ಕಾಸರಗೋಡು: ಚುನಾವಣೆಯ ಅಹವಾಲು ಸ್ವೀಕಾರ ಸಭೆಯಲ್ಲಿ ಸಹಾಯಕ ತಹಶೀಲ್ದಾರ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಅವರ ಸಹಿತ 4 ಮಂದಿಗೆ ಒಂದು ವರ್ಷ, 3 ತಿಂಗಳ ಸಜೆಯನ್ನು ಕಾಸರಗೋಡು ಪ್ರಥಮ ದರ್ಜೆ ನ್ಯಾಯಾಲಯ ವಿಧಿಸಿದೆ.

ಘಟನೆ ನಡೆದಾಗ ಎ.ಕೆ.ಎಂ.ಅಶ್ರಫ್(46) ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಮಂಜೇಶ್ವರ ಪಂಚಾಯತಿ ಸದಸ್ಯರಾಗಿದ್ದ ಅಬ್ದುಲ್ಲ ಕಜೆ(58), ಬಡಾಜೆ ನಿವಾಸಿ ಬಶೀರ್ ಕನಿಲ((52), ಬಂಗ್ರ ಮಂಜೇಶ್ವರದ ಅಬ್ದುಲ್ ಖಾದರ್(62) ಇತರ ಆರೋಪಿಗಳು.

2015 ನ.25ರಂದು ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸಭಾಂಗಣದಲ್ಲಿ ಘಟನೆ ನಡೆದಿತ್ತು.

‘ಜಿಲ್ಲಾ ಪ್ರಥಮ ದರ್ಜೆ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲಿನ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವೆ’ ಎಂದು ಶಾಸಕ ಎ.ಕೆ.ಎಂ.ಅಶ್ರಫ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.