ಮಂಗಳೂರು: ಮಂಗಳೂರು ತಾಲ್ಲೂಕಿನ ಮಂಜು ಎಂ., ಹಾಗೂ ಮೂಡುಬಿದಿರೆ ತಾಲ್ಲೂಕಿನ ದೀಕ್ಷಿತಾ ರಾಮಕೃಷ್ಣ ಗೌಡ ಅವರು ಇಲ್ಲಿನ ಮಂಗಳಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗದಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದ ವೇಗದ ಓಟಗಾರರಾಗಿ ಹೊರಹೊಮ್ಮಿದರು.

ಪುರುಷರ ವಿಭಾಗದ 100 ಮೀ ಓಟದ ಸ್ಪರ್ಧೆಯಲ್ಲಿ ಮಂಜು ಅವರು ಮಂಗಳೂರು ತಾಲ್ಲೂಕಿನವರೇ ಆದ ಸುಮಂತ್ ಕೆ.ಬಿ (11.30 ಸೆ.) ಅವರನ್ನು ಹಿಂದಿಕ್ಕಿ 11.10 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಬೆಳ್ತಂಗಡಿ ತಾಲ್ಲೂಕಿನ ವರುಣ್ (11.50 ಸೆ.) ಮೂರನೇ ಸ್ಥಾನ ಪಡೆದರು. ಮಹಿಳೆಯರ ವಿಭಾಗದ 100 ಮೀ ಓಟದ ಸ್ಪರ್ಧೆಯಲ್ಲಿ ದೀಕ್ಷಿತಾ ಆರ್. ಗೌಡ ಅವರು 12.60 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಪುತ್ತೂರು ತಾಲ್ಲೂಕಿನ ಅನಘಾ ಕೆ.ಎನ್ (13.60 ಸೆ.) ಹಾಗೂ ಮಂಗಳೂರು ತಾಲ್ಲೂಕಿನ ಸಾತ್ವಿ ಶೆಟ್ಟಿ (13.80 ಸೆ.) ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು.

ಉದ್ಘಾಟನೆ: ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿದರು. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ವೈ ನಾಯಕ್, ದಕ್ಷಿಣ ಕನ್ನಡ ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯೇಷನ್ ಅಧ್ಯಕ್ಷ ಧನರಾಜ್, ವೇಟ್ ಲಿಫ್ಟಿಂಗ್ ತರಬೇತುದಾರರಾದ ಸರಸ್ವತಿ ಪುತ್ರನ್, ದಕ್ಷಿಣ ಕನ್ನಡ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷೆ ಲಿಲ್ಲಿ ಪಾಯಸ್, ಸುಳ್ಯ ದಸರಾ ಕ್ರೀಡಾಕೂಟದ ನೋಡಲ್ ಅಧಿಕಾರಿ ದೇವರಾಜ ಮುತ್ಲಾಜೆ, ಅಥ್ಲೆಟಿಕ್ ತರಬೇತುದಾರರಾದ ದೇವಣ್ಣ ನಾಯ್ಕ ಇದ್ದರು. ಮುಖ್ಯ ತೀರ್ಪುಗಾರರಾಗಿ ದಾಮೋದರ ಗೌಡ, ದಯಾನಂದ ಮಾಡ, ಶಾಂತಾರಾಮ್ ರೈ , ಶರತ್ ಶೆಟ್ಟಿ ಹಾಗೂ ಬಾಲಕೃಷ್ಣ ಸಹಕರಿಸಿದರು.

