ದಾವಣಗೆರೆ: ‘ಸಾವಿರ ಬೀಡಿಗೆ ₹ 160ರಿಂದ ₹ 170 ಎಂದು ನಿಗದಿ ಮಾಡಿದ್ದಾರೆ. ವೇಸ್ಟೇಜ್ ಎಂದು ಮುರಿದು ₹ 140ರಿಂದ ₹ 150 ಅಷ್ಟೇ ನೀಡುತ್ತಾರೆ. ಈ ಪಗಾರ ಬಿಟ್ಟು ಬೇರೆ ಸೌಲಭ್ಯಗಳು ಸಿಗುತ್ತಿಲ್ಲ’.

ಇವು ಬಾಷಾನಗರದ ಬೀಡಿ ಕಾರ್ಮಿಕರಾದ ಬಶೀರಾಬಾನು ಅವರ ಮಾತುಗಳು.

‘ಒಂದು ಕೆ.ಜಿ. ಎಲೆ, 400 ಗ್ರಾಂ ತಂಬಾಕು, ಒಂದು ದಾರದ ಕಟ್ಟು ತಂದರೆ ಅದಕ್ಕೆ 2,200 ಬೀಡಿ ನೀಡಬೇಕು ಎಂದು ಕಂಪನಿಗಳು ನಿರ್ಧರಿಸಿವೆ. ಆದರೆ ಒಂದು ಕೆ.ಜಿ. ಎಲೆಗೆ ಗರಿಷ್ಠ 1,800 ಬೀಡಿಗಳಷ್ಟೇ ಬರುತ್ತವೆ. ಕಡಿಮೆಯಾದ ಬೀಡಿಯ ಮೊತ್ತವನ್ನು ನಮ್ಮ ದುಡಿಮೆಯಿಂದ ತೆಗೆದುಕೊಳ್ಳುತ್ತಾರೆ’ ಎಂಬುದು ಅವರ ಅಳಲು.

‘ಗಂಡ ಅಲ್ಲಾ ಭಕ್ಷಿ ತರಗಾರ ಕೆಲಸ ಮಾಡುತ್ತಿರುವಾಗ ಕಟ್ಟಡದಿಂದ ಕೆಳಗೆ ಬಿದ್ದಿದ್ದರಿಂದ ಕೆಲಸ ಮಾಡಲಾಗುತ್ತಿಲ್ಲ. ಐದು ವರ್ಷಗಳಿಂದ ಮನೆಯಲ್ಲೇ ಇದ್ದಾರೆ. 25 ವರ್ಷಗಳಿಂದ ಬಾಡಿಗೆ ಮನೆಯಲ್ಲಿಯೇ ಇದ್ದೇವೆ. ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದೇವೆ. ನಮಗೆ ಮನೆ ಕೊಡಿಸಬೇಕು. ಬೇರೆ ಸೌಲಭ್ಯ ನೀಡಬೇಕು’ ಎಂಬುದು ಲೆನಿನ್ ನಗರದ ಸಬೀನಾಬಾನು ಅವರ ಬೇಡಿಕೆ.

