ಮಂಗಳೂರು: ಕರಾವಳಿಯಲ್ಲಿ ನವೆಂಬರ್ ತಿಂಗಳಲ್ಲೇ ಬಿರು ಬೇಸಿಗೆ ತಾಪ, ಸೆಕೆಯ ಧಗೆ ಅನುಭವವಾಗುತ್ತಿದೆ. ದಾಹ ತಣಿಸಿಕೊಳ್ಳಲು ಜನರು ಬೊಂಡಕ್ಕೆ ಮೊರೆ ಹೋಗುತ್ತಿದ್ದಾರೆ.

ಬೊಂಡಕ್ಕೆ (ಎಳನೀರು) ಈಗ ಎಲ್ಲಿಲ್ಲದ ಬೇಡಿಕೆ. ದರ ಏರಿಕೆಯಾಗಿದ್ದರೂ, ಗ್ರಾಹಕರು ಗೊಣಗಿಕೊಳ್ಳುತ್ತಲೇ ಬೊಂಡ ನೀರು ಕುಡಿಯುವುದರಿಂದ, ಬೀದಿ ಬದಿಯ ಅಂಗಡಿಗಳಲ್ಲಿ ಸಂಜೆಯಾಗುವಷ್ಟರಲ್ಲಿ ಬೊಂಡದ ರಾಶಿ ಕರಗಿ, ಮುರುಟಿದ ನಾಲ್ಕಾರು ಕಾಯಿಗಳು ಉಳಿದುಕೊಳ್ಳುತ್ತವೆ. ಒಂದೆಡೆ ದರ ಏರಿಕೆಯಾಗಿದ್ದರೆ, ಇನ್ನೊಂದೆಡೆ ಬೇಡಿಕೆಯಷ್ಟು ಪೂರೈಕೆ ಇಲ್ಲದಾಗಿದೆ.

‘ಸೆಪ್ಟೆಂಬರ್ನಿಂದಲೇ ಎಳನೀರು ಬೇಡಿಕೆ ಹೆಚ್ಚಿದೆ. ಆಗ ಒಂದು ಎಳನೀರಿಗೆ ₹45 ಇದ್ದ ದರ ಈಗ ಒಂದು ತಿಂಗಳಿನಿಂದ ₹50ಕ್ಕೆ ತಲುಪಿದೆ. ಖರೀದಿ ದರವೇ ಹೆಚ್ಚಾಗಿದೆ. ಸದ್ಯಕ್ಕೆ ನಮಗೆ ಸ್ಥಳೀಯ ಉತ್ಪನ್ನ ಸಿಗುತ್ತಿಲ್ಲ. ಚನ್ನಪಟ್ಟಣ, ಮೈಸೂರು ಹಾಗೂ ಕೇರಳ ಮುಂತಾಗಿ ಹೊರ ರಾಜ್ಯಗಳಿಂದ ಉತ್ಪನ್ನ ಪೂರೈಕೆಯಾಗುತ್ತದೆ. ಸಗಟು ಮಾರಾಟಗಾರರಿಂದ ನಾವು ಖರೀದಿಸುತ್ತೇವೆ. ದಿನಕ್ಕೆ 150 ಎಳನೀರು ಖರೀದಿಸುತ್ತೇನೆ. ಸಂಜೆಯಾಗುವಷ್ಟರಲ್ಲಿ ಸಣ್ಣಗಾತ್ರದ ಹತ್ತಾರು ಬೊಂಡಗಳು ಮಾತ್ರ ಉಳಿದಿರುತ್ತವೆ’ ಎನ್ನುತ್ತಾರೆ ಉರ್ವ ಮಾರಿಗುಡಿ ಸಮೀಪದ ವ್ಯಾಪಾರಿ ರೇಣುಕಾ.

ಮಾರುಕಟ್ಟೆಯಲ್ಲಿ ಹಸಿರು ಬೊಂಡ ₹50– 55ಕ್ಕೆ ಮಾರಾಟವಾಗುತ್ತಿದ್ದರೆ, ಕೆಂಪು ಬೊಂಡದ ದರ ₹60–65ಕ್ಕೆ ತಲುಪಿದೆ. ಕೆಲವು ಸೂಪರ್ ಮಾರ್ಕೆಟ್ಗಳಲ್ಲಿ ಮಾತ್ರ ಕೆಂಪು ಬೊಂಡದ ದರ ₹50 ಇದೆ.

