ಪುತ್ತೂರು: ‘ಭಾರಿ ಗೆಲುವಿನ ಮೂಲಕ ನಗರಸಭಾ ಚುನಾವಣೆಯಲ್ಲಿ ಹೊಸ ರಾಜಕೀಯ ಇತಿಹಾಸ ನಿರ್ಮಾಣವಾಗಿದೆ. ಪುತ್ತೂರಿನ ಜನತೆ ಜಾತಿ-ಮತ -ಧರ್ಮ ನೋಡದೆ ಬಿಜೆಪಿಗೆ ಸ್ಪಷ್ಟ ಜನಾದೇಶ ನೀಡುವ ಮಹಾತ್ಕಾರ್ಯದ ಮೂಲಕ ಪುತ್ತೂರನ್ನು ಕಾಂಗ್ರೆಸ್ ಮುಕ್ತಗೊಳಿಸಿದ್ದಾರೆ’ ಎಂದು ಶಾಸಕ ಸಂಜೀವ ಮಠಂದೂರು ಅವರು ತಿಳಿಸಿದ್ದಾರೆ.

ಪುತ್ತೂರು ನಗರಸಭೆಯ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಪುತ್ತೂರು ನಗರಸಭೆಯ 31 ವಾರ್ಡ್‌ಗಳ ಪೈಕಿ 25 ವಾರ್ಡ್‌ಗಳಲ್ಲಿ ಬಿಜೆಪಿಗೆ ಗೆಲುವು ತಂದುಕೊಟ್ಟ ಪುತ್ತೂರಿನ ಜನತೆಗೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷನಾಗಿ ಮತ್ತು ಶಾಸಕನಾಗಿ ಕೃತಜ್ಞತೆ ಸಲ್ಲಿಸುತ್ತೇನೆ ’ ಎಂದರು.

‘ನಗರಸಭೆಯಲ್ಲಿ ಏಕಗವಾಕ್ಷಿ ವ್ಯವಸ್ಥೆ ಜಾರಿ, ಅರ್ಜಿದಾರರ ಅಲೆದಾಟ ನಿವಾರಣೆ. ಭ್ರಷ್ಟಾಚಾರ ಮುಕ್ತ ಜನಸ್ನೇಹಿ ಆಡಳಿತವನ್ನು ನೀಡಲು ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ ವಚನದಂತೆ ಬದ್ಧವಾಗಿದೆ, ಚತುಷ್ಪಥ ರಸ್ತೆ, ಸುಂದರ ಉದ್ಯಾನ, 24 ಗಂಟೆ ಕಾಲವೂ ವಿದ್ಯುತ್ ಮತ್ತು ಕುಡಿಯುವ ನೀರು ,. ನಗರಸಭೆಗೆ ಸೇರ್ಪಡೆಗೊಂಡ ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿ, ಬಿಜೆಪಿ ಕಾಂಗ್ರೆಸ್ ಎಂಬ ತಾರತಮ್ಯ ಮಾ ಇಲ್ಲದೆ ಅನುದಾನವನ್ನು ಹಂಚಿಕೆ ನಮ್ಮ ಗುರಿ. ಒಳ್ಳೆಯ ಆಡಳಿತಕ್ಕೆ ಸಹಕಾರ ನೀಡಲು ಸಾಧ್ಯವಿಲ್ಲದ ಅಧಿಕಾರಿಗಳು ಇಲ್ಲಿಂದ ತೊಲಗಬಹುದು’ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.