ಮಂಗಳೂರು: ಮಂಡ್ಯ ಜಿಲ್ಲೆಯ ಮದ್ದೂರಿನಿಂದ ನಾಪತ್ತೆಯಾಗಿದ್ದ ಮಹಿಳೆಯೊಬ್ಬರನ್ನು ಇಲ್ಲಿನ ವೈಟ್ ಡವ್ಸ್ ಚಾರಿಟಬಲ್ ಸಂಸ್ಥೆಯು ದಶಕಗಳ ಬಳಿಕ ಕುಟುಂಬದವರ ಜೊತೆಗೆ ಸೇರಿಸಿದೆ.

‘ನಗರದಲ್ಲಿ ಬಾಗಿಲು ಮುಚ್ಚಿದ್ದ ಮಳಿಗೆಯೊಂದರ ಬಳಿ ನಾಲ್ಕು ದಿನಗಳಿಂದ ಇರುವ ಮಹಿಳೆ ಬಗ್ಗೆ ನಮ್ಮ ಸಂಸ್ಥೆಗೆ 2012ರ ಆ. 9ರಂದು ಕರೆ ಬಂದಿತ್ತು. ಆ ಮಹಿಳೆಯನ್ನು ರಕ್ಷಣೆ ಮಾಡಿದ್ದೆವು. ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಮಹಿಳೆಗೆ ತನ್ನ ಹಾಗೂ ಊರಿನ ಹೆಸರು ಹೊರತಾಗಿ ಬೇರೇನೂ ನೆನಪಿನಲ್ಲಿರಲಿಲ್ಲ’ ಎಂದು ವೈಟ್ ಡವ್ಸ್ ಸಂಸ್ಥೆಯ ಸಂಸ್ಥಾಪಕಿ ಕೋರಿನ್ ರಸ್ಕಿನ್ಹಾ ತಿಳಿಸಿದರು.

‘ನಾವು ರಕ್ಷಣೆ ಮಾಡಿದ ಬಳಿಕ ಮಹಿಳೆ ತನಗೆ ಒಬ್ಬ ಪುತ್ರ ಹಾಗೂ ಒಬ್ಬಳು ಮಗಳು ಇದ್ದಾಳೆ ಎಂದು ಅವರ ಹೆಸರನ್ನೂ ತಿಳಿಸಿದ್ದಳು. ಮನೆಗೆ ಮರಳುವ ಬಯಕೆಯನ್ನು ಅನೇಕ ಸಲ ವ್ಯಕ್ತಪಡಿಸಿದ್ದರು. ಊರಿನ ಹೆಸರು ಮದ್ದೂರು ಎಂಬುದು ಆಕೆಗೆ ನೆನಪಿತ್ತು. ರಾಜ್ಯದಲ್ಲಿ ‘ಮದ್ದೂರು’ ಎಂಬ ಹೆಸರಿನ ಅನೇಕ ಊರುಗಳಿವೆ. ಅವುಗಳಲ್ಲಿ ಆಕೆಯ ಊರು ಯಾವುದು ಎಂಬುದನ್ನು ಕಂಡು ಹಿಡಿಯುವುದು ಕಷ್ಟವಾಗಿತ್ತು. ಈ ಕುರಿತ ನಮ್ಮ ಪ್ರಯತ್ನಗಳು ಫಲ ನೀಡಿರಲಿಲ್ಲ’ ಎಂದು ಕೋರಿನ್ ರಸ್ಕಿನ್ಹಾ ತಿಳಿಸಿದರು.

ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಇನ್ನೊಬ್ಬ ಮಹಿಳೆಯನ್ನು ಪೊಲೀಸರು ಮೂರು ವಾರಗಳ ಹಿಂದೆ ವೈಟ್ ಡವ್ಸ್ ಸಂಸ್ಥೆಗೆ ಕರೆ ತಂದಿದ್ದರು. ಆ ಮಹಿಳೆಯೂ ಮದ್ದೂರಿನವರು. ಆಕೆಯನ್ನು ಸಂಸ್ಥೆಯು ಕುಟುಂಬದ ಜೊತೆ ಸೇರಿಸಿತ್ತು. ಆ ಕುಟುಂಬದ ಸದಸ್ಯರ ಬಳಿ, 12 ವರ್ಷ ಹಿಂದೆ ರಕ್ಷಿಸಿದ್ದ ಮದ್ದೂರಿನ ಮುಸ್ಲಿಂ ಮಹಿಳೆಯ ಬಗ್ಗೆ ಸಂಸ್ಥೆಯ ವ್ಯವಸ್ಥಾಪಕ ಜೆರಾಲ್ಡ್ ತಿಳಿಸಿ, ಆಕೆಯ ಕುಟುಂಬದವರು ಯಾರಾದರೂ ಇದ್ದರೆ ಮಾಹಿತಿ ನೀಡಿ ಎಂದು ಕೋರಿದ್ದರು. ಇದಾಗಿ ಕೆಲವೇ ದಿನಗಳಲ್ಲಿ ಆಕೆಯ ಮಗ ವೈಡ್ ಡವ್ ಸಂಸ್ಥೆಯನ್ನು ಸಂಪರ್ಕಿಸಿದ್ದರು.

