ಮಂಗಳೂರು: ಮುಂಜಾನೆಯ ಚುಮು ಚುಮು ಚಳಿಯಲ್ಲಿ ದೀರ್ಘ ಅಂತರದ ಓಟದಲ್ಲಿ ಪಾಲ್ಗೊಂಡು ವಿವಿಧ ವಯೋಮಾನದವರು ಬೆವರು ಸುರಿಸಿದರೆ ಮಧ್ಯಾಹ್ನ ಬಿರು ಬಿಸಿಲಿನಲ್ಲಿ ಟ್ರ್ಯಾಕ್‌ನಲ್ಲಿ ಕೆಲವರು ಮಿಂಚು ಹರಿಸಿದವರು. ಫೀಲ್ಡ್‌ನಲ್ಲೂ ಅಮೋಘ ಸಾಮರ್ಥ್ಯ ಪ್ರದರ್ಶಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು.

ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ ಸಂಸ್ಥೆಯ ಸಹಯೋಗದಲ್ಲಿ ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ ಸಂಸ್ಥೆ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್ಸ್‌ನಲ್ಲಿ ವಯಸ್ಸನ್ನು ಲೆಕ್ಕಿಸದೆ ಓಟ, ಜಿಗಿತ, ಎಸೆತಗಳಲ್ಲಿ ಭಾಗಿಯಾಗಿರುವ ಕ್ರೀಡಾಪಟುಗಳು ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ.

ವಿವಿಧ ವಯೋಮಾನದವರ ವಿಭಾಗದ 1500 ಮೀಟರ್ಸ್ ಓಟದೊಂದಿಗೆ ಮುಂಜಾನೆ ಕ್ರೀಡಾಕೂಟ ಆರಂಭಗೊಂಡಿತು. ನಂತರ ನಡೆದ ಸಮಾರಂಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಬಿ.ನಾಗೇಂದ್ರ ಕ್ರೀಡಾಕೂಟ ಉದ್ಘಾಟಿಸಿದರು. ಮಾಸ್ಟರ್ಸ್ ಕ್ರೀಡಾಪಟುಗಳಿಗೆ ನೀಡುತ್ತಿದ್ದ ಮಾಸಾಶನ ಈಗ ಸಿಗುತ್ತಿಲ್ಲ ಎಂಬ ಕೂಗು ಇದೆ. ಈ ಕುರಿತು ಮುಖ್ಯಮಂತ್ರಿ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಶಾಸಕ ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಶಶಿಕುಮಾರ್, ಮಹಾನಗರಪಾಲಿಕೆ ಪ್ರತಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ರಾಜೀವಗಾಂಧಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಇಫ್ತಿಕರ್ ಅಲಿ, ಮುಖಂಡ ತೇಜೋಮಯ, ಮಾಸ್ಟರ್ಸ್ ಅಥ್ಲೆಟಿಕ್ ಸಂಸ್ಥೆಯ ಉಪಾಧ್ಯಕ್ಷ ಜಯರಾಮಯ್ಯ, ರಾಜ್ಯ ಸಮಿತಿ ಉಪಾಧ್ಯಕ್ಷ ವೇಣುಗೋಪಾಲ್, ಜಗದೀಶ್ ಶೆಟ್ಟಿ ಇದ್ದರು. ಅಥ್ಲೀಟ್‌ಗಳಾದ ಕೇಶವ್, ಕೃಷ್ಣ ಶೆಟ್ಟಿ, ಇಬ್ರಾಹಿಂ ಅವರು ಕ್ರೀಡಾಜ್ಯೋತಿ ತಂದರು. ಕ್ರೀಡಾಪಟು ಗಿರಿಧರ್ ಸಾಲ್ಯಾನ್ ಅವರನ್ನು ಸನ್ಮಾನಿಸಲಾಯಿತು. ಮಾಸ್ಟರ್ಸ್ ಅಥ್ಲೆಟಿಕ್ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ಐವನ್ ಡಿಸೋಜ ಪ್ರಸ್ತಾವಿಕವಾಗಿ ಮಾತನಾಡಿದರು.

