ಮಂಗಳೂರು: ಕೋವಿಡ್–19 ಸಂದರ್ಭದಲ್ಲಿ ಪ್ಲಾಸ್ಮಾ ದಾನದ ಮೂಲಕ 200ಕ್ಕೂ ಹೆಚ್ಚು ಜನರ ಜೀವ ಉಳಿಸಿದ ಸಂಸ್ಥೆ ಮಂಗಳೂರಿನ ವೆಲ್ನೆಸ್ ಹೆಲ್ಪ್ಲೈನ್. ಸ್ಥಳೀಯ ಸ್ವಯಂಸೇವಾ ಸಂಸ್ಥೆಗಳು (ಎನ್ಜಿಒ) ಮತ್ತು ಜಿಲ್ಲೆಯ ಕೆಲವು ವೈದ್ಯರು ಒಂದುಗೂಡಿ ಕೋವಿಡ್ ವಿರುದ್ಧ ಹೋರಾಡಲು ಕಟ್ಟಿಕೊಂಡ ಸಮಾನ ಮನಸ್ಕರ ವೇದಿಕೆಯೇ ಈ ಸಂಸ್ಥೆ.

ದಾದಿಯರು, ವೈದ್ಯರು, ಆಪ್ತಸಮಾಲೋಚಕರು, ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸ್ವಯಂಸೇವಕರು ಸೇರಿದಂತೆ ನೂರಾರು ಮಂದಿ ಕೋವಿಡ್ ವಾರಿಯರ್ಸ್ಗಳು ಈ ಮಾನವೀಯ ಕಾರ್ಯಕ್ಕೆ ಕೈಜೋಡಿಸಿದ್ದಾರೆ.

ಆರೋಗ್ಯ ಬಿಕ್ಕಟ್ಟಿನ ಕಾಲದಲ್ಲಿ ವೆಲ್ನೆಸ್ ಹೆಲ್ಪ್ಲೈನ್ ಮಂಗಳೂರಿನ ಜನತೆಯ ಪಾಲಿಗೆ ಆಪ್ತರಕ್ಷಕನಂತೆ ಬೆನ್ನಿಗೆ ನಿಂತಿತು. ಇದರ ಪರಿಣಾಮ ಕೋವಿಡ್ ಬಾಧಿತ ನೂರಾರು ಜನರಿಗೆ ಸಕಾಲದಲ್ಲಿ ನೆರವು ಲಭಿಸಿತು. ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವುದು ತಪ್ಪಿತು.

ವೆಲ್ನೆಸ್ ಹೆಲ್ಫ್ಲೈನ್ನಿಂದ ಕೋವಿಡ್ ಬಾಧಿತರಿಗೆ ತುರ್ತು ವೈದ್ಯಕೀಯ ನೆರವು ನೀಡಲು ಸಹಾಯವಾಣಿ (96636 51010/77958 89900) ಆರಂಭಿಸಲಾಯಿತು. ನೆರವು ಕೋರಿ ಬಂದ ಕರೆಗಳಿಗೆ ತುರ್ತಾಗಿ ಸ್ಪಂದಿಸಿ, ಸಕಾಲದಲ್ಲಿ ವೈದ್ಯಕೀಯ ನೆರವು ಕಲ್ಪಿಸಲಾಯಿತು.

ಜಿಲ್ಲೆಯಲ್ಲಿ ಕೋವಿಡ್ ಮರಣ ಪ್ರಮಾಣ ಹೆಚ್ಚತೊಡಗಿದಾಗ ‘ಜೀವ ರಕ್ಷಕ ಅಭಿಯಾನ‘ವನ್ನು ವೆಲ್ನೆಸ್ ಇನ್ನಷ್ಟು ಶಕ್ತಗೊಳಿಸಿತು. ಬೆಂಗಳೂರಿನ ‘ಮರ್ಸಿ ಮಿಷನ್’ ಕೂಡ ಇದಕ್ಕೆ ಕೈಜೋಡಿಸಿತು. ಕೋವಿಡ್ ವಿರುದ್ಧ ಜಾಗೃತಿ ಮೂಡಿಸುವ ಜತೆಯಲ್ಲೇ ಬಾಧಿತರಿಗೆ ಮಾರ್ಗದರ್ಶನ, ವಿಮೆ ಮತ್ತು ಅಗತ್ಯ ವೈದ್ಯಕೀಯ ನೆರವು, ಕ್ವಾರಂಟೈನ್ ನಿಗಾ, ಆಂಬುಲೆನ್ಸ್ ಮತ್ತು ಸ್ವಯಂ ಸೇವಕರ ನೆರವು ಒದಗಿಸಿತು. ಪುನರ್ವಸತಿ ಮತ್ತು ಮೃತರ ಅಂತ್ಯಸಂಸ್ಕಾರಕ್ಕೂ ಸಂಸ್ಥೆ ಕೈಜೋಡಿಸಿತು.

‘ಕೋವಿಡ್ ಸಂದರ್ಭದಲ್ಲಿ ವೆಲ್ನೆಸ್ ಹೆಲ್ಫ್ಲೈನ್ ಮೂಲಕ ಮಂಗಳೂರಿನ ನೂರಾರು ಕುಟುಂಬಗಳಿಗೆ ನೆರವು ನೀಡಿದ್ದೇವೆ. ಈ ಮಾನವೀಯ ಕಾರ್ಯಕ್ಕೆ ಕೈಜೋಡಿಸಿದ ಎಲ್ಲರಿಗೂ ಧನ್ಯವಾದ’ ಎನ್ನುತ್ತಾರೆ ಸಂಸ್ಥೆಯ ಸಂಯೋಜಕ ಝಕರಿಯಾ ಫರ್ವೇಜ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.