ಬೀಡಿ ಕಟ್ಟುತ್ತಿರುವ ದಾವಣೆಗೆರೆ ಲೆನಿನ್ ನಗರದ ಸಬೀನಾಬಾನು

ನಾಸೀಮಾಬಾನು, ಹಸೀನಾಬಾನು, ನಸೀಮಾಬಾನು, ಸಾಹೀನಾಬಾನು ಸಹಿತ ಬೀಡಿ ಕಟ್ಟಿ ಜೀವನ ಸಾಗಿಸುವ ಎಲ್ಲರ ಒತ್ತಾಯಗಳು ಹೀಗೆ ಇವೆ. ‘ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯೆ ಕಲಿಯಲು ವಿದ್ಯಾರ್ಥಿವೇತನ ಸಿಗುತ್ತದೆ. ಮದುವೆಗೆ ಪ್ರೋತ್ಸಾಹಧನ ಸಿಗುತ್ತದೆ. ಪಿಂಚಣಿ ಬರುತ್ತದೆ. ಆರೋಗ್ಯ ಕೆಟ್ಟರೆ ಇಎಸ್ಐ ಸೌಲಭ್ಯ ಇದೆ. ಸತ್ತರೆ ಪರಿಹಾರಧನ ಸಿಗುತ್ತದೆ. ಆದರೆ 30 ವರ್ಷಗಳಿಂದ ಬೀಡಿ ಕಟ್ಟುತ್ತಾ ಬರುತ್ತಿದ್ದರೂ ನಮಗೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ’ ಎಂಬುದು ಇವರ ಕೊರಗು. ಆದರೆ, ಮುಂದೊಂದು ದಿನ ಬೀಡಿ ಕಟ್ಟುವ ಉದ್ಯೋಗವೇ ಇರುವುದಿಲ್ಲ ಎಂಬುದು ಮಾತ್ರ ಬಹುತೇಕರಿಗೆ ಗೊತ್ತಿಲ್ಲ.

‘ಬೀಡಿ ಕಾರ್ಮಿಕರಿಗೂ ಸೌಲಭ್ಯಗಳಿವೆ. ಆದರೆ ಅಧಿಕೃತವಾಗಿ ನೋಂದಣಿಯಾಗಿರಬೇಕು. ಬಹುತೇಕ ಬೀಡಿ ಗುತ್ತಿಗೆದಾರರು ತಮ್ಮಲ್ಲಿ ಬೀಡಿ ಕಟ್ಟುವವರ ಅಧಿಕೃತ ಲೆಕ್ಕ ಇಡುವುದಿಲ್ಲ. ದಾಖಲೆ ಇಟ್ಟಿರುವುದಿಲ್ಲ. ಇದರಿಂದ ಬೀಡಿ ಕಾರ್ಮಿಕರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅವರನ್ನು ಗುರುತಿಸುವ ಕೆಲಸವನ್ನು ಮಾಡಲಾಗುತ್ತಿದೆ’ ಎಂದು ಬಳ್ಳಾರಿ ಉಪ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಜಾಹೀರ್ ಬಾಷಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಂಬಾಕು ನಿಷೇಧ ಮಾಡುವ ಪ್ರಸ್ತಾವ ಸರ್ಕಾರದ ಮುಂದೆ ಇದೆ. ಹಾಗಾಗಿ ಈಗ ಇರುವ ಸ್ಟಾಕ್ ಖಾಲಿ ಆಗುವವರೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಆಮೇಲೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ತಂಬಾಕು ಬೆಳೆಯುತ್ತಿದ್ದ ರೈತರಿಗೆ ಈಗಾಗಲೇ ಬೇರೆ ಬೆಳೆ ಬೆಳೆಯಲು ಸರ್ಕಾರ ಸೂಚಿಸಿದೆ. ಬೀಡಿ ಕಟ್ಟುವರಿಗೆ ಬೇರೆ ಗುಡಿ ಕೈಗಾರಿಕೆಗಳು ಜಾರಿಗೆ ಬರಬಹುದು’ ಎಂಬುದು ಅವರ ವಿವರಣೆ.