ಹೊರ ಭಾಗಗಳಿಂದ ದೊಡ್ಡ ಪ್ರಮಾಣದಲ್ಲಿ ಬೊಂಡ ಬರುತ್ತಿಲ್ಲ. ಸ್ಥಳೀಯ ಉತ್ಪನ್ನ ಖರೀದಿಸುತ್ತಿದ್ದೇವೆ. ದಿನಕ್ಕೆ 200 ಬೊಂಡ ಕೇಳಿದರೆ, ಗಾಡಿಯವರು 100 ಬೊಂಡ ಇಳಿಸಿ ಹೋಗುತ್ತಾರೆ. ಇಳಿಸುವಾಗ ನಾವು ಸ್ಥಳದಲ್ಲಿ ಇಲ್ಲದಿದ್ದರೆ, ಗುಣಮಟ್ಟದ ಬೊಂಡವೂ ಸಿಗುವುದಿಲ್ಲ. ಪೂರೈಕೆ ತಗ್ಗಿರುವುದು ನೋಡಿದರೆ, ದರ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎನ್ನುತ್ತಾರೆ ಬಲ್ಮಠದ ವ್ಯಾಪಾರಿ ನವೀನ್.

ನಗರದಲ್ಲಿ 150ಕ್ಕೂ ಹೆಚ್ಚು ಕಡೆ ಬೊಂಡ ಮಾರಾಟ ಮಾಡುತ್ತಾರೆ. ಬೀದಿ ಬದಿ ಹೊರತುಪಡಿಸಿ, ಕೆಲವೆಡೆ ಅಂಗಡಿಗಳಲ್ಲೂ ಬೊಂಡ ಸಿಗುತ್ತಿದೆ. ಬೇಡಿಕೆ ಹೆಚ್ಚಿದ್ದೇ ಇದ್ದಕ್ಕೆ ಕಾರಣ ಎನ್ನುತ್ತಾರೆ ವ್ಯಾಪಾರಿಗಳು.

ಅರ್ಧ ಶತಕಕ್ಕೆ ತಲುಪಿದ ತೆಂಗಿನಕಾಯಿ

ತೆಂಗಿನ ಕಾಯಿ ದರ ಏರುಗತಿಯತ್ತ ಸಾಗಿದ್ದು ಬುಧವಾರ ಹೊರ ಮಾರುಕಟ್ಟೆಯಲ್ಲಿ ಕೆ.ಜಿ.ಯೊಂದಕ್ಕೆ ₹50ಕ್ಕೆ ತಲುಪಿದೆ. ತೆಂಗಿನಕಾಯಿ ಬೇಡಿಕೆ ಹೆಚ್ಚಿದೆ ಜೊತೆಗೆ ಎಳನೀರಿಗೆ ಈಗ ಎಲ್ಲ ವರ್ಗದ ಗ್ರಾಹಕರು ಸೃಷ್ಟಿಯಾಗಿದ್ದಾರೆ. ಜನರಲ್ಲಿ ಆರೋಗ್ಯ ಪ್ರಜ್ಞೆ ಹೆಚ್ಚಿದ ಮೇಲೆ ಯುವಜನರು ಎಳನೀರು ಕೇಳಿಕೊಂಡು ಬರುತ್ತಾರೆ. ಕಾರಿನಲ್ಲಿ ಹೋಗುವವರು ವಾಹನ ನಿಲ್ಲಿಸಿ ಎಳನೀರು ಕುಡಿದು ಹೋಗುತ್ತಾರೆ. ಎಳನೀರು ಬೇಡಿಕೆ ಹೆಚ್ಚಿದ್ದರಿಂದ ತೆಂಗು ಬೆಳೆಯುವ ಪ್ರದೇಶದ ರೈತರು ಎಳನೀರು ಕೊಯ್ದು ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ತೆಂಗಿನ ಕಾಯಿ ಉತ್ಪಾದನೆ ಕುಸಿತವಾಗಿದೆ ಎನ್ನುತ್ತಾರೆ ಬೆಳೆಗಾರರು. ಮಂಗಗಳ ಹಾವಳಿ ತೆಂಗಿಗೆ ರೋಗದ ಕಾರಣ ಕರಾವಳಿಯಲ್ಲಿ ತೆಂಗಿನ ಬೆಳೆ ಇಳಿಮುಖವಾಗಿದೆ. ಇದು ಕೂಡ ದರ ಏರಿಕೆಗೆ ಕಾರಣವಾಗಿದೆ ಎನ್ನುತ್ತಾರೆ ಬೆಳೆಗಾರ ಸುನಿಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.