ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ‘ಸಮೋಸ ಅಜ್ಜ’ ಇನ್ನಿಲ್ಲ

Published : 12 ಸೆಪ್ಟೆಂಬರ್ 2024, 4:55 IST
Last Updated : 12 ಸೆಪ್ಟೆಂಬರ್ 2024, 4:55 IST
ಫಾಲೋ ಮಾಡಿ
Comments

ಮಂಗಳೂರು: ನಗರ ಸೇಂಟ್‌ ಅಲೋಶಿಯಸ್ ಕಾಲೇಜು ಪ್ರಾಂಗಣದ ಬಳಿ  40 ವರ್ಷಗಳಿಂದ ಸಮೋಸ ಮಾರುತ್ತಾ ವಿದ್ಯಾರ್ಥಿಗಳ ಪಾಲಿನ ನೆಚ್ಚಿನ ‘ಸಮೋಸ ಅಜ್ಜ’ ಎಂದೇ ಖ್ಯಾತರಾಗಿದ್ದ ಬಾದಾಮಿಯ ಮಧುಕೇಶ್ವರ್ ಮಲ್ಲಿಕಾರ್ಜುನ ಮುಡೆಯಪ್ಪ ಮಳಗಿ (84) ಅವರು ನಿಧನರಾಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಮಳಗಿಯಿಂದ ಅಳಿಯನೊಂದಿಗೆ 40 ವರ್ಷಗಳ ಹಿಂದೆ ಇವರು ನಗರಕ್ಕೆ ಬಂದಿದ್ದರು. ಬಾವುಟಗುಡ್ಡೆಯ ಸೇಂಟ್‌ ಅಲೋಶಿಯಸ್ ಕಾಲೇಜು ಆವರಣದಲ್ಲಿ ನಿತ್ಯ ಮಧ್ಯಾಹ್ನದಿಂದ ಸಂಜೆವರೆಗೆ ಸಮೋಸ, ನೆಲಗಡಲೆ ಚಿಕ್ಕಿ, ಬರ್ಫಿ, ಜಿಲೇಬಿ ಮೊದಲಾದ ತಿನಿಸು ಮಾರಿ ಬದುಕು ಕಟ್ಟಿಕೊಂಡಿದ್ದರು. ‘ಇತ್ತೀಚಿನವರೆಗೂ ಇವರ ಸಮೋಸ ದರವು ₹ 5 ಇತ್ತು. ಈಚೆಗಷ್ಟೇ ಸಮೋಸ ದರವನ್ನು ₹ 6ಕ್ಕೆ  ಹೆಚ್ಚಿಸಿದ್ದರು. ಗಾಂಧಿ ಟೋಪಿ, ಕಚ್ಚೆ ಇವರ ದೈನಂದಿನ ಉಡುಗೆಯಾಗಿತ್ತು. ಕಡಿಮೆ ದರಕ್ಕೆ ಗುಣಮಟ್ಟದ ತಿನಿಸು ನೀಡುತ್ತಿದ್ದ ಇವರನ್ನು ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿ ಪ್ರೀತಿಯಿಂದ  ಮಾತನಾಡಿಸುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT