ದಾವಣಗೆರೆ: ಬಂಡಾಯ ಸಾಹಿತ್ಯ ಸಂಘಟನೆಯಿಂದ 36 ವರ್ಷಗಳ ಬಳಿಕ ದಾವಣಗೆರೆಯಲ್ಲಿ ಎರಡು ದಿನಗಳ ರಾಜ್ಯ ಮಟ್ಟದ ಬಂಡಾಯ ಸಾಹಿತ್ಯ ಸಮ್ಮೇಳನ ಆಯೋಜಿಸಿದೆ.

‘ಜುಲೈ 23ರಂದು ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಬೆಳಿಗ್ಗೆ 10.30ಕ್ಕೆ ಚಿಂತಕ ಡಾ.ಜಿ.ರಾಮಕೃಷ್ಣ ಸಮ್ಮೇಳನ ಉದ್ಘಾಟಿಸಲಿದ್ದು, ಸಾಹಿತಿ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸುವರು. ಸಮಾರಂಭದಲ್ಲಿ ಮಾವಳ್ಳಿ ಶಂಕರ್, ಬಿ.ಎಂ.ಹನೀಫ್, ಸುಕನ್ಯಾ ಮಾರುತಿ, ಸಿ.ವಿ.ಪಾಟೀಲ ಪಾಲ್ಗೊಳ್ಳುವರು’ ಎಂದು ಸಂಘಟನೆಯ ಜಿಲ್ಲಾ ಸಂಚಾಲಕ ಎ.ಬಿ. ರಾಮಚಂದ್ರಪ್ಪ ಹಾಗೂ ಬಿ.ಎನ್. ಮಲ್ಲೇಶ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಸಾಮಾಜಿಕ–ಸಾಂಸ್ಕೃತಿಕ ಮೌಲ್ಯಗಳು ಮತ್ತು ಮಹಿಳೆ’ ಕುರಿತ ಗೋಷ್ಠಿಯಲ್ಲಿ ವಿನಯ ವಕ್ಕುಂದ, ಸಾವಿತ್ರಿ ಮಜುಮದಾರ, ಕೆ. ನೀಲಾ ಅವರು ವಿವಿಧ ವಿಷಯ ಕುರಿತು ಮಾತನಾಡಲಿದ್ದು, ಎಚ್.ಎಲ್. ಪುಷ್ಪ ಅಧ್ಯಕ್ಷತೆ ವಹಿಸುವರು’ ಎಂದ ಹೇಳಿದರು.

‘ಕನ್ನಡ ಸಾಹಿತ್ಯದಲ್ಲಿ ಸಮಾನತೆ, ಸಹಿಷ್ಣುತೆ’ ಕುರಿತ ವಿಚಾರಗೋಷ್ಠಿಯಲ್ಲಿ ರಾಜಪ್ಪ ದಳವಾಯಿ, ದಾದಾಪೀರ್ ನವಿಲೇಹಾಳ್, ಮಮ್ತಾಜ್ ಬೇಗಂ, ಕರಿಯಪ್ಪ ಮಾಳಿಗೆ ಅವರು ವಿಷಯ ಮಂಡಿಸಲಿದ್ದು, ಎಂ.ಜಿ. ಈಶ್ವರಪ್ಪ ಅಧ್ಯಕ್ಷತೆ ವಹಿಸುವರು. 3ನೇ ಗೋಷ್ಠಿಯಲ್ಲಿ ಚಂದ್ರಶೇಖರ ತಾಳ್ಯ ಆಶಯ ನುಡಿಗಳನ್ನಾಡುವರು. ಸತೀಶ್ ಕುಲಕರ್ಣಿ ಅಧ್ಯಕ್ಷತೆ ವಹಿಸುವರು’ ಎಂದು ಹೇಳಿದರು.

