ಮಂಗಳೂರು: ಜನನುಡಿ ಕಾರ್ಯಕ್ರಮದ ಸಭಾಂಗಣಕ್ಕೆ ಪ್ರವೇಶಿಸಲು ಯತ್ನಿಸಿದ ಹಿಂದೂ ಜಾಗರಣ ವೇದಿಕೆಯ ನಾಲ್ವರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಗರದ ನಂತೂರು ವೃತ್ತದಲ್ಲಿರುವ ಶಾಂತಿ ಕಿರಣದಲ್ಲಿ ಅಭಿಮತ ಸಂಘಟನೆ ವತಿಯಿಂದ ಎರಡು ದಿನಗಳ ಜನನುಡಿ- 2018ಆಯೋಜಿಸಲಾಗಿದೆ. ಇದೀಗ ಉದ್ಘಾಟನಾ ಸಮಾರಂಭ ನಡೆಯುತ್ತಿದ್ದು,ಇದೇ ವೇಳೆ ಶಾಂತಿ ಕಿರಣ ಆವರಣ ಪ್ರವೇಶಿಸಲು ಹಿಂದೂ ಜಾಗರಣ ವೇದಿಕೆಯ ನಾಲ್ವರು ಯತ್ನಿಸಿದರು.

‘ಶರತ್, ಸುಭಾಷ್ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಸಂಶಯಾಸ್ಪದ ರೀತಿಯಲ್ಲಿ ಕಾರ್ಯಕ್ರಮ ಸ್ಥಳಕ್ಕೆ ತೆರಳಲು ಯತ್ನಿಸುತ್ತಿದ್ದರು. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ' ಎಂದು ಪೊಲೀಸ್ ಅಧಿಕಾರಿಗಳು 'ಪ್ರಜಾವಾಣಿ'ಗೆ ತಿಳಿಸಿದರು.

ಆರೋಪಿಗಳು ನಟ ಪ್ರಕಾಶ್ ರೈ ವಿರುದ್ಧ ಪ್ರತಿಭಟಿಸಲು ಸಜ್ಜಾಗಿ ಬಂದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:ಸಂವಿಧಾನದ ಮೇಲೆ ದಾಳಿ; ದೇಶದಲ್ಲೀಗ ಸಾಮಾಜಿಕಭಯೋತ್ಪಾದನೆ ಯುಗ: ನಾಗಮೋಹನ್ ದಾಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.