ಹೊನ್ನಾಳಿ: ಹೊನ್ನಾಳಿ ತಾಲ್ಲೂಕಿನ ಚಲನಚಿತ್ರ ನಿರ್ದೇಶಕ ಕುಂದೂರು ಹರೀಶ್‍ರಾಜ್ ಅವರ ನಿರ್ದೇಶನದ ಕಾಮಧೇನು ಚಿತ್ರ ಸೋಮವಾರ ಬೆಂಗಳೂರಿನ ಓರಿಯನ್ ಮಾಲ್‌ನಲ್ಲಿ ಪ್ರದರ್ಶನಗೊಳ್ಳಲಿದೆ.

ವಾರ್ತಾ ಇಲಾಖೆ ಹಾಗೂ ಚಲನಚಿತ್ರ ಅಕಾಡೆಮಿ ಆಯೋಜಿಸಿರುವ 14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಕನ್ನಡದ ಪನೋರಮಾ ಚಿತ್ರಗಳ ವಿಶೇಷ ಪ್ರದರ್ಶನ ವಿಭಾಗದಲ್ಲಿ ಪ್ರದರ್ಶನಗೊಳ್ಳುವ ಚಿತ್ರಗಳ ಪೈಕಿ ‘ಕಾಮಧೇನು’ ಕೂಡ ಒಂದು ಎಂದು ಹರೀಶ್‍ರಾಜ್ ಕುಂದೂರು ಪತ್ರಿಕೆಗೆ ಮಾಹಿತಿ ನೀಡಿದರು.

‘ಸೋಮವಾರ ಬೆಳಿಗ್ಗೆ 9.30ಕ್ಕೆ ಓರಿಯನ್ ಮಾಲ್ ಸ್ಕ್ರೀನ್ ನಂಬರ್ 8ರಲ್ಲಿ ನಮ್ಮ ಕಾಮಧೇನು ಚಲನಚಿತ್ರ ಪ್ರದರ್ಶನಗೊಳ್ಳಲಿದೆ. ಆದ್ದರಿಂದ ಗ್ರಾಮೀಣ ಪ್ರತಿಭೆಯಾದ ನನಗೆ ನಿಮ್ಮೆಲ್ಲರ ಮಾರ್ಗದರ್ಶನ ಮತ್ತು ಸಹಕಾರ ಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಈ ಚಲನಚಿತ್ರೋತ್ವದಲ್ಲಿ ‘ಕಾಂತಾರ’, ‘ವಿಕ್ರಾಂತ್ ರೋಣ’, ‘ವದನ’, ‘ಹೆಡ್‍ಬುಷ್’, ‘ಗಾಳಿಪಟ–2’ ಚಿತ್ರಗಳೊಂದಿಗೆ ಕಾಮಧೇನು ಚಿತ್ರವೂ ಪ್ರದರ್ಶನಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

ಹರೀಶ ರಾಜ್ ಅವರು ಈ ಹಿಂದೆ ‘ವರ್ಣಮಯ’ ಎಂಬ ಹಾರರ್ ಸಿನಿಮಾದ ಸಹ ನಿರ್ದೇಶಕರಾಗಿ ಹಾಗೂ ಚಿತ್ರದ ನಾಯಕನಟರಾಗಿದ್ದರು.

ಹೊನ್ನಾಳಿ ತಾಲ್ಲೂಕಿನ ಕುಂದೂರು ಗ್ರಾಮದ ಹರೀಶ್‌ರಾಜ್ ಅವರು ಗ್ರಾಮೀಣ ಪ್ರತಿಭೆ. ಅವರು ತಮಗೆ ಸಿಕ್ಕಿದ್ದ ಪೊಲೀಸ್ ಇಲಾಖೆಯ ನೌಕರಿ ಬಿಟ್ಟು ಬಣ್ಣದ ಲೋಕಕ್ಕೆ ಬಂದವರು. ಸಮಾನ ಮನಸ್ಕರಾದ ವಂಶಿ ಮತ್ತು ಹರೀಶ್ ಇಬ್ಬರೂ 2016ರಲ್ಲಿ ‘ಪುಟಾಣಿ ಸಪಾರಿ’ ಎಂಬ ಮಕ್ಕಳ ಸಿನಿಮಾವನ್ನು ಸಿನಿರಂಗಕ್ಕೆ ನೀಡಿದ್ದಾರೆ.

ಖಾಸಗಿ ಚಾನೆಲ್‌ಗಳಲ್ಲಿ ಪ್ರಸಾರವಾದ ‘ಆರದಿರಲಿ ಬೆಳಕು’ ಧಾರವಾಹಿಗೆ ಸಹ ನಿರ್ದೇಶಕರಾಗಿ, ‘ಮಾಂಗಲ್ಯ’ ಧಾರಾವಾಹಿಗೆ ಎಪಿಸೋಡ್ ಡೈರೆಕ್ಟರ್ ಆಗಿ, ‘ಕರ್ಪೂರದ ಗೊಂಬೆ‘ಯಲ್ಲಿ ನಾಟಕ ನಟನಾಗಿ ಹಲವು ಧಾರಾವಾಹಿಗಳನ್ನು ನಿರ್ದೇಶನ ಮಾಡಿದ್ದಾರೆ.

ಸ್ವತಂತ್ರ ನಿರ್ದೇಶನದಲ್ಲಿ ‘ಮಲ್ಲಿಗೆ‘ ಧಾರಾವಾಹಿಯನ್ನು ಚಂದನವಾಹಿನಿಗೆ ನೀಡಿದ್ದಾರೆ. ಹಿರಿತೆರೆಗೆ ‘ಪೂಜಾರಿ’, ‘ಹನಿ ಹನಿ’, ‘ಶಾರ್ಪ್ ಶೂಟರ್’, ‘ಸ್ಟೇಟ್‍ಮೆಂಟ್ 18/11’ 15 ಸಿನಿಮಾಗಳಲ್ಲಿ ನಟರಾಗಿ, ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಶಿವರಾಜ್ ಕುಮಾರ್ ಅವರ ನಟನೆಯ ದ್ರೋಣ ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.