ಫಲಿತಾಂಶಗಳು: ಪುರುಷರ ವಿಭಾಗ: 200 ಮೀ ಓಟ: ವರುಣ್ (ಬೆಳ್ತಂಗಡಿ ತಾ.) –1. ಕಾಲ:23.5 ಸೆ, ಧನುಷ್ (ಪುತ್ತೂರು)–2, ಶ್ರೀನಿವಾಸ್ (ಬಂಟ್ವಾಳ)–3; 400 ಮೀ ಓಟ: ರಾಮು (ಮೂಡುಬಿದಿರೆ)–1. ಕಾಲ:52.00 ಸೆ, ದಯಾನಂದ (ಮೂಡುಬಿದಿರೆ)–2, ಪ್ರಣಯ್ (ಮಂಗಳೂರು)–3; 800 ಮೀ ಓಟ: ಯಶವಂತ ಕೆ. (ಮೂಡುಬಿದಿರೆ)–1; ಕಾಲ:2 ನಿ 02.1 ಸೆ, ರಾಮು (ಮೂಡುಬಿದಿರೆ)–2, ಸಂಜಯ್ ಕುಮಾರ್ ಬಿ.ಎಂ (ಮಂಗಳೂರು)–3; 1500 ಮೀ ಓಟ: ಯಶವಂತ ಕೆ. (ಮೂಡುಬಿದಿರೆ)–1. ಕಾಲ: 4 ನಿ 44.2 ಸೆ, ಸಂಜಯ್ ಕುಮಾರ್ ಬಿ.ಎಂ (ಮಂಗಳೂರು)–2, ಆದಿತ್ಯ ಎನ್.ಪಿ (ಬೆಳ್ತಂಗಡಿ)–3; 5000 ಮೀ ಓಟ: ಚಿರೇಶ್ ಗೌಡ (ಮೂಡುಬಿದಿರೆ)–1. ಕಾಲ: 17 ನಿ 46.80 ಸೆ, ರಘುವೀರ್ ಎಲ್. (ಮೂಡುಬಿದಿರೆ)–2, ಶ್ರವಣ್ ಕೆ.ಪಿ (ಪುತ್ತೂರು)–3:; 110 ಮೀ ಹರ್ಡಲ್ಸ್: ಆದಿತ್ಯ (ಬೆಳ್ತಂಗಡಿ)–1. ಕಾಲ: 17.5 ಸೆ, ನಿಹಾರ್ (ಸುಳ್ಯ)–2, ಶ್ರೀಕಾಂತ್ (ಮೂಡುಬಿದಿರೆ)–3; 4x100 ಮೀ ರಿಲೇ: ಮಂಗಳೂರು–1. ಕಾಲ: 44.00 ಸೆ, ಮೂಡುಬಿದಿರೆ– 2, ಪುತ್ತೂರು–3: 4x400 ಮೀ ರಿಲೇ:ಮೂಡುಬಿದಿರೆ–1. ಕಾಲ: 3 ನಿ 27.6 ಸೆ, ಮಂಗಳೂರು–2, ಪುತ್ತೂರು–3; 10 ಸಾವಿರ ಮೀ: ಶಿವಾನಂದ (ಮಂಗಳೂರು)–1. ಕಾಲ: 42 ನಿ.04.2 ಸೆ, ಹನುಮಂತರಾಯ (ಮೂಡುಬಿದಿರೆ)–2, ಮಹೇಶ (ಪುತ್ತೂರು)–3; ಲಾಂಗ್ ಜಂಪ್: ದರ್ಶನ್ ಪಿ.ಆರ್. (ಮಂಗಳೂರು)–1. ದೂರ: 6.58 ಮೀ, ಪ್ರತೀಶ (ಬಂಟ್ವಾಳ)–2, ಉಜ್ವಲ್ ಕೆ.ವಿ (ಬೆಳ್ತಂಗಡಿ)–3; ಹೈ ಜಂಪ್: ಆದಿತ್ಯ ಪಿ.ಕೋಟ್ಯಾನ್ (ಮೂಡುಬಿದಿರೆ)–1. ಎತ್ತರ: 1.9 ಮೀ, ಆದರ್ಶ್ ಶೆಟ್ಟಿ (ಪುತ್ತೂರು)–2, ಕೆ.ಆರ್.ಯಶ್ವಿನ್ (ಪುತ್ತೂರು)–3; ಜಾವೆಲಿನ್ ಥ್ರೋ: ವರುಣ್ ಡಿ.ಪಿ (ಮೂಡುಬಿದಿರೆ)–1. ದೂರ: 48.74 ಮೀ, ವೀರೇಶ್ (ಮೂಡುಬಿದಿರೆ)–2, ಅಭಿಜಿನ್ (ಕಡಬ)–3; ಟ್ರಿಪಲ್ ಜಂಪ್: ದರ್ಶನ್ ಪಿ.ಆರ್. (ಮಂಗಳೂರು)–1. ದೂರ:13.66 ಮೀ., ನಿಹಾಲ್‌ರಾಜ್ (ಪುತ್ತೂರು)–2, ಅಕ್ಷಯ್ ಕೆ.ವಿ. (ಬೆಳ್ತಂಗಡಿ)–3; ಡಿಸ್ಕಸ್ ಥ್ರೋ: ವರುಣ್ ಡಿ.ಸಿ (ಮೂಡುಬಿದಿರೆ)–1. ದೂರ:33.07 ಮೀ, ಎಂ.ಎನ್.ಶ್ರೀಕಾಂತ್ (ಮೂಡುಬಿದಿರೆ)–2, ಪ್ರಸಾದ್ (ಬೆಳ್ತಂಗಡಿ)–3; ಶಾಟ್‌ಪಟ್: ಗಣೇಶ್ ಎನ್ ಗೌಡ (ಮೂಡುಬಿದರಿ)–1. ದೂರ: 11.44 ಮೀ, ಆಕಾಶ್ ಎಸ್. ಕುಂದರ್ (ಪುತ್ತೂರು)–2, ಚೆನ್ನಿಕೃಷ್ಣಪ್ರಸಾದ್ (ಮೂಡುಬಿದಿರೆ)–3:

ಮಹಿಳೆಯರ ವಿಭಾಗ: 200 ಮೀ ಓಟ: ಅನಘಾ ಕೆ. (ಪುತ್ತೂರು)–1. ಕಾಲ: 28.4 ಸೆ, ಸಾತ್ವಿ ಶೆಟ್ಟಿ (ಮಂಗಳೂರು)–2, ಲಹರಿ ಎಸ್.ಎನ್ (ಮೂಡುಬಿದಿರೆ)–3; 400 ಮೀ ಓಟ: ಗೀತಾ (ಮೂಡುಬಿದಿರೆ)–1. ಕಾಲ: 1ನಿ 00.7ಸೆ, ದೀಪಾಶ್ರೀ (ಮೂಡುಬಿದಿರೆ)–2, ಚೈತ್ರಿಕಾ (ಪುತ್ತೂರು)–3; 800 ಮೀ ಓಟ: ದೀಪಾಶ್ರೀ (ಮೂಡುಬಿದಿರೆ)–1. ಕಾಲ: 2 ನಿ 21.0 ಸೆ, ರೇಖಾ (ಮೂಡುಬಿದಿರೆ)–2, ಧನ್ಯಶ್ರೀ (ಬೆಳ್ತಂಗಡಿ)–3; 1500 ಮೀ ಓಟ: ರೇಖಾ (ಮೂಡುಬಿದಿರೆ)–1. ಕಾಲ:7 ನಿ 01.6 ಸೆ, ರೂಪಶ್ರೀ ಎನ್.ಎಸ್ (ಮೂಡುಬಿದಿರೆ)–2; 3000 ಮೀ ಓಟ: ರೂಪಶ್ರೀ ಎನ್.ಎಸ್ (ಮೂಡುಬಿದಿರೆ)–1. ಕಾಲ: 12 ನಿ 55.23 ಸೆ, ಸ್ಪಂದನಾ ಪಿ.ಎಸ್ (ಮೂಡುಬಿದಿರೆ)–2, ಧನ್ಯಾ (ಬೆಳ್ತಂಗಡಿ)–3; 100 ಮೀ ಹರ್ಡಲ್ಸ್: ದೀಕ್ಷಿತಾ ಆರ್.ಬಿ (ಮೂಡುಬಿದಿರೆ)–1. ಕಾಲ: 15.50 ಸೆ, ಎಂ.ಎಸ್.ಚೈತನ್ಯಾ (ಮಂಗಳೂರು)–2, ಸಿಂಧು ಆರ್ (ಮೂಡುಬಿದಿರೆ)–3; 4x400 ಮೀ ರಿಲೇ: ಮೂಡುಬಿದಿರೆ–1. ಕಾಲ: 50.70 ಸೆ, ಮಂಗಳೂರು–2, ಬೆಳ್ತಂಗಡಿ–3; 4x400 ಮೀ ರಿಲೇ: ಮೂಡುಬಿದಿರೆ–1; ಕಾಲ: 4 ನಿ 46.9 ಸೆ, ಬೆಳ್ತಂಗಡಿ–2;ಲಾಂಗ್ ಜಂಪ್: ಪ್ರಿಯಾಂಕಾ ಆರ್ (ಮೂಡುಬಿದಿರೆ)–1. ದೂರ: 5.31 ಮೀ, ಕೃತಿ ಜಿ.ಶೆಟ್ಟಿ (ಮೂಡುಬಿದಿರೆ)–2, ಸಾತ್ವಿ (ಮಂಗಳೂರು)–3; ಹೈ ಜಂಪ್: ಇಂಚರಾ (ಸುಳ್ಯ)–1. ಎತ್ತರ: 1.39 ಮೀ, ಇಶಿಕಾ ಕೆ (ಪುತ್ತೂರು)–2, ತನಿಷಾ (ಮಂಗಳೂರು)–3; ಟ್ರಿಪಲ್ ಜಂಪ್: ಕೃತಿ ಜಿ.ಶೆಟ್ಟಿ (ಮೂಡುಬಿದಿರೆ)–1. ದೂರ: 10.99 ಮೀ, ಪ್ರಿಯಾಂಕಾ ಆರ್ (ಮೂಡುಬಿದಿರೆ)–2, ಪೂರ್ಣಾ ವಿ. (ಮಂಗಳೂರು)–3; ಡಿಸ್ಕಸ್ ಥ್ರೋ: ಸ್ವರ್ಣಾ ನಾಯಕ್ (ಮೂಡುಬಿದಿರೆ)–1. ದೂರ: 28.92 ಮೀ, ಜಿವಿತಾ ಡಿ (ಮಂಗಳೂರು)–2, ವ್ರತಾ (ಮೂಡುಬಿದಿರೆ)–3; ಶಾಟ್‌ಪಟ್: ಬ್ಯೂಲಾ ಪಿ.ಟಿ. (ಪುತ್ತೂರು)–1. ದೂರ: 9.35 ಮೀ, ವ್ರತಾ (ಮೂಡುಬಿದಿರೆ)–2, ಅಂಚನಾ (ಬೆಳ್ತಂಗಡಿ)–3; ಜಾವೆಲಿನ್ ಥ್ರೋ: ಜೀವಿತಾ ಡಿ (ಮಂಗಳೂರು)–1. ದೂರ:30.63 ಮೀ, ಪಾರ್ವತಿ ಎಂ.ನಾಯ್ಕ (ಮೂಡುಬಿದಿರೆ)–2, ಜಿಲಾಕಾ ನವೀನ್ (ಸುಳ್ಯ)3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.