‘ಹೆಣ್ಣು ಮಕ್ಕಳು ಮನೆಯಲ್ಲಿ ದೈನಂದಿನ ಕೆಲಸ ಮಾಡಿಕೊಂಡೇ ಬೀಡಿ ಕಟ್ಟಿ ಸಂಸಾರವನ್ನು ತೂಗಿಸಿಕೊಂಡು ಹೋಗುತ್ತಿದ್ದರು. ಗಂಡು ಮಕ್ಕಳು ದುಡಿಯದ ಎಷ್ಟೋ ಮನೆಗಳಲ್ಲಿ ಬೀಡಿ ಕಟ್ಟುವ ಮಹಿಳೆಯರೇ ಆಧಾರವಾಗಿದ್ದಾರೆ. ಅವರನ್ನು ಗುರುತಿಸುವ ಕೆಲಸವನ್ನು ಮಾಡಿಲ್ಲ. ಹಾಗಾಗಿ ಸೌಲಭ್ಯಗಳು ದೊರೆತಿಲ್ಲ. ಬೀಡಿ ಕಾರ್ಮಿಕರನ್ನು ಸರ್ಕಾರ ಮತ್ತು ಕಾರ್ಮಿಕ ಇಲಾಖೆ ನಿರ್ಲಕ್ಷ್ಯ ಮಾಡಿರುವುದೇ ಸಮಸ್ಯೆಗೆ ಕಾರಣವಾಗಿದೆ. ಬೀಡಿ ಗುತ್ತಿಗೆದಾರರಿಗೆ ನಿಯಮ ಕಡ್ಡಾಯ ಮಾಡಿದ್ದರೆ ಇಷ್ಟು ಹೊತ್ತಿಗೆ ಎಲ್ಲ ಬೀಡಿ ಕಾರ್ಮಿಕರ ನೋಂದಣಿ ಆಗುತ್ತಿತ್ತು’ ಎಂದು ನೆರಳು ಬೀಡಿ ಕಾರ್ಮಿಕರ ಯೂನಿಯನ್ನ ಜಬೀನಾಖಾನಂ ಸಮಸ್ಯೆಯ ಮೂಲ ಬಿಡಿಸಿಟ್ಟರು.

ಬೀಡಿ ಕಟ್ಟುವವರ ಪರಿಕರಗಳು

‘ಕನಿಷ್ಠ 3 ಸಾವಿರ ಬೀಡಿ ಕಾರ್ಮಿಕರಿದ್ದರೆ ಅವರಿಗೊಂದು ಆಸ್ಪತ್ರೆ ತೆರೆಯಬೇಕು. ಆದರೆ, ದಾವಣಗೆರೆಯಲ್ಲಿ ಸುಮಾರು 15 ಸಾವಿರ ಬೀಡಿ ಕಾರ್ಮಿಕರಿದ್ದರೂ ನೋಂದಾಯಿತ ಕಾರ್ಮಿಕರಿಲ್ಲ. ಹಾಗಾಗಿ ಆಸ್ಪತ್ರೆ ತೆರೆದಿಲ್ಲ. ನಾವೇ ಯೂನಿಯನ್ ಮೂಲಕ 800 ಮಂದಿಯನ್ನು ನೋಂದಾಯಿಸಿದ್ದೇವೆ. ಉಳಿದ ನೋಂದಣಿ ಕಾರ್ಯ ಮಾಡುತ್ತಿದ್ದೇವೆ. ಬೀಡಿ ಕಾರ್ಮಿಕರು ಕೂಡ ಮನುಷ್ಯರು ಎಂಬುದನ್ನು ಸರ್ಕಾರ ಮೊದಲು ಪರಿಗಣಿಸಬೇಕು’ ಎಂದು ನೆರಳು ಬೀಡಿ ಕಾರ್ಮಿಕರ ಯೂನಿಯನ್ನ ಎಂ. ಕರಿಬಸಪ್ಪ ಆಕ್ರೋಶ ವ್ಯಕ್ತಪಡಿಸಿದರು.

‘ಬೀಡಿ ಕಾರ್ಮಿಕರಿಗೆ ಕ್ಷಯ, ಕ್ಯಾನ್ಸರ್, ಹೃದಯರೋಗ ಮತ್ತು ಕಣ್ಣಿನ ಸಮಸ್ಯೆ ಇವು ನಾಲ್ಕು ಮುಖ್ಯವಾಗಿ ಕಾಡುವ ರೋಗಗಳಾಗಿವೆ. ಇವು ಸಹಿತ ಬೀಡಿ ಕಾರ್ಮಿಕರು ಅನಾರೋಗ್ಯಕ್ಕೆ ತುತ್ತಾದಾಗ ಉಚಿತವಾಗಿ ಚಿಕಿತ್ಸೆಗಳು ದೊರೆಯಬೇಕು. ಆದರೆ ಯಾವ ಚಿಕಿತ್ಸೆಯೂ ದೊರೆಯತ್ತಿಲ್ಲ’ ಎನ್ನುವುದು ಕಾರ್ಮಿಕ ಹೋರಾಟಗಾರ ಆವರಗೆರೆ ವಾಸು ಅವರ ಅಭಿಪ್ರಾಯ.

