ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಿಪು | ಲಂಚ ಪಡೆದ ಕೆಎಸ್‌ಆರ್‌ಪಿ ಇನ್‌ಸ್ಪೆಕ್ಟರ್‌ ಬಂಧನ

ಲೋಕಾಯುಕ್ತ ಪೊಲೀಸರಿಂದ ಕಾರ್ಯಾಚರಣೆ
Published 10 ಜುಲೈ 2024, 14:06 IST
Last Updated 10 ಜುಲೈ 2024, 14:06 IST
ಅಕ್ಷರ ಗಾತ್ರ

ಮುಡಿಪು: ತಮ್ಮ ಅಧೀನದ ಕಿರಿಯ ಪೊಲೀಸ್‌ ಸಿಬ್ಬಂದಿಯೊಬ್ಬರಿಂದ ಲಂಚ ಪಡೆದ ಕರ್ನಾಟಕ ಪೊಲೀಸ್ ವಿಶೇಷ ಮೀಸಲು ಪಡೆ 7ನೇ ಬೆಟಾಲಿಯನ್‌ನ ಪೊಲೀಸ್ ಇನ್‌ಸ್ಪೆಕ್ಟರ್ ಮಹಮ್ಮದ್ ಆರೀಸ್ ಅವರನ್ನು ಲೋಕಾಯುಕ್ತ ಪೊಲೀಸರು ಸಾಕ್ಷ್ಯ ಸಮೇತ ಬುಧವಾರ ಬಂಧಿಸಿದರು.

‘ಅತಿಥಿ ಗೃಹದಲ್ಲಿ ಕರ್ತವ್ಯ ನಿಯೋಜನೆ ಗೊತ್ತುಪಡಿಸಲು ಅಧೀನ ಕೆಎಸ್‌ಆರ್‌ಪಿ ಕಾನ್‌ಸ್ಟೆಬಲ್‌ ಒಬ್ಬರ ಬಳಿ ಮೊಹಮ್ಮದ್ ಆರೀಸ್ ಅವರು ₹20 ಸಾವಿರ ಹಣ ಹಾಗೂ ಪ್ರತಿ ತಿಂಗಳು ₹6 ಸಾವಿರ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಕಾನ್‌ಸ್ಟೆಬಲ್‌ನಿಂದ ಕೆಎಸ್‌ಆರ್‌ಪಿ ಇನ್‌ಸ್ಪೆಕ್ಟರ್‌ ಇದುವರೆಗೆ ₹50 ಸಾವಿರದಷ್ಟು ಲಂಚವನ್ನು ಪಡೆದಿದ್ದರು. ಕಾನ್‌ಸ್ಟೆಬಲ್‌ ಅವರ ತಂದೆ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಅವರು ಮೂರು ತಿಂಗಳಿನಿಂದ ಲಂಚದ ಹಣವನ್ನು ನೀಡಿರಲಿಲ್ಲ. ಬಾಕಿ ಹಣವನ್ನು ನೀಡದಿದ್ದರೆ ಡ್ಯೂಟಿಯನ್ನು ಬದಲಾಯಿಸುತ್ತೇನೆ ಎಂದು ಮೊಹಮ್ಮದ್ ಆರಿಸ್‌ ತಿಳಿಸಿದ್ದರು. ಈ ಬಗ್ಗೆ ಕಾನ್‌ಸ್ಟೆಬಲ್‌ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ₹18 ಸಾವಿರ ಲಂಚದ ಹಣವನ್ನು ಮೊಹಮ್ಮದ್ ಆರೀಸ್ ಬುಧವಾರ ಪಡೆದಿದ್ದರು. ಆಗ ಅವರನ್ನು ಬಂಧಿಸಲಾಯಿತು’ ಎಂದು ಜಿಲ್ಲಾ ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿ ಎಸ್.ಪಿ. ನಟರಾಜ್ ತಿಳಿಸಿದ್ದಾರೆ.

ಲೋಕಾಯುಕ್ತ ಡಿವೈಎಸ್ಪಿ ಗಾನ ಪಿ.ಕುಮಾರ್, ಚೆಲುವರಾಜ್ ಬಿ., ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ ಅಮಾನುಲ್ಲಾ.ಎ, ಸುರೇಶ್ ಕುಮಾರ್ ಪಿ, ಚಂದ್ರಶೇಖರ್ ಸಿ.ಎಲ್ ಅವರು ಸಿಬ್ಬಂದಿ ಜೊತೆ ಕಾರ್ಯಾಚರಣೆ ಕೈಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT