ಹೊನ್ನಾಳಿ: ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ಕುಮಾರ್ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಹೊನ್ನಾಳಿಯಲ್ಲಿ ಶುಕ್ರವಾರ ಬೃಹತ್ ಬೈಕ್ ರ್ಯಾಲಿ ಹಾಗೂ ರೋಡ್ ಶೋ ನಡೆಸಿದರು.

‘ನಾನು ಜಿಲ್ಲೆಯಲ್ಲಿ ಅಂದಾಜು 650 ಕಿ.ಮೀ. ಪಾದಯಾತ್ರೆ ಕೈಗೊಂಡಿದ್ದು, 800ಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಈ ಹಿಂದೆ ಕ್ಷೇತ್ರದಲ್ಲಿ ಗೆದ್ದಂತಹ ಯಾವುದೇ ಸಂಸದರು ಹಾಗೂ ಸಚಿವರು ಒಮ್ಮೆಯೂ ಒಂದು ಹಳ್ಳಿಗೂ ಭೇಟಿ ನೀಡಿಲ್ಲ. ಇಂತಹ ಜನಪ್ರತಿನಿಧಿಗಳು ಕ್ಷೇತ್ರಕ್ಕೆ ಬೇಕಾ’ ಎಂದು ವಿನಯ್ಕುಮಾರ್ ಪ್ರಶ್ನಿಸಿದರು.

‘ಜನರ ಮುಖವನ್ನೇ ನೋಡಿರದ ಜನಪ್ರತಿನಿಧಿಗಳು ಈಗ ಬರುತ್ತಾರೆಂದರೆ ಅದಕ್ಕೆ ತಕ್ಕ ಉತ್ತರವನ್ನು ನೀವೇ ನೀಡಬೇಕು ಎಂದರು.

‘ಅವರು ಜನಸೇವೆ ಮಾಡಲು ಬಂದಿಲ್ಲ. ಬದಲಿಗೆ ತಮ್ಮ ಆಸ್ತಿ, ಅಂತಸ್ತು, ಅಧಿಕಾರವನ್ನು ಉಳಿಸಿಕೊಳ್ಳಲು ಬಂದಿದ್ದಾರೆ. ಜಿಲ್ಲೆಯ ಮತದಾರರು ಅವರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಮನವಿ ಮಾಡಿದರು.

ಚುನಾವಣಾ ಆಯೋಗವು ನನಗೆ ಸಿಲಿಂಡರ್ ಗುರುತು ನೀಡಿದ್ದು, ಮತದಾರರು ಸಿಲಿಂಡರ್ ಗುರುತಿಗೆ ಮತ ನೀಡಿ ನನ್ನನ್ನು ಗೆಲ್ಲಿಸುವ ಮೂಲಕ ಜನಸೇವೆ ಮಾಡಲು ಆರ್ಶೀವಾದ ಮಾಡಬೇಕು ಎಂದದು ಹೇಳಿದರು.

ಜಿಲ್ಲೆಯ ಜನರು, ಇಬ್ಬರ ಜಗಳ ಮೂರನೇಯವರಿಗೆ ಲಾಭ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಕೆಲವರು ಜಾತಿ ಹಿಡಿದು ರಾಜಕೀಯ ಮಾಡುತ್ತಾರೆ. ಇನ್ನೂ ಕೆಲವರು ಅಧಿಕಾರದ ದರ್ಪದಿಂದ ಮಾತನಾಡುತ್ತಾರೆ. ಇಬ್ಬರನ್ನೂ ಕಡೆಗಣಿಸಿ ನಿಮ್ಮ ಮಗನಂತಿರುವ ನನಗೆ ಮತನೀಡಿ ಎಂದು ಮನವಿ ಮಾಡಿದರು.

ಹೊನ್ನಾಳಿ ಟಿ.ಬಿ. ವೃತ್ತದಿಂದ ಬೈಕ್ ರ್ಯಾಲಿ ಹೊರಟು 20 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರವಾಸ ಮಾಡಿತು.

ಈ ಸಂದರ್ಭದಲ್ಲಿ ಮಾಜಿ ಸೈನಿಕ ಎಂ. ವಾಸಪ್ಪ, ಹಳ್ಳಿ ಬಾಬು, ಯುವಸೇನೆ ಅಧ್ಯಕ್ಷ ಮಂಜು, ದೇವರಾಜ್, ದಿಡಗೂರು ಸುದೀಪ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.