ಪರಿಹಾರ, ಪರ್ಯಾಯ ಕಲ್ಪಿಸಲಿ:ಬೀಡಿ ಕಟ್ಟುವವರು ಬಡವರು. ತಂಬಾಕು ನಿಷೇಧ ಮಾಡಲು ಹೊರಟಿರುವ ಸರ್ಕಾರವು ಮೊದಲು ಪರಿಹಾರ ನೀಡಬೇಕು. ಜತೆಗೆ ಪರ್ಯಾಯ ಉದ್ಯೋಗವನ್ನೂ ಕಲ್ಪಿಸಬೇಕು ಎಂಬುದು ಆವರಗೆರೆ ವಾಸು ಅವರ ಒತ್ತಾಯವಾಗಿದೆ.

ಹಪ್ಪಳ ಸಂಡಿಗೆ ಮಾಡಿ ಎಂದು ತಿಪ್ಪೆ ಸಾರಿಸುವುದು ಪರ್ಯಾಯ ಉದ್ಯೋಗವಾಗುವುದಿಲ್ಲ. ಬೀಡಿ ಕಟ್ಟಲು ಎಲೆ, ತಂಬಾಕು, ದಾರಗಳನ್ನು ಕಂಪನಿಯಿಂದ ಮನೆಗೆ ಒಯ್ದು ಬೀಡಿ ಕಟ್ಟಿ ವಾಪಸ್ ಕೊಡುತ್ತಾರೆ. ಅದೇ ಮಾದರಿಯಲ್ಲಿ ಪರ್ಯಾಯ ಕಂಪನಿಗಳನ್ನು ತೆರೆದು ಕಚ್ಚಾ ವಸ್ತುಗಳನ್ನು ನೀಡಬೇಕು. ಆನಂತರ ಆ ಕಂಪನಿಗಳೇ ಸಂಗ್ರಹಿಸಿ ಮಾರಾಟ ಮಾಡಬೇಕು. ಮೇಣದ ಬತ್ತಿ, ಗಂಧದ ಕಡ್ಡಿ ಯಾವ ಗೃಹ ಕೈಗಾರಿಕೆಗಳನ್ನು ಮಾಡಿಸಲು ಸರ್ಕಾರ ಪ್ರೋತ್ಸಾಹಿಸುತ್ತದೆಯೋ ಅದು ಈ ಮಾದರಿಯಲ್ಲಿಯೇ ಇರಬೇಕು. ಯಾಕೆಂದರೆ ತಯಾರಿಸಿದ ವಸ್ತುಗಳಿಗೆ ಮಾರಾಟ ಮಾಡಲು ಬಡವರಿಗೆ ಕಷ್ಟ. ಅದನ್ನು ಕಂಪನಿಯೇ ಮಾಡಬೇಕು ಎಂಬುದು ಅವರ ಅಭಿಪ್ರಾಯ.

ಬೀಡಿ ಕಟ್ಟುವುದುನ್ನು ನಿಷೇಧಿಸಿದ ತಕ್ಷಣಕ್ಕೆ ಬೀಡಿ ಕಾರ್ಮಿಕರಿಗೆ ತಲಾ ₹ 5 ಲಕ್ಷ ಪರಿಹಾರ ನೀಡಬೇಕು. 60 ವರ್ಷ ದಾಟಿದ ಮೇಲೆ ಅವರಿಗೆ ₹ 3 ಸಾವಿರ ಪಿಂಚಣಿ ನೀಡಬೇಕು ಎಂಬುದು ಅವರ ಸಲಹೆ.

