ಮಂಗಳೂರು: ಪಕ್ಷಿಕೆರೆಯ ಕಾರ್ತಿಕ್ ಭಟ್, ತನ್ನ ಪತ್ನಿ ಪ್ರಿಯಾಂಕಾ ಮತ್ತು ಮಗು ಹೃದಯ್ನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಅವರ ಅತ್ತೆ ಸಾವಿತ್ರಿ ಮತ್ತು ತಂದೆ ಜಗದೀಶ್ ಅವರು ಮೂಲ್ಕಿ ಠಾಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದರು.

ದೂರುದಾರರಾದ ಸಾವಿತ್ರಿ ಹಾಗೂ ಕಾರ್ತಿಕ್ ಮಾವ ಜಗದೀಶ್ ಅವರಿಂದ ಪೊಲೀಸರು ಆರೋಪಕ್ಕೆ ಸಂಬಂಧಿಸಿದ ಹೇಳಿಕೆಗಳನ್ನು ಪಡೆದುಕೊಂಡರು ಎಂದು ಮೂಲಗಳು ತಿಳಿಸಿವೆ.

‘ಕಾರ್ತಿಕ್ ಭಟ್ ಪತ್ನಿ ಮತ್ತು ಮಗುವನ್ನು ಕೊಲೆ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಆತನ ತಾಯಿ ಶ್ಯಾಮಲಾ ಭಟ್ ಹಾಗೂ ಅಕ್ಕ ಕಣ್ಮಣಿ ನೀಡಿದ ಮಾನಸಿಕ ಕಿರುಕುಳವೇ ಕಾರಣ’ ಎಂದು ಆರೋಪಿಸಿ ಸಾವಿತ್ರಿಯವರು ಮೂಲ್ಕಿ ಠಾಣೆಗೆ ನ.10ರಂದು ದೂರು ನೀಡಿದ್ದರು. ಕಾರ್ತಿಕ್ ಭಟ್ ಕೂಡಾ ಡೆತ್ ನೋಟ್ನಲ್ಲಿ ತಾಯಿ ಹಾಗೂ ಅಕ್ಕನ ವಿರುದ್ಧ ಆಪಾದನೆ ಮಾಡಿದ್ದು, ಪೊಲೀಸರು ಶ್ಯಾಮಲಾ ಭಟ್ ಹಾಗೂ ಕಣ್ಮಣಿಯನ್ನು ಸೋಮವಾರ ಬಂಧಿಸಿದ್ದರು.

‘ಕಾರ್ತಿಕ್ ಭಟ್ಗೆ ತಂದೆ ತಾಯಿ ಜೊತೆ ಮನಃಸ್ತಾಪ ಹೊಂದಿದ್ದ ಬಗ್ಗೆ ಯಾವುದೇ ಸಂಶಯವಿಲ್ಲ. ಅದರ ಜೊತೆಗೆ, ಆತ ಶೋಕಿ ಜೀವನ ಸಾಗಿಸಲು ಅನೇಕರ ಬಳಿ ಸಾಲ ಮಾಡಿಕೊಂಡಿದ್ದ ಎಂಬ ಮಾಹಿತಿಯೂ ಸಿಕ್ಕಿದೆ. ಆನ್ಲೈನ್ನಲ್ಲಿ ಸಾಲ ನೀಡುವ ಆ್ಯಪ್ಗಳ ಮೂಲಕ ಸಾಲ ಪಡೆದ ಕುರಿತೂ ಮಾಹಿತಿ ಇದೆ. ಈ ಕುರಿತೂ ತನಿಖೆ ನಡೆಸಲಾಗುತ್ತಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದರು.

‘ಕೊಲೆ ನಡೆಯುವ ಮುನ್ನ ಗಂಡ– ಹೆಂಡತಿ ನಡುವೆ ಜಗಳ ನಡೆದ ಬಗ್ಗೆ ಕುರುಹುಗಳು ಸಿಕ್ಕಿವೆ. ಅವರು ವಾಸಿಸುತ್ತಿದ್ದ ಕೊಠಡಿಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿ ಆಗಿದ್ದವು. ಈ ಜಗಳಕ್ಕೆ ಕಾರಣಗಳೇನು, ಪತ್ನಿಯನ್ನು ಯಾವ ಉದ್ದೇಶಕ್ಕಾಗಿ ಕೊಲೆ ಮಾಡಿದ್ದ ಎಂಬ ನಿಖರ ಕಾರಣ ಪತ್ತೆ ಮಾಡಲು ಯತ್ನಿಸುತ್ತಿದೇವೆ. ವಿದೇಶದಲ್ಲಿ ಉತ್ತಮ ಸಂಬಳವಿದ್ದ ಉದ್ಯೋಗವನ್ನು ಆತ ತೊರೆಯಲು ಕಾರಣವೇನು ಎಂದೂ ಪರಿಶೀಲಿಸುತ್ತಿದ್ದೇವೆ. ಪ್ರಕರಣದ ತನಿಖೆಯ ಪ್ರಗತಿಯಲ್ಲಿದೆ. ಹೊಸ ಸುಳಿವು ಸಿಕ್ಕಲ್ಲಿ, ಆ ಆಯಾಮದಲ್ಲೂ ತನಿಖೆ ಮುಂದುವರಿಸುತ್ತೇವೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.