ದಾವಣಗೆರೆ: ನಕಲಿ ದಾಖಲೆ ಸೃಷ್ಟಿಸಿ ಬೇರೆವರ ನಿವೇಶನ ಮಾರಾಟ ಮಾಡಿದ ಪ್ರಕರಣದಲ್ಲಿ ಆರ್‌ಟಿಐ ಕಾರ್ಯಕರ್ತ, ಸಬ್‌ರಿಜಿಸ್ಟ್ರಾರ್ ಸೇರಿದಂತೆ ಐವರ ಮೇಲೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆ. ಜಯಶ್ರೀ ಅವರು ಆವರಗೆರೆಯಲ್ಲಿ ಮೂರು ನಿವೇಶನ ಹೊಂದಿದ್ದರು. ಈ ಜಮೀನನ್ನು ಜಯಶ್ರೀ ಎಂಬ ಹೆಸರಿನ ಬೇರೆ ಮಹಿಳೆಯನ್ನು ಕರೆದುಕೊಂಡು ಬಂದು ಅವರು ಎಚ್.ಆರ್. ಹರೀಶ್ ಅವರಿಗೆ ಮಾರಾಟ ಮಾಡಿದಂತೆ ಸೇಲ್‌ಡೀಡ್ ಮಾಡಿ ವಂಚಿಸಲಾಗಿತ್ತು. ಆರ್‌ಟಿಐ ಕಾರ್ಯಕರ್ತನಾಗಿರುವ ಎಚ್.ಆರ್. ಹರೀಶ್, ಹಿರಿಯ ಉಪನೋಂದಣಾಧಿಕಾರಿ ಸೇರಿಕೊಂಡು ಈ ರೀತಿ ವಂಚನೆ ಮಾಡಿದ್ದರು. ಲಿಂಗರಾಜು ಬಿ. ಸಹಕಾರ ನೀಡಿದ್ದರು. ನಿಜವಾದ ಖಾತೆದಾರರಾದ ಕೆ. ಜಯಶ್ರೀ ನೀಡಿದ ದೂರಿನಂತೆ ಎಚ್.ಆರ್. ಹರೀಶ್, ಹಿರಿಯ ಉಪನೋಂದಣಾಧಿಕಾರಿ, ಲಿಂಗಾರಾಜು ಬಿ., ಜಯಶ್ರೀ ತಾನು ಎಂದು ಬಂದಿದ್ದ ಅಪರಿಚಿತ ಮಹಿಳೆ, ಅವರ ಜತೆಗೆ ಸಹಕರಿಸಿದ್ದ ಮತ್ತೊಬ್ಬ ಅಪರಿಚಿತನ ವಿರುದ್ಧ ಪ್ರಕರಣ ದಾಖಲಾಗಿದೆ.

ಕ್ರಮಕ್ಕೆ ಆಗ್ರಹ: ಎಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಇದೇ ರೀತಿ ಎಷ್ಟೋ ಮಂದಿಗೆ ವಂಚನೆಯಾಗಿರಬಹುದು. ಅವೆಲ್ಲವನ್ನು ತನಿಖೆ ಮಾಡಬೇಕು ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಣಜಾರ ಕೆಂಪರಾಜ್, ಕೃಷ್ಣಮೂರ್ತಿ, ಜಯಶ್ರೀ ಅವರ ಪತಿ ಕೆ. ಬಾಬುರಾವ್, ಅವರ ಮಗ ಕೆ. ಮುರಳಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.