ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸುತ್ತಿರುವ ನಗರದ ಅಂಬೇಡ್ಕರ್ ವೃತ್ತದ ಮಧ್ಯೆಯೇ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸಲಾಗುತ್ತದೆ. ಈ ಕಾಮಗಾರಿಗೆ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು (ಸೆ. 15) ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಅಂಬೇಡ್ಕರ್ ವೃತ್ತ ನಿರ್ಮಾಣಕ್ಕೆ ಸಂಬಂಧಿಸಿದ ಗೊಂದಲ ನಿವಾರಣೆ ಸಲುವಾಗಿ ಮೇಯರ್ ಸುಧೀರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು.

‘ಜಂಕ್ಷನ್‌ನ ಮಧ್ಯಭಾಗದಲ್ಲಿ ಸುಂದರವಾದ ವೃತ್ತ ನಿರ್ಮಿಸಿ, ನಡುವಿನಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲಾಗುತ್ತದೆ. ಈ ಹಿಂದೆ ಪ್ರತಿಮೆ ನಿರ್ಮಿಸಲು ಗೊತ್ತುಪಡಿಸಿದ್ದ ಜಾಗದಲ್ಲಿ ಅಂಬೇಡ್ಕರ್ ಸ್ತೂಪವನ್ನು ನಿರ್ಮಿಸಲಾಗುತ್ತದೆ’ ಎಂದು ಮೇಯರ್ ತಿಳಿಸಿದರು.

‘ಈ ಜಂಕ್ಷನ್‌ನಲ್ಲಿ ಆಧುನಿಕ ತಂತ್ರಜ್ಞಾನ ಆಧಾರಿತ ಟ್ರಾಫಿಕ್ ಸಿಗ್ನಲ್‌ಗಳು, ತಡೆಗೋಡೆ ಅಳವಡಿಸಿದ ಪಾದಚಾರಿ ಮಾರ್ಗ, ಪಾದಚಾರಿ ಕೋರಿಕೆಯ ಸಿಗ್ನಲ್ ವ್ಯವಸ್ಥೆ, ವ್ಯವಸ್ಥಿತ ಝೀಬ್ರಾ ಕ್ರಾಸಿಂಗ್ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. ಸೈಕಲ್ ಸವಾರರು, ಪಾದಚಾರಿಗಳ ಸುರಕ್ಷೆಗೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ನುರಿತ ಎಂಜಿನಿಯರ್‌ಗಳು ಹಾಗೂ ವಾಸ್ತು ಶಿಲ್ಪಿಗಳು ರೂಪಿಸಿದ್ದ ಅಂಬೇಡ್ಕರ್ ವೃತ್ತದ ಮಾದರಿ ನೀಲನಕ್ಷೆಯನ್ನು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟವು ಮೇಯರ್‌ಗೆ ಈಚೆಗೆ ಸಲ್ಲಿಸಿತ್ತು. ಬಹುತೇಕ ಅದೇ ವಿನ್ಯಾಸದಂತೆ ವೃತ್ತ ನಿರ್ಮಿಸಲು ನಿರ್ಧಾರಿಸಲಾಯಿತು.

ಉಪಮೇಯರ್ ಸುನೀತಾ, ಸಾರ್ವಜನಿಕ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಭರತ್ ಕುಮಾರ್, ಸದಸ್ಯರಾದ ಮನೋಜ್ ಕುಮಾರ್, ಸಂಗೀತಾ ಆರ್. ನಾಯಕ್, ಪಾಲಿಕೆ ಆಯುಕ್ತ ಆನಂದ್ ಸಿ.ಎಲ್., ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಪ್ರಧಾನ ವ್ಯವಸ್ಥಾಪಕ ಅರುಣ್ ಪ್ರಭಾ, ಅಧಿಕಾರಿಗಳು, ವಿವಿಧ ನಾಗರಿಕ ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.