ಮಾಯಕೊಂಡ: ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಮಾಯಕೊಂಡ ಕ್ಷೇತ್ರದ ಕೊಡುಗೆ ಅಪಾರ. ಜಿಲ್ಲೆಯಲ್ಲಿಯೇ ಹೆಚ್ಚಿನ ಹೋರಾಟಗಾರರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಿದ್ದರು.

1942ರಲ್ಲಿ ದಾವಣಗೆರೆಯಲ್ಲಿ ಹೋರಾಟಗಾರರ ಮೇಲೆ ಗುಂಡಿನ ದಾಳಿ ನಡೆದ ವಿಚಾರ ತಿಳಿಯುತ್ತಿದ್ದಂತೆಯೇ ಮಾಯಕೊಂಡದ ಹೋರಾಟಗಾರರು ರೈಲು ಹಳಿಗಳನ್ನು ಕಿತ್ತು ಪ್ರತಿಭಟಿಸಿದರು. ರೈಲು ನಿಲ್ದಾಣ, ಸರ್ಕಾರಿ ಕಚೇರಿಗಳಿಗೆ ನುಗ್ಗಿ ಬೆಂಕಿ ಹಚ್ಚಿದರು. ಬ್ರಿಟಿಷರ ಸಾರಾಯಿ ಉತ್ಪಾದನಾ ಕೇಂದ್ರಗಳನ್ನು ನಾಶಪಡಿಸಿದರು. ಟೆಲಿಫೋನ್ ತಂತಿಗಳನ್ನು ಕತ್ತರಿಸಿ, ಕಂಬಗಳನ್ನು ಮುರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು.

ಸುಶಿಕ್ಷಿತರಾಗಿದ್ದ ಗ್ರಾಮದ ಬೊಮ್ಮಣ್ಣ ಗೋಗಿ ಅವರು ಬ್ರಿಟಿಷರ ವಿರುದ್ಧ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಿ, ಪ್ರತಿಯೊಬ್ಬರನ್ನೂ ಒಟ್ಟುಗೂಡಿಸುತ್ತಿದ್ದರು. ಪರಿಣಾಮವಾಗಿ ಜೈಲುವಾಸ, ಅಜ್ಞಾತವಾಸ ಅನುಭವಿಸಿದರು.

ಸ್ವಾತಂತ್ರ್ಯ ಹೋರಾಟದ ಕುರಿತು ಲಾವಣಿಗಳನ್ನು ರಚಿಸಿ, ಹಾಡುವ ಮೂಲಕ ಜನರನ್ನು ಬಡಿದೆಬ್ಬಿಸುವ ಕೆಲಸವನ್ನು ಲಾವಣಿ ಗೋವಿಂದಪ್ಪ ಮಾಡಿದ್ದರು.

ಇವರಲ್ಲದೇ ನಾಗಲಿಂಗಾಚಾರ್, ವಿಶ್ವನಾಥಾಚಾರ್, ದುರ್ಗದ ಗಂಗಣ್ಣ, ಗಂಗಮ್ಮ, ಕಟಗ ಗುಡ್ಡಜ್ಜ, ತೋಳ ಹನುಮಣ್ಣ, ಹಾಲವರ್ತಿ ಭೀಮಣ್ಣ, ದಾಸಪ್ಪ, ಕೊಕ್ಕಜ್ಜ, ಶೇಷಗಿರಿ ಪುಟ್ಟಪ್ಪ, ಕಲ್ಲುಕುಂಟೆ ಬೋರಪ್ಪ, ಗಿಡ್ಡ ಗಂಗಜ್ಜ, ತಿಮ್ಲಾಪುರ ಈರಳಪ್ಪ, ಪೂರ್ವಾಚಾರ್, ಮಸಿಯಪ್ಪ, ಉಳ್ಳಾಗಡ್ಡೆ ಭೀಮಣ್ಣ, ಕೃಷ್ಣಪ್ಪ, ಉಪ್ಪಾರ ಹಾಲಪ್ಪ ಸೇರಿದಂತೆ ನೂರಾರು ಮಂದಿ ಹೋರಾಟದ ಮುಂಚೂಣಿಯಲ್ಲಿದ್ದು, ಬ್ರಿಟಿಷರಿಂದ ಲಾಠಿ ಏಟು, ಜೈಲೂಟದ ರುಚಿ ಕಂಡಿದ್ದರು. ದೇಶ ಸ್ವತಂತ್ರವಾದ ನಂತರದಲ್ಲಿ ಹಿಗ್ಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.