ಪ್ರಮುಖ ಫಲಿತಾಂಶಗಳು: ಪುರುಷರು: 35 ವರ್ಷ ಮೇಲಿನವರು: 1500 ಮೀ ಓಟ: ಮಲ್ಲಪ್ಪ ಪೂಜಾರಿ–1, ಸುನಿಲ್ ರೇಗೊ–2, ಚಂದ್ರಶೇಖರ–3. ಕಾಲ: 5ನಿ, 2:4ಸೆ; 45 ವರ್ಷ ಮೇಲಿನವರು: ನಾರಾಯಣ ಮೂಲ್ಯ–1, ಶೇಖರ್–2, ಮಾದೇಗೌಡ–3. ಕಾಲ: 5ನಿ 13ಸೆ; 55 ವರ್ಷ ಮೇಲಿನವರು: ಚಿನ್ನಪ್ಪ–1, ಚಂದ್ರಶೇಖರ–2. ಕಾಲ: 5ನಿ10 ಸೆ; 60 ವರ್ಷ ಮೇಲಿನವರು: ಜಿನ್ನಪ್ಪ ಜಿ–1, ಗಣೇಶ್ ಮೋನಪ್ಪ–2, ವಲೇರಿಯನ್ ಫ್ರಾಂಕ್–3. ಕಾಲ: 6ನಿ 34ಸೆ.

ಮಹಿಳೆಯರು: 100 ಮೀ: 30 ವರ್ಷ ಮೇಲಿನವರು: ತಿಲಕಾ ನವೀನ್–1, ಭಾರತಿ ಭರಮಪ್ಪ–2, ಹರಿಣಾಕ್ಷಿ–3. ಕಾಲ: 15;13ಸೆ; 35 ವರ್ಷ ಮೇಲಿನವರು: ಸೌಮ್ಯಾ ಮೋಹನ್–1, ನೇತ್ರಾವತಿ ಎಚ್–2, ವಸಂತಿ ಯಾದವ್–3. ಕಾಲ: 15.46 ಸೆ; 40 ವರ್ಷ ಮೇಲಿನವರು: ಸುಷ್ಮಾ ತಾರಾನಾಥ್–1, ಚಂದ್ರಿಕಾ–2, ಕಮಲಾ ರಮೇಶ್–3. ಕಾಲ: 13.90 ಸೆ; 45 ವರ್ಷ ಮೇಲಿನವರು: ಆರತಿ ಶೆಟ್ಟಿ–1, ಬಬಿತಾ ಶೆಟ್ಟಿ–2, ರತ್ನಾ ಕೆ–3. ಕಾಲ: 14.95ಸೆ; 50 ವರ್ಷ ಮೇಲಿನವರು: ನಿರ್ಮಲಾ ಪ್ರಮೋದ್–1, ವಿನಯ–2. ಕಾಲ: 17;17ಸೆ; 60 ವರ್ಷ ಮೇಲಿನವರು: ಎ.ವಿ.ಪದ್ಮಾವತಿ–1, ಭಾರತಿ–2, ಸುಶೀಲಾ–3. ಕಾಲ: 18.20ಸೆ; 65 ವರ್ಷ ಮೇಲಿನವರು: ಗ್ಲಾಡಿಸ್ ಪಾಯಸ್–1, ಸುಶೀಲಾ–2, ಮೀನಾಕ್ಷಿ–3. ಕಾಲ: 19.41; 70 ವರ್ಷ ಮೇಲಿನವರು: ಮಂಜಮ್ಮ–1, ಸುಶೀಲಾ–2. ಕಾಲ: 20;60ಸೆ; 75 ವರ್ಷ ಮೇಲಿನವರು: ಟಿ.ವಿ. ಲಲಿತಮ್ಮ–1, ಚಂಚಲಾಕ್ಷಿ–2, ಅನಸೂಯ–3. ಕಾಲ: 27ಸೆ.

1500 ಮೀ: 40 ವರ್ಷ ಮೇಲಿನವರು: ಹರಿಣಾಕ್ಷಿ ಪಿ.ಎಸ್–1, ಮಧುರಾ ಕೆ.ಸಿ–2. ಕಾಲ: 7ನಿ 3 ಸೆ; 45 ವರ್ಷ ಮೇಲಿನವರು: ಬೀನಾ–1, ಶೋಭಾ–2, ದಮಯಂತಿ–3. ಕಾಲ: 7ನಿ 17ಸೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.