ಬೆಳ್ತಂಗಡಿ: ಪುಂಜಾಲಕಟ್ಟೆಯಿಂದ ಚಾರ್ಮಾಡಿಯವರೆಗೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವವರು ಗುತ್ತಿಗೆದಾರರ ವಿರುದ್ಧ ಪ್ರತಿಭಟನೆ ನಡೆಸಿದರು.

ಗುತ್ತಿಗೆದಾರರು ಎರಡು ತಿಂಗಳಿನಿಂದ ಸಂಬಳ ನೀಡದೆ ಇರುವುದರಿಂದ ಅಸ್ಸಾಂ ಮೂಲದ ಸುಂಆರು 40 ಕಾರ್ಮಿಕರು ರಾಷ್ಟ್ರೀಯ ಹೆದ್ದಾರಿಯ ಗುತ್ತಿಗೆಯನ್ನು ಪಡೆದಿರುವ ದೆಹಲಿ ಮೂಲದ ಡಿ.ಪಿ.ಜೈನ್ ಅವರ ಬೆಳ್ತಂಗಡಿ ತಾಲ್ಲೂಕಿನ ರೇಷ್ಮೆ ರೋಡ್ ಬಳಿ ಇರುವ ಘಟಕದಲ್ಲಿ ಪ್ರತಿಭಟಿಸಿ ಗಲಾಟೆ ಮಾಡಿದ್ದಾರೆ. ಬೆಳ್ತಂಗಡಿ ಪೊಲೀಸರು ಮಧ್ಯಸ್ಥಿಕೆ ವಹಿಸಿ ಪ್ರಕರಣ ತಿಳಿಗೊಳಿಸಿದ್ದಾರೆ.

ಬೆಳ್ತಂಗಡಿ ಪಿಎಸ್‌ಐ ಮುರಳಿಧರ್ ನಾಯ್ಕ್ ಮತ್ತು ತಂಡ ಘಟನಾ ಸ್ಥಳಕ್ಕೆ ತೆರಳಿ ಪ್ರಕರಣವನ್ನು ತಾತ್ಕಾಲಿಕವಾಗಿ ಇತ್ಯರ್ಥಗೊಳಿಸಿದ್ದಾರೆ. ಗುತ್ತಿಗೆದಾರರು ಎರಡು ತಿಂಗಳ ಸಂಬಳವನ್ನು ಕೂಡಲೇ ನೀಡುವುದಾಗಿ ತಿಳಿಸಿದ್ದು, ಸದ್ಯಕ್ಕೆ ಕಾರ್ಮಿಕರು ಸುಮ್ಮನಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.