ಮಂಗಳೂರಿನ ಡಾ. ಮನೋಹರ ಉಪಾಧ್ಯ ವೃತ್ತಿಯಲ್ಲಿ ಪಶುವೈದ್ಯರಾಗಿರುವ ಇವರಿಗೆ ‘ಮಾವು ಮಂಟಪ’ ಸೃಷ್ಟಿಸುವ ಅದಮ್ಯ ಉತ್ಸಾಹ. ಮಂಗಳೂರಿನಿಂದ 38 ಕಿಲೋ ಮೀಟರ್ ದೂರದ ಬಂಟ್ವಾಳ ತಾಲ್ಲೂಕಿನ ಕುಕ್ಕಿಲದಲ್ಲಿ ಗುಡ್ಡದ ತುದಿಯಲ್ಲಿ ಜಾಗವೊಂದನ್ನು ಇವರು ಖರೀದಿಸಿದ್ದಾರೆ. ಕಡಿದಾದ ರಸ್ತೆಯಲ್ಲಿ ಸಾಗಿ, ಕಣಿವೆಯಂತಹ ಪ್ರದೇಶ ದಾಟಿ ಈ ಗುಡ್ಡದ ತಲ ತಲುಪಬೇಕು. ಈ ಗುಡ್ಡದ ಇಳಿಜಾರಿನಲ್ಲಿ ಪದರು ಪದರಾಗಿ ಹದಗೊಳಿಸಿರುವ ಭೂಮಿ ನೂರಾರು ನಾಡ ಮಾವು ಸಸಿಗಳಿಗೆ ಆಶ್ರಯ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.