ಪುತ್ತೂರು: ರೈ ಎಸ್ಟೇಟ್ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಪ್ರವರ್ತಕ, ಶಾಸಕ ಅಶೋಕ್ಕುಮಾರ್ ರೈ ನೇತೃತ್ವದಲ್ಲಿ ದೀಪಾವಳಿ ಪ್ರಯುಕ್ತ ನ.2ರಂದು ಕೊಂಬೆಟ್ಟು ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಯಲಿರುವ ಅಶೋಕ ಜನ-ಮನ ಕಾರ್ಯಕ್ರಮಕ್ಕೆ ತಾಲ್ಲೂಕಿನ ಪ್ರತಿ ಮನೆಗೂ ಆಹ್ವಾನ ನೀಡಲಾಗುವುದು ಎಂದು ರೈ ಎಸ್ಟೇಟ್ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಹೇಳಿದರು.

ಪುತ್ತೂರು ತಾಲ್ಲೂಕಿನ ಕೆದಂಬಾಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಶೋಕ ಜನಮನ ಕಾರ್ಯಕ್ರಮದ ಕರಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಬೋಳೋಡಿ ಚಂದ್ರಹಾಸ ರೈ ಮಾತನಾಡಿ, ಅಶೋಕ್ಕುಮಾರ್ ರೈ ಅವರು ಪ್ರತಿ ವರ್ಷ ಜನರ ಜತೆ ದೀಪಾವಳಿ ಹಬ್ಬ ಆಚರಿಸಿಕೊಂಡು ವಸ್ತ್ರ ವಿತರಣೆಯೊಂದಿಗೆ ಭೋಜನ ನೀಡುತ್ತಿರುವುದು ಪುಣ್ಯದ ಕೆಲಸ ಎಂದರು.

ಟ್ರಸ್ಟ್ ಪ್ರಮುಖರಾದ ನಿಹಾಲ್ ಪಿ.ಶೆಟ್ಟಿ ಮಾತನಾಡಿ, ಅಶೋಕ ಜನ-ಮನ ಕಾರ್ಯಕ್ರಮದಲ್ಲಿ ಈ ಬಾರಿ ಸುಮಾರು 75 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ವಸ್ತ್ರ ವಿತರಣೆಯಲ್ಲಿ ಲೋಪವಾಗದಂತೆ ಪ್ರತ್ಯೇಕ ಕೌಂಟರ್ ತೆರೆಯಲಾಗುವುದು ಎಂದರು.

ಶಿವನಾಥ ರೈ ಮೇಗಿನಗುತ್ತು, ಎ.ಕೆ.ಜಯರಾಮ ರೈ, ಕಮಲೇಶ್ ಸರ್ವೆದೊಳಗುತ್ತು, ಸಂತೋಷ್ ನೆಹರೂನಗರ, ಶಶಿ ಕೃಷ್ಣನಗರ, ಸುಚರಿತ್ ಜೈನ್ ಬೊಳುವಾರು ಭಾಗವಹಿಸಿದ್ದರು. ಟ್ರಸ್ಟ್ ಸದಸ್ಯೆ ಪದ್ಮಾವತಿ ಸ್ವಾಗತಿದರು. ಅರುಣಾ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.