ಸಿದ್ಧಗೊಂಡ ಬೀಡಿಕಟ್ಟು

ಗುರುತಿಸುವ ಕೆಲಸ ಮೊದಲು ಮಾಡಿ:ನಗರದಲ್ಲಿ 15 ಸಾವಿರಕ್ಕೂ ಅಧಿಕ ಬೀಡಿ ಕಾರ್ಮಿಕರಿದ್ದಾರೆ. ಆದರೆ ಈ ಲೆಕ್ಕ ಸರ್ಕಾರದಲ್ಲಾಗಲಿ, ಕಾರ್ಮಿಕ ಇಲಾಖೆಯಲ್ಲಾಗಲಿ ಇಲ್ಲ. ಹಾಗಾಗಿ ಮೊದಲು ಬೀಡಿ ಕಾರ್ಮಿಕರನ್ನು ಗುರುತಿಸುವ ಕೆಲಸ ಮಾಡಬೇಕು. ಅವರಿಗೆ ಗುರುತಿನ ಚೀಟಿ ನೀಡಬೇಕು. ಇಎಸ್ಐ, ಪಿಂಚಣಿ, ವಿದ್ಯಾರ್ಥಿವೇತನ ಸಹಿತ ಬೇರೆ ಕಾರ್ಮಿಕರಿಗೆ, ಅವರ ಕುಟುಂಬಗಳಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ಬೀಡಿ ಕಾರ್ಮಿಕರಿಗೂ ಒದಗಿಸಬೇಕು ಎಂದು ನೆರಳು ಬೀಡಿ ಕಾರ್ಮಿಕರ ಯೂನಿಯನ್ನ ಜಬೀನಾ ಖಾನಂ ಒತ್ತಾಯಿಸಿದ್ದಾರೆ.

ಸಂಘಟನೆ ಮೂಲಕ ಹೋರಾಟ ಮಾಡಲು ಆರಂಭಿಸಿದ ಬಳಿಕ ಹಿರಿಯ ಬೀಡಿ ಕಾರ್ಮಿಕರಿಗೆ ಬೋನಸ್ ನೀಡಲಾಗುತ್ತಿದೆ. ಅದೂ ಬಹಳ ಸಣ್ಣ ಮೊತ್ತ. ಬೀಡಿ ಕಟ್ಟುವ ಎಲ್ಲರಿಗೂ ಬೋನಸ್ ಸಿಗಬೇಕು. ಜತೆಗೆ ಉಳಿದ ಸೌಲಭ್ಯ ಸಿಗಬೇಕು. ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಇರುವಂತೆ ಬೀಡಿ ಕಾರ್ಮಿಕರಿಗೂ ಪ್ರತ್ಯೇಕ ಮಂಡಳಿ ಸ್ಥಾಪಿಸಬೇಕು ಎಂಬುದು ಅವರ ಬೇಡಿಕೆ.

ಬೇಡಿಕೆಗಳು

ದಿನಗೂಲಿ ಕನಿಷ್ಠ ₹ 650 ನೀಡಬೇಕು. ಒಂದು ಕೆ.ಜಿ. ಎಲೆಗೆ ವೈಜ್ಞಾನಿಕವಾಗಿ 1800 ಬೀಡಿ ಮಾತ್ರ ಬರುತ್ತದೆ. ಅಷ್ಟಕ್ಕೆ ನಿಗದಿ ಮಾಡಬೇಕು. ಒಂದು ಕೆ.ಜಿ. ಹೆಚ್ಚು ಬೀಡಿ ನಿಗದಿ ಮಾಡಿ ದಂಡದ ರೂಪದಲ್ಲಿ ಪಗಾರ ಮುರಿದುಕೊಳ್ಳಬಾರದು. ಇಪಿಎಫ್, ಇಎಸ್ಐ, ಪಿಂಚಣಿ, ಆರೋಗ್ಯ, ಶಿಕ್ಷಣ ಸಹಿತ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ಬೀಡಿ ನೀಷೇಧ ಮಾಡಿದರೆ, ಬೀಡಿಯಂತೆ ಮನೆಯಲ್ಲಿಯೇ ತಯಾರಿಸಿ ಕಂಪನಿಗಳಿಗೆ ನೀಡುವ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು.ಬೀಡಿ ಕಾರ್ಮಿಕರನ್ನು ಗುರುತಿಸಿ ಗುರುತಿನ ಚೀಟಿ ನೀಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.