‘ಜುಲೈ 24ರಂದು ಬೆಳಿಗ್ಗೆ 10ಕ್ಕೆ ನಡೆಯುವ ‘ಸಮಕಾಲೀನ ಸನ್ನಿವೇಶ: ಹೊಸ ಪೀಳಿಗೆಯ ನೋಟ’ ಕುರಿತ ವಿಚಾರಗೋಷ್ಠಿಯಲ್ಲಿ ಎಂ.ಉಮಾದೇವಿ, ಹ.ರಾ.ಮಹೇಶ್, ಅರುಣಜೋಳದಕೂಡ್ಲಿಗಿ, ಬಿ.ರಾಜಶೇಖರಮೂರ್ತಿ, ಜಾಜಿದೇವೇಂದ್ರಪ್ಪ,ಅನಂತ ನಾಯಕ್, ಅಶ್ವಿನಿ ಮದನಕರ್, ಮುಸ್ತಫಾ, ರಾಜು ಗುಂಡಾಪುರ, ಪುಷ್ಪಭಾರತಿ ಅವರು ವಿಷಯ ಮಂಡಿಸಲಿದ್ದು, ಮಲ್ಲಿಗೆ ಅಧ್ಯಕ್ಷತೆ ವಹಿಸುವರು’ ಎಂದರು.

‘ಕರ್ನಾಟಕದ ಜನ ಚಳವಳಿಗಳು ಹಿನ್ನೋಟ–ಮುನ್ನೋಟ’ ವಿಷಯ ಕುರಿತ ವಿಚಾರಗೋಷ್ಠಿಯಲ್ಲಿ ದಲಿತ ಚಳವಳಿ ಕುರಿತು ಸಣ್ಣರಾಮ, ರೈತ ಚಳವಳಿ ಕುರಿತು ಪ್ರಕಾಶ್ ಕಮ್ಮರಡಿ, ಮಹಿಳಾ ಚಳವಳಿ ಕುರಿತು ಎನ್.ಗಾಯತ್ರಿ, ಕಾರ್ಮಿಕ ಚಳವಳಿ ಕುರಿತು ಮಹಾಂತೇಶ್ ಕೆ. ವಿಷಯ ಮಂಡಿಸುವರು. ಸಿದ್ದನಗೌಡ ಪಾಟೀಲ್ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 2.45ಕ್ಕೆ ನಡೆಯುವ ‘ಶಿಕ್ಷಣ ಕ್ಷೇತ್ರದ ಸ್ಥಿತಿ–ಗತಿ’ ಕುರಿತ ವಿಚಾರಗೋಷ್ಠಿಯಲ್ಲಿ ಎಸ್. ವರಲಕ್ಷ್ಮಿ, ಶ್ರೀಪಾದ ಭಟ್, ಕಿರಣ್ ಎಂ.ಗಾಜನೂರು, ವೈ.ಬಿ.ಹಿಮ್ಮಡಿ ಅವರು ಮಾತನಾಡಲಿದ್ದು, ಅಲ್ಲಮಪ್ರಭು ಬೆಟ್ಟದೂರು ಅಧ್ಯಕ್ಷತೆ ವಹಿಸುವರು’ ಎಂದು ಮಾಹಿತಿ ನೀಡಿದರು.

‘ರಾಜ್ಯಸಭೆ ಸದಸ್ಯ, ಸಾಹಿತಿ ಎಲ್. ಹನುಮಂತಯ್ಯ ಸಮಾರೋಪ ನುಡಿಗಳನ್ನಾಡಲಿದ್ದು, ಭಕ್ತರಹಳ್ಳಿ ಕಾಮರಾಜ್, ಆರ್.ಜಿ.ಹಳ್ಳಿ ನಾಗರಾಜ್, ಮೋಹನ್ರಾಜ್, ಶರೀಫಾ ಕೆ. ಪಾಲ್ಗೊಳ್ಳುವರು. ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ಸಂಘಟನೆಯ ಎಂ.ಟಿ. ಸುಭಾಶ್ಚಂದ್ರ, ಎಲ್.ಎಚ್. ಅರುಣ್ಕುಮಾರ್, ಅನಿಸ್ಪಾಷ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಬಂಡಾಯದ ಹೆಜ್ಜೆಗೆ ನಾಲ್ಕು ದಶಕ: ಬರಗೂರು ರಾಮಚಂದ್ರಪ್ಪ ಲೇಖನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.