ಮದ್ದೂರಿನ ಮುಸ್ಲಿಂ ಮಹಿಳೆಯು ಕೌಟುಂಬಿಕ ಕಿರುಕುಳದಿಂದ ಬೇಸತ್ತು ಮನೆಯಿಂದ ಹೊರಬಿದ್ದಿದ್ದರು. ಮನೆಯಿಂದ ಹೊರಟಾಗ ಆಕೆಗೆ ಎಂಟು ವರ್ಷದ ಮಗ ಇದ್ದ. ಆಕೆಯ ಮಗಳು ಆಗಿನ್ನೂ ಹಸುಗೂಸು. ಅವರಿಬ್ಬರನ್ನೂ ಬೇರೆಯವರು ದತ್ತು ಪಡೆದು ಸಾಕಿದ್ದರು. ಆ ಮಹಿಳೆಯ ಮಗನಿಗೆ ಈಗ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆ ಮಕ್ಕಳಿಬ್ಬರೂ ತಾಯಿಗಾಗಿ ಸಾಕಷ್ಟು ಹುಡುಕಿದ್ದರು. ತಬ್ಬಲಿಯಾಗಿದ್ದ ಮಕ್ಕಳು ಹಾಗೂ ಅಮ್ಮನನ್ನು ಒಂದುಗೂಡಿಸಿದ ಸಂತೃಪ್ತಿ ನಮ್ಮದು’ ಎಂದು ಕೋರಿನ್ ರಸ್ಕಿನಾ ಸಂತಸ ಹಂಚಿಕೊಂಡರು.

12 ವರ್ಷ ನಮ್ಮ ಜೊತೆಗಿದ್ದ ಮಹಿಳೆ ಶ್ರೀಮಂತ ವ್ಯಕ್ತಿಯೊಬ್ಬರ ಎರಡನೇ ಹೆಂಡತಿ. ಪತಿ ಕುಡಿತದ ದಾಸನಾಗಿ ಹೊಡೆಯುತ್ತಿದ್ದನಂತೆ. ಕ್ರಮೇಣ ಆಕೆ ಮಾನಸಿಕ ಅಸ್ವಸ್ಥೆಯಾಗಿ ಬೀದಿ ಬೀದಿ ಅಲೆಯುತ್ತಿದ್ದರು. ಆಕೆ ಮನೆ ತೊರೆದ ಕೆಲವೇ ವರ್ಷಗಳಲ್ಲಿ ಪತಿಯೂ ಮೃತಪಟ್ಟಿದ್ದರು ಎಂದು ಮಾಹಿತಿ ನೀಡಿದರು.

‘ದಶಕಗಳ ಕಾಲ ಕುಟುಂಬದವರ ಮೊಗವನ್ನೂ ನೋಡದ ಮಹಿಳೆ ಮೊಮ್ಮಗನನ್ನು ನೋಡಿ, ಆತನೇ ತನ್ನ ಮಗ ಎಂದು ಸಂಭ್ರಮಿಸಿದಳು. ತನ್ನ ಮಗ ಈಗ ಬೆಳೆದು ದೊಡ್ಡವನಾಗಿದ್ದಾನೆ. ಆತನಿಗೆ ಮದುವೆಯಾಗಿ ಮಕ್ಕಳಾಗಿವೆ ಎಂಬ ಪರಿವೆಯೇ ಆ ಮಹಿಳೆಗೆ ಇಲ್ಲ. ಅಷ್ಟು ಮುಗ್ಧೆ ಆಕೆ. ಆಕೆಯ ಖುಷಿಗೆ ಪಾರವೇ ಇರಲಿಲ್ಲ’ ಎಂದರು.

‘ನಮ್ಮ ಸಂಸ್ಥೆಯು ಇಲ್ಲಿಯವರೆಗೆ 441 ಮಂದಿ ಮತ್ತೆಕುಟುಂಬವನ್ನು ಸೇರಲು ನೆರವಾಗಿದೆ ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.