ಮಂಗಳೂರು: ಹಿಂದೂ ಜೀವನ ಪದ್ಧತಿ ಪ್ರಕಾರ ಬದುಕುವವರನ್ನು ಹತ್ತಿಕ್ಕುವುದು ಟಿಪ್ಪು ಆಡಳಿತದ ಕ್ರಮವಾಗಿತ್ತು. ಇದೇ ರೀತಿಯಲ್ಲಿ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಕ್ಫ್ ಆಸ್ತಿ ಹೆಸರಿನಲ್ಲಿ ಹಿಂದೂಗಳ ಬದುಕುವ ಹಕ್ಕನ್ನು ಕಸಿಯುತ್ತಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಆರೋಪಿಸಿದರು.

ರಾಜ್ಯ ಸರ್ಕಾರ ವಕ್ಪ್ ಮಂಡಳಿ ಮೂಲಕ ಆಸ್ತಿ ಕಬಳಿಸುತ್ತಿದೆ ಎಂದು ಆರೋಪಿಸಿ

ನಮ್ಮ ಭೂಮಿ ನಮ್ಮ ಹಕ್ಕು ಹೆಸರಿನಲ್ಲಿ ಬಿಜೆಪಿ ಜಿಲ್ಲಾ ನಡೆಸುತ್ತಿರುವ ಪ್ರತಿಭಟನೆ ಯಲ್ಲಿ ಅವರು ಮಾತನಾಡಿದರು.

ಪ್ರತಿ ಹಿಂದೂವಿನ, ಬಡವರ ಭೂಮಿ ರಕ್ಷಣೆಗಾಗಿ ಬಿಜೆಪಿ ಮಹಾ ಅಭಿಯಾನ ನಡೆಸಲಿದೆ. ಪ್ರತಿ ಮನೆಗೆ ನಮ್ಮ ಕಾರ್ಯಕರ್ತರು ಹೋಗಿ ಆರ್ ಟಿಸಿ ನೋಡಿ ನಮ್ಮ ಭೂಮಿ ನಮಗೇ ಉಳಿದಿದೆಯಾ ಎಂದು ಪರೀಕ್ಷಿಸಲಿದ್ದಾರೆ ಎಂದರು.

ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ವಕ್ಫ್ ಕರಾಳತೆಯ ಬಗ್ಗೆ ಅರಿವಿಲ್ಲ. ಇಲ್ಲಿನ ಬಿಜೆಪಿ ಕಾರ್ಯಕರ್ತರ ಜಾಗಕ್ಕೆ ಮಾತ್ರವಲ್ಲ, ರಮಾನಾಥ ರೈ, ಐವನ್ ಡಿಸೋಜರ ಜಾಗಕ್ಕೂ ಕುತ್ತು ಬರಬಹುದು ಎಂದರು.

ಶಾಸಕ ವೇದವ್ಯಾಸ ಕಾಮತ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ಪ್ರಮುಖರಾದ ಮೋನಪ್ಪ ಭಂಡಾರಿ, ಪ್ರೇಮಾನಂದ ಶೆಟ್ಟಿ, ಮನೋಜ್ ಕುಮಾರ್, ಭಾನುಮತಿ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.