ಸುಬ್ರಹ್ಮಣ್ಯ: ಇಲ್ಲಿನ ಕಲಾವಿದ ಮೈಕ್ರೊ ಪರಮೇಶ್ ಅಕ್ಕಿ ಕಾಳಿನಲ್ಲಿ ನಾಡಗೀತೆ ಬರೆಯುವ ಮೂಲಕ ಇಂಡಿಯಾ ಬುಕ್ ಆಪ್ ರೆಕಾರ್ಡ್ ಸೇರಿದ್ದಾರೆ. ನಾಡಗೀತೆ ಬರೆಯಲು 136 ಅಕ್ಕಿ ಕಾಳು ಹಾಗೂ 2 ಗಂಟೆ ಸಮಯ ತೆಗೆದುಕೊಂಡಿದ್ದಾರೆ. ಕಡಿಮೆ ಅವಧಿಯಲ್ಲಿ, ಕಡಿಮೆ ಅಕ್ಕಿ ಕಾಳುಗಳನ್ನು ಬಳಸಿಕೊಂಡು ಈ ದಾಖಲೆ ಮಾಡಿರುವುದು ಅವರ ಸಾಧನೆಯಾಗಿದೆ.

ಇಂಡಿಯಾ ಬುಕ್ ಆಪ್ ರೆಕಾರ್ಡ್ ಸಂಸ್ಥೆಯುವರು ಇತ್ತೀಚೆಗೆ ಕುಕ್ಕೆಗೆ ಬಂದು ಪರಮೇಶ ಅವರ ಸಾಧನೆಯನ್ನು ವೀಡಿಯೊ ದಾಖಲೆ ಮಾಡಿಕೊಂಡು ಹೋಗಿದ್ದರು. ಗುರುವಾರ ಸಂಸ್ಥೆಯು ಪ್ರಮಾಣ ಪತ್ರವನ್ನು ಹಸ್ತಾಂತರಿಸಿತು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಉದ್ಯಮಿಯಾಗಿರುವ ಪರಮೇಶ್ ಮೂಲತಃ ಹಾವೇರಿಯವರು. ಅಕ್ಕಿ ಕಾಳಿನಲ್ಲಿ ಬರೆಯುವ ಸೂಕ್ಷ್ಮ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

‘ಗಿನ್ನೆಸ್ ದಾಖಲೆ ಮಾಡುವತ್ತ ಗಮನ ಹರಿಸಿದ್ದೇನೆ’ ಎಂದು ಸಾಧಕ ಮೈಕ್ರೋ ಪರಮೇಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.