಾಲು ಶೇ 63ರಷ್ಟಿದೆ. ಎಲ್ಲ ಹೆಣ್ಣು ಮಕ್ಕಳೂ ಮನೆಯ ಆರ್ಥಿಕ ಸಚಿವರಾಗಿದ್ದಾರೆ. ನಿಜವಾದ ಅರ್ಥದಲ್ಲೇ ಗೃಹಲಕ್ಷ್ಮೀ ಆಗಿದ್ದಾರೆ' ಎಂದರು.

'ಯಾರೂ ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಿಸುವ ಯೋಚನೆ ಮಾಡಿಲ್ಲ. ನಾವು ಅದನ್ನು ಮಾಡಿ ತೋರಿಸಿದ್ದೇವೆ. ಸರಿಯಾದ ವ್ಯವಹಾರ ನಡೆಸಿದರೆ, ಮೊಸರನ್ನು ಕಡೆದು ಬೆಣ್ಣೆ ತಗೆವಂತೆ ಲಾಭಾಂಶ ಪಡೆಯಬಹುದು ಎಂಬುದನ್ನು ಈ ಮಹಿಳೆಯರು ತೋರಿಸಿದ್ದಾರೆ. ಕೆಲ ಮಹಿಳೆಯರು ₹ 10 ಸಾವಿರದವರೆಗೂ ಲಾಭ ಪಡೆದಿದ್ದಾರೆ. ನಾವು ₹ 24,500 ಕೋಟಿ ಸಾಲ ಪಡೆದು ಅದಕ್ಕೆ ಗ್ಯಾರಂಟಿ ನೀಡಿದ್ದೇವೆ. ಸದಸ್ಯರು ಸರಿಯಾಗಿ ಮರುಪಾವತಿ ಮಾಡಿದ್ದರಿಂದ ಬ್ಯಾಂಕ್ ಗಳು ಮತ್ತೆ 1 ಸಾವಿರ ಕೋಟಿ ಸಾಲ ತೆಗದುಕೊಳ್ಳಿ ಎನ್ನುತ್ತಿವೆ. ನಮ್ಮ ಸ್ವಸಹಾಯ ಸಂಘಗಳ ಮೂಲಕ ನೀಡುವ ಹಣ ವಾಪಾಸ್ ಬರುತ್ತದೆ. ಸರಿಯಾಗಿ ಬಳಕೆ ಆಗುತ್ತದೆ ಎಂಬ ದೈರ್ಯ ಅವರಿಗೆ' ಎಂದರು.

ಈ ಮಾದರಿಯನ್ನು ದೇಶದ ಬೇರೆ ಭಾಗಗಳಿಗೂ ವಿಸ್ತರಿಸಬೇಕು. ಬೇರೆ ರಾಜ್ಯದಲ್ಲೂ ಇದನ್ನು ಮಾಡಲು ಸಾಧ್ಯವಿದೆ. ಆರ್ಥಿಕ ಶಿಸ್ತನ್ನು ಎಲ್ಲರೂ ಪಾಲಿಸಿದರೆ ಈ ಮಾದರಿ ಯಶಸ್ವಿಯಾಗಲಿದೆ ಎಂದರು.

ಹಳ್ಳಿಯ ಹೆಣ್ಣುಮಕ್ಜಳೂ ₹ 5 ಲಕ್ಷದವರೆಗೂ ಸಾಲ ಪಡೆಯತ್ತಿದ್ದಾರೆ. ಡಿಜಿಟಲೀಕರಣ ಹಳ್ಳಿಗಳಲ್ಲಿ ಸಾಧ್ಯವಿಲ್ಲ ಎನ್ನುತ್ತಿದ್ದರು. ಹಳ್ಳಿಯ ಹೆಣ್ಣು ಮಕ್ಕಳು ಕಂಪ್ಯೂಟರ್ ಕಲಿತಿದ್ದಾರೆ. ಮೊಬೈಲ್ ನಲ್ಲಿ ವಿವರ ಅಪ್ಲೋಡ್ ಮಾಡುತ್ತಾರೆ. ಅಕ್ಷರ ಕಲಿಯದವರೂ ನೋಟುಗಳನ್ನು ಸರಿಯಾಗಿ ಎಣಿಸುತ್ತಾರೆ ಎಂದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವಿ.ಹೆಗ್ಗಡೆ ಭಾಗವಹಿಸಿದ್ದರು.

ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್ ಸ್ವಾಗತಿಸಿದರು. ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ್ ಸುವರ್ಣ ಧನ್ಯವಾದ ಸಮರ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.