ದಾವಣಗೆರೆ: ಸಿನಿಮಾಗಳಿಗೆ ರೇಟಿಂಗ್ಸ್ ನೀಡುವ ‘ಬುಕ್ ಮೈ ಶೋ’ ಹಿಂದೆ ದೊಡ್ಡ ಮಾಫಿಯಾ ಅಡಗಿದೆ ಎಂದು ವೀಕ್ ಎಂಡ್ ಚಿತ್ರದ ನಿರ್ಮಾಪಕ ಮಂಜುನಾಥ್ ಡಿ. ಆರೋಪಿಸಿದರು.

‘ಕೆಲವರು ’ಬುಕ್ ಮೈ ಶೋ’ ಆ್ಯಪ್ನಲ್ಲಿ ರೇಟಿಂಗ್ಸ್ ನೋಡಿ ಸಿನಿಮಾಕ್ಕೆ ಹೋಗುತ್ತಾರೆ. ಆದರೆ ರೇಟಿಂಗ್ಸ್ ನೀಡಲು ಹಣ ತೆಗೆದುಕೊಳ್ಳುತ್ತಾರೆ. ಮಹಿಳೆಯೊಬ್ಬರು ಕರೆ ಮಾಡಿ ನಿಮ್ಮ ಸಿನಿಮಾಕ್ಕೆ ರೇಟಿಂಗ್ಸ್ ನಿರ್ವಹಣೆ ಮಾಡುತ್ತೇವೆ ಹಣ ನೀಡಿ ಎಂದು ಕೇಳಿದ್ದರು. ನಾನು ಅದಕ್ಕೆ ಒಪ್ಪಲಿಲ್ಲ. ಸಿನಿಮಾ ಬಿಡುಗಡೆಯಾಗುವ ದಿವಸ ಶೇ 86 ದರ ಇದ್ದುದು ಶೇ 20ಕ್ಕೆ ಇಳಿಯಿತು. ಈ ಮಾಫಿಯಾಕ್ಕೆ ನಾನು ಬಲಿಯಾದೆ’ ಎಂದು ಹೇಳಿದರು.

‘ವೀಕ್ ಎಂಡ್’ ಇವತ್ತಿನ ಪೀಳಿಗೆ ವಾರದ ಕೊನೆಯ ದಿವಸ ಮೋಜು, ಮಸ್ತಿ, ತಪ್ಪು ಬದ್ಧತೆಗಳಿಂದಾಗಿ (ರಾಂಗ್ ಕಮಿಟ್ಮೆಂಟ್) ಹೇಗೆ ದಾರಿ ತಪ್ಪುತ್ತಿದ್ದಾರೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಹಾಗೇಯೇ ನೋಟಿಸ್ ನೀಡದೆಯೇ ಕೆಲಸದಿಂದ ಹೊರ ಹಾಕಿದಾಗ ಅವರ ಪಾಡು ಏನು ಎಂಬುದನ್ನು ಚಿತ್ರದಲ್ಲಿ ತಿಳಿಸಲಾಗಿದೆ. ಇಂದಿನ ಪೀಳಿಗೆಗೆ ಇದು ಉಪಯುಕ್ತ ಚಿತ್ರ’ ಎಂದು ಹೇಳಿದರು.

ಚಿತ್ರದ ನಿರ್ದೇಶಕ ಶೃಂಗೇರಿ ಸುರೇಶ್, ‘ಥಿಯೇಟರ್ ಕೊರತೆ ಇದ್ದುದರಿಂದ ತರಾತುರಿಯಾಗಿ ಕಳೆದ ವಾರ ಸಿನಿಮಾ ಬಿಡುಗಡೆ ಮಾಡಿದ್ದೇವೆ. ರಾಜ್ಯದಾದ್ಯಂತ 140 ಥಿಯೇಟರ್ಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಾವಣಗೆರೆಯಲ್ಲಿ ಪುಷ್ಪಾಂಜಲಿ ಥಿಯೇಟರ್ನಲ್ಲಿ ಪ್ರದರ್ಶನ ಕಾಣುತ್ತಿದೆ’ ಎಂದರು.

ಚಿತ್ರದ ನಟ ಮಿಲಿಂದ್ ಮಾತನಾಡಿ, ‘ನಾನೊಬ್ಬ ಮೆಕ್ಯಾನಿಕಲ್ ಎಂಜಿನಿಯರ್ ವಿದ್ಯಾರ್ಥಿ. ನಿರ್ದೇಶಕರು ಈ ಚಿತ್ರದ ಕಥೆ ಹೇಳಿದಾಗ ಒಂದು ಸಂದೇಶವಿದೆ ಎಂದು ಒಪ್ಪಿಕೊಂಡೆ. ಇದೇ ಪ್ರಥಮ ಬಾರಿಗೆ ನಟಿಸಿದ್ದೇನೆ. ಚಿತ್ರ ನೋಡಿದವರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದರು.

ಬಿಜೆಪಿ ಮುಖಂಡ ಹೇಮಂತ್ ಕುಮಾರ್, ಸುದೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.