ಮನೆ ತಿರಸ್ಕರಿಸುವ ಫಲಾನುಭವಿ
ಮನೆ ನಿರ್ಮಾಣಕ್ಕೆ ನೀಡುವ ಸಹಾಯಧನದ ಮೊತ್ತ ಕಡಿಮೆ ಎಂಬ ಕಾರಣವನ್ನು ಮುಂದಿಟ್ಟು ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ (ಪಿಎಂಎವೈ) ಮಂಜೂರಾದ ಮನೆಗಳನ್ನು ಕೆಲ ಫಲಾನುಭವಿಗಳು ತಿರಸ್ಕರಿಸುತ್ತಿದ್ದಾರೆ. ‘ಆಯ್ಕೆಯಾದ ಸಾಮಾನ್ಯ ವರ್ಗದ ಫಲಾನುಭವಿಗೆ ₹1.20 ಲಕ್ಷ ಹಾಗೂ ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗೆ ₹1.70 ಲಕ್ಷ ಸಹಾಯಧನ ಲಭ್ಯವಾಗುತ್ತದೆ. ನರೇಗಾ ಯೋಜನೆಯಡಿ ₹27,000 ವೆಚ್ಚದ ಕಾಮಗಾರಿ ಮಾಡಿಕೊಳ್ಳಲು ಅವಕಾಶವಿದೆ. ಈ ಸಹಾಯಧನ ಕಡಿಮೆ ಎಂಬ ಕೊರಗು ಅನೇಕರಲ್ಲಿದೆ. ನಗರ ವಸತಿ ಯೋಜನೆಯಡಿ ಫಲಾನುಭವಿಗೆ ಲಭ್ಯ ವಾಗುತ್ತಿರುವ ₹ 3 ಲಕ್ಷ ಸಹಾಯಧನದ ಸೌಲಭ್ಯವನ್ನು ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಲಾಗುತ್ತದೆ ಎಂಬ ವದಂತಿಯಿಂದ ಪ್ರಸಕ್ತ ಸಾಲಿನಲ್ಲಿ ಮನೆ ನಿರ್ಮಾಣಕ್ಕೆ ಜನ ಉತ್ಸುಕತೆ ತೋರುತ್ತಿಲ್ಲ’ ಎನ್ನುತ್ತಾರೆ ಅಧಿಕಾರಿಗಳು.