ಹರಿಹರ ತಾಲ್ಲೂಕಿನ ಸತ್ಯನಾರಾಯಣ ಕ್ಯಾಂಪ್ನ ಪ್ರಗತಿಪರ ಕೃಷಿಕ ಎನ್.ಎಸ್. ವೆಂಕಟರಾಮಾಂಜನೇಯ ಸ್ವಾಮಿ ತಮ್ಮ ಜನ್ಮದಿನ ಬಂದಾಗಲೆಲ್ಲಾ ಗ್ರಾಮ ಪಂಚಾಯಿತಿ, ಶಾಲೆಗಳು,ಆಸ್ಪತ್ರೆಗಳ ಮುಂಭಾಗ ಗಿಡಗಳನ್ನು ನೆಡುತ್ತಾರೆ. ಬಹುತೇಕ ಮಂದಿಗೆ ಕೇಕ್ ಕತ್ತರಿಸಿ, ಗುಂಡು–ತುಂಡು ಪಾರ್ಟಿ ಮಾಡಿ ಜನ್ಮದಿನ ಆಚರಿಸುವ ಈ ಕಾಲದಲ್ಲಿ ವೆಂಕಟರಾಮಾಂಜನೇಯ ಸ್ವಾಮಿ ಅವರ ಜನ್ಮದಿನ ಬಂತೆಂದರೆ ಪರಿಸರಕ್ಕೆ 50 ಇಲ್ಲವೇ 100 ಗಿಡಗಳನ್ನು ನೆಡುತ್ತಾರೆ. 2019ರಿಂದಲೂ ಈ ಕಾಯಕವನ್ನು ಮಾಡಿಕೊಂಡು ಬಂದಿದ್ದು, ಈವರೆಗೆ 1500ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದಾರೆ.

ಇದನ್ನೂ ಓದಿ... PV Web Exclusive | ಜನ್ಮದಿನದ ಸಂಭ್ರಮಕ್ಕೆ ಅರಳಿದ ಪರಿಸರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.