ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ಆನ್‌ಲೈನ್ ವಂಚನೆ: ₹ 11 ಲಕ್ಷ ಕಳೆದುಕೊಂಡ ವ್ಯಕ್ತಿ

Published 5 ಜುಲೈ 2024, 4:21 IST
Last Updated 5 ಜುಲೈ 2024, 4:21 IST
ಅಕ್ಷರ ಗಾತ್ರ

ಮಂಗಳೂರು: ಆನ್‌ಲೈನ್‌ ಉದ್ಯೋಗದ ಕುರಿತು ಫೇಸ್‌ಬುಕ್‌ ಪುಟದಲ್ಲಿ ಕಂಡ ಜಾಹೀರಾತು ನಂಬಿ ₹ 11.02 ಲಕ್ಷ ವಂಚನೆಗೆ ಒಳಗಾದ ಬಗ್ಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದು, ಉರ್ವ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

‘ಜೂನ್ 25ರಂದು ಫೇಸ್ ಬುಕ್ ಖಾತೆಯಲ್ಲಿ ಆನ್‌ಲೈನ್ ಉದ್ಯೋಗದ ಕುರಿತ ಕೊಂಡಿಯನ್ನು ಕ್ಲಿಕ್ಕಿಸಿದ್ದೆ. ಬಳಿಕ ಅವರು ನೀಡಿದ ಟಾಸ್ಕ್‌ ಪೂರ್ಣಗೊಳಿಸಿದ್ದಕ್ಕೆ ನನ್ನ ಖಾತೆಗೆ ₹ 120 ಜಮೆಯಾಗಿತ್ತು. ನಂತರ ಟೆಲಿಗ್ರಾಮ್ ಕೊಂಡಿಯನ್ನು ಕಳುಹಿಸಿ ಆ್ಯಪ್‌ ಡೌನ್‌ಲೋಡ್‌ ಮಾಡಲು ಸೂಚಿಸಿ ವಿವಿಧ ಟಾಸ್ಕ್‌ ನೀಡಿದ್ದರು. ಅದರಂತೆ  ಜೂನ್‌ 26ರಂದು  ಬೇರೆ ಬೇರೆ ಬ್ಯಾಂಕ್‌ ಖಾತೆಗಳಿಂದ ₹ 1 ಸಾವಿರ ಹಾಗೂ ₹ 25 ಸಾವಿರ , ಜೂನ್‌ 27ರಂದು ₹ 1.20 ಲಕ್ಷ ವರ್ಗಾಯಿಸಿದ್ದೆ. ಅದೇ ದಿನ ನನ್ನ ಖಾತೆಗೆ ₹ 10 ಸಾವಿರ ಜಮೆಯಾಗಿತ್ತು. ಜೂನ್‌ 28ರಂದು ₹ 2.07 ಲಕ್ಷ, ₹ 1.50 ಲಕ್ಷ, ಹಾಗೂ ₹ 1 ಲಕ್ಷವನ್ನು ಅವರು ಸೂಚಿಸಿದ ಖಾತೆಗಳಿಗೆ ವರ್ಗಾಯಿಸಿದ್ದೆ. ಜೂನ್ 29ರಂದು ₹ 1 ಲಕ್ಷ ನನ್ನ ಖಾತೆಗೆ ಜಮೆಯಾಗಿತ್ತು. ಅದೇ ದಿನ ₹ 1 ಲಕ್ಷ ಮತ್ತು ₹ 2 ಲಕ್ಷ  ಹಾಗೂ ಜೂನ್ 30ರಂದು ಮತ್ತೆ ₹ 2 ಲಕ್ಷವನ್ನು ವರ್ಗಾಯಿಸಿದ್ದೆ.’

‘ನಾನು ಕಟ್ಟಿದ ಮೊತ್ತ ಹಾಗೂ ಲಾಭಾಂಶ ಸೇರಿ ನನ್ನ ಖಾತೆಯಲ್ಲಿ ₹ 20.93 ಲಕ್ಷ ಹಣವಿರುವುದಾಗಿ ಆ್ಯಪ್‌ ತೋರಿಸುತ್ತಿದೆ. ಅದನ್ನು ಮರಳಿ ಪಡೆಯಲು ಶೇ 30ರಷ್ಟು ತೆರಿಗೆ ( ₹ 6.27 ಲಕ್ಷ) ಕಟ್ಟಲು ಹೇಳುತ್ತಿದ್ದಾರೆ. ಆ ಮೊತ್ತವನ್ನು ಕಡಿತಗೊಳಿಸಿ ಹಣ ಮರಳಿಸುವಂತೆ ಕೇಳಿದರೆ ಒಪ್ಪುತ್ತಿಲ್ಲ. ಒಟ್ಟು ₹ 11.02 ಲಕ್ಷ ಹಣವನ್ನು ಕಳೆದುಕೊಂಡಿದ್ದೇನೆ ಎಂದು ವ್ಯಕ್ತಿಯೊಬ್ಬರು ದೂರಿದ್ದಾರೆ’ ಎಂದು  ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT