ಉಳ್ಳಾಲ: ಅನಾರೋಗ್ಯದಿಂದ ಬಳಲುತ್ತಿರುವ ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಹಾಗೂ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ಉಳ್ಳಾಲ ಸಯ್ಯಿದ್ ಮದನಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ, ’ಪ್ರಾಮಾಣಿಕ ಕರ್ತವ್ಯದಿಂದ ದೇಶದಲ್ಲೇ ಕೀರ್ತಿ ಪಡೆದು, ಕಾಂಗ್ರೆಸ್ನ ಮುಂಚೂಣಿ ನಾಯಕರಾಗಿರುವ ಪೂಜಾರಿ ಅವರಿಗೆ ಹಿಂದಿನ ಅಧ್ಯಕ್ಷರಾಗಿದ್ದ ದಿ.ಹಾಜಿ ಇಬ್ರಾಹಿಂ ಅವರು ಕುಡ್ಲದ ಮುತ್ತು ಪ್ರಶಸ್ತಿ ನೀಡಿದ್ದರು. ದರ್ಗಾ ಉರುಸ್ ಸಂದರ್ಭದಲ್ಲಿ ಆಹಾರ ಸಾಮಗ್ರಿಗಳನ್ನು ನೀಡುವ ಮೂಲಕ ಸಲ್ಲಿಸಿದ ಸೇವೆ ಉಳ್ಳಾಲದ ಜನತೆ ಮರೆಯಲಾರರು’ ಎಂದರು.

ದರ್ಗಾ ಉಪಾಧ್ಯಕ್ಷ ಯು.ಕೆ. ಮೋನು ಇಸ್ಮಾಯಿಲ್, ಬಾವ ಮೊಹಮ್ಮದ್, ಜತೆ ಕಾರ್ಯದರ್ಶಿ ನೌಷಾದ್ ಅಲಿ, ಲೆಕ್ಕ ಪರಿಶೋಧಕ ಯು.ಟಿ.ಇಲ್ಯಾಸ್,ಜಿಲ್ಲಾ ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್, ಮುಖಂಡ ಈಶ್ವರ್ ಉಳ್ಳಾಲ್, ದೇವಕಿ ಪೂಜಾರಿ, ಯು.ಕೆ.ಅಹ್ಮದ್ ಬಾವ ಕೊಟ್ಟಾರ, ಹುಸೈನ್ ಕುಂಞಮೋನು, ಸೋಲಾರ್ ಹನೀಫ್, ಎ.ಕೆ.ಮೊಯಿದ್ದೀನ್, ಹಮೀದ್ ಕೋಡಿ ಉಪಸ್ಥಿತರಿದ್ದರು.

ದೇವಾಲಯ, ಚರ್ಚ್ನಲ್ಲೂ ಪ್ರಾರ್ಥನೆ: ಇದಕ್ಕೂ ಮೊದಲು ಪೂಜಾರಿಯವರು ಆಸ್ಕರ್ ಅವರ ಆರೋಗ್ಯ ಚೇತರಿಕೆಗಾಗಿ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲಿ ದೇವರಿಗೆ ಪ್ರಾರ್ಥಿಸುವಾಗ ಕಣ್ಣೀರು ಹಾಕಿ ಆಸ್ಕರ್ ಅವರಿಗೆ ಆರೋಗ್ಯ ಕೊಡುವಂತೆ ಬೇಡಿಕೊಂಡರು.

ಬಳಿಕ ಆಸ್ಕರ್ ಅವರಿಗಾಗಿ ಪ್ರಾರ್ಥಿಸಲು ಪೂಜಾರಿಯವರು ರೊಸಾರಿಯೊ ಚರ್ಚ್ಗೆ ಬಂದರು. ಅಷ್ಟರಲ್ಲಿ ಆಸ್ಕರ್ ಮತ್ತು ಅವರ ಪತ್ನಿ ಬ್ಲಾಸಂ ಅಲ್ಲಿ ಹಾಜರಿದ್ದರು. ಎಲ್ಲರೂ ಒಟ್ಟಾಗಿಯೇ ಪ್ರಾರ